For Quick Alerts
  ALLOW NOTIFICATIONS  
  For Daily Alerts

  ವೇದ ವಿಜಯಯಾತ್ರೆ: ಶಿವಣ್ಣನನ್ನು ನೋಡಲು ಕಿಕ್ಕಿರಿದು ಜಮಾಯಿಸಿದ ಜನರು

  |

  ನಿರ್ದೇಶಕ ಎ ಹರ್ಷ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಅವರಿಗೆ ನಾಲ್ಕನೇ ಬಾರಿಗೆ ವೇದ ಚಿತ್ರದ ಮೂಲಕ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಬಂದಿದ್ದ ಎ ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್‌ಗಳಿಗಿಂತ ವೇದ ಭಿನ್ನವಾಗಿದ್ದು, ಚಿತ್ರ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಶಿವ ರಾಜ್‌ಕುಮಾರ್ ವಿಭಿನ್ನ ಲುಕ್ ಹಾಗೂ ನಟನೆಗೆ ಸಿನಿ ರಸಿಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಅದಿತಿ ಸಾಗರ್, ಉಮಾಶ್ರೀ, ಶ್ವೇತಾ ಚೆಂಗಪ್ಪ ಹಾಗೂ ವೀಣಾ ಪೊನ್ನಪ್ಪ ಸಹ ಅದ್ಭುತ ಅಭಿನಯ ಮಾಡಿ ಜನರ ಮನ ಗೆದ್ದಿದ್ದಾರೆ.

  ಶಿವ ರಾಜ್‌ಕುಮಾರ್ 125ನೇ ಚಿತ್ರವಾಗಿರುವ ವೇದ ಕೇವಲ 125ನೇ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೇ ತನ್ನ ಕಂಟೆಂಟ್‌ನಿಂದ ಸದ್ದು ಮಾಡಲಾರಂಭಿಸಿದೆ. ಸಿನಿ ರಸಿಕರು ತಮ್ಮ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಹೀಗೆ ಫ್ಯಾಮಿಲಿ ಆಡಿಯನ್ಸ್ ಅನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ವೇದ ಬ್ಲಾಕ್ ಬಸ್ಟರ್ ಆಗಿದೆ.

  ಹೀಗೆ ಚಿತ್ರ ಗೆದ್ದ ಕಾರಣ ವೇದ ಚಿತ್ರತಂಡ ವಿಜಯ ಯಾತ್ರೆಯನ್ನು ಆರಂಭಿಸಿದೆ. ಮೊದಲಿಗೆ ಕ್ರಿಸ್‌ಮಸ್ ದಿನದಂದು ಬೆಂಗಳೂರಿನ ಮುಖ್ಯ ಚಿತ್ರಮಂದಿರ ನರ್ತಕಿ, ಪ್ರಸನ್ನ, ವೀರೇಶ್ ಹಾಗೂ ಒರಾಯನ್ ಪಿವಿಆರ್‌ಗೆ ಭೇಟಿ ನೀಡಿದ್ದ ವೇದ ಚಿತ್ರತಂಡ ಸೋಮವಾರ ಮೈಸೂರು ಹಾಗೂ ನಿನ್ನೆ (ಡಿಸೆಂಬರ್ 27 ) ಮೈಸೂರು ಜಿಲ್ಲೆಯ ಚಿತ್ರಮಂದಿರಗಳಿಗೆ ಭೇಟಿ ನೀಡಿದೆ.

  ಇನ್ನು ಮೈಸೂರು ಜಿಲ್ಲೆಯ ತಿರುಮಕೂಡಲು ನರಸಿಪುರ ಪಟ್ಟಣದ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಶಿವ ರಾಜ್‌ಕುಮಾರ್ ಅವರನ್ನು ನೋಡಲು ಅಲ್ಲಿನ ಜನ ಕಿಕ್ಕಿರಿದು ತುಂಬಿದ್ದರು ಹಾಗೂ ಕೆಲ ಕಾಲ ಅಲ್ಲಿ ವಾಹನ ಸಂಚಾರ ಅಸ್ತವ್ಯಸ್ತ ಕೂಡ ಆಗಿತ್ತು. ಶಿವ ರಾಜ್‌ಕುಮಾರ್ ಅವರನ್ನು ನೋಡಲು ಅಲ್ಲಿ ನೆರೆದಿದ್ದ ಜನಸ್ತೋಮದ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಯಸ್ಸಿನಲ್ಲೂ ಇಷ್ಟರ ಮಟ್ಟಿಗೆ ಜನರನ್ನು ರಂಜಿಸಿ ಜನರ ಗುಂಪು ಸೇರುವ ಹಾಗೆ ಮಾಡುವ ಶಿವಣ್ಣ ಕುರಿತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇನ್ನು ಇಂದು ( ಡಿಸೆಂಬರ್ 28 ) ಕೊಳ್ಳೇಗಾಲ, ಮಳವಳ್ಳಿ, ಮದ್ದೂರು, ಮಂಡ್ಯ ಹಾಗೂ ರಾಮನಗರದ ಚಿತ್ರಮಂದಿರಗಳಿಗೆ ಶಿವ ರಾಜ್‌ಕುಮಾರ್ ಆಗಮಿಸಲಿದ್ದಾರೆ.

  English summary
  Huge crowd gathered at T Narasipura to see Shiva Rajkumar during Vedha success tour
  Wednesday, December 28, 2022, 7:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X