For Quick Alerts
  ALLOW NOTIFICATIONS  
  For Daily Alerts

  ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಘೋರ ಅವಮಾನ: ಇಂಥ ಮಾಲ್ ಗಳು ಬೇಕಾ.?

  By Harshitha
  |

  ವಿಶಾಲ ಹೃದಯ ಇರುವ ಕನ್ನಡಿಗರೆಲ್ಲ ಈ ಸುದ್ದಿಯನ್ನ ತಪ್ಪದೇ ಓದಿ.... ಯಾಕಂದ್ರೆ, ಕನ್ನಡಕ್ಕೆ... ಕನ್ನಡಿಗರಿಗೆ.. ಕನ್ನಡ ಸಿನಿಮಾಗೆ... ಕನ್ನಡ ಸಿನಿ ಪ್ರೇಕ್ಷಕರಿಗೆ ಕನ್ನಡ ನೆಲದಲ್ಲಿಯೇ ಅವಮಾನ ಮಾಡಿರುವ ಘೋರ ಘಟನೆ ನಿನ್ನೆ ರಾತ್ರಿ ನಡೆದಿದೆ. [ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ನಾಚಿಕೆ ಆಗಬೇಕು..ಥೂ.!]

  ಕೊಡಬೇಕಾದ ಕಾಸು ಕೊಟ್ಟು.. ಕನ್ನಡ ಚಿತ್ರ ನೋಡಲು ಮಲ್ಟಿಪ್ಲೆಕ್ಸ್ ಗೆ ಹೋದರೆ, ಕನ್ನಡಿಗರು ಸೆಖೆಯಲ್ಲಿ ಕೂತು ಕನ್ನಡ ಸಿನಿಮಾ ನೋಡಬೇಕಂತೆ. ಪರಭಾಷೆಯ ಚಿತ್ರಗಳಿಗೆ ಎ.ಸಿ ಹಾಕುವ ಮಲ್ಟಿಪ್ಲೆಕ್ಸ್ ನವರು ಕನ್ನಡ ಚಿತ್ರಗಳಿಗೆ ಅಂತಹ ಸೌಲಭ್ಯ ನೀಡುತ್ತಿಲ್ಲ. ಇದೇ ವಿಚಾರಕ್ಕೆ ನಿನ್ನೆ ಬೆಂಗಳೂರಿನ ನಾಗವಾರ ಬಳಿ ಇರುವ ಎಲಿಮೆಂಟ್ಸ್ ಮಾಲ್ ನಲ್ಲಿ ದೊಡ್ಡ ಗಲಾಟೆ ನಡೆದಿದೆ.

  ನಿನ್ನೆ ರಾತ್ರಿ ನಡೆದದ್ದು ಏನು.?

  ನಿನ್ನೆ ರಾತ್ರಿ ನಡೆದದ್ದು ಏನು.?

  ಬೆಂಗಳೂರಿನ ನಾಗವಾರ ಬಳಿ ಇರುವ ಎಲಿಮೆಂಟ್ಸ್ ಮಾಲ್ ನ ಪಿ.ವಿ.ಆರ್ ನಲ್ಲಿ ನಿನ್ನೆ ರಾತ್ರಿ 10ಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಪ್ರದರ್ಶನ ಇತ್ತು. ಹೇಳಿ ಕೇಳಿ 'ರಾಜಕುಮಾರ' ಫ್ಯಾಮಿಲಿ ಆಡಿಯನ್ಸ್ ಗೆ ಹೇಳಿ ಮಾಡಿಸಿದ ಸಿನಿಮಾ. ಹೀಗಾಗಿ ಕುಟುಂಬದ ಸಮೇತ ಎಲ್ಲರೂ 'ರಾಜಕುಮಾರ' ಚಿತ್ರ ನೋಡುತ್ತಿರುವುದರಿಂದ ನಿನ್ನೆ ರಾತ್ರಿ 10 ಗಂಟೆ ಶೋ ಹೌಸ್ ಫುಲ್ ಆಗಿತ್ತು. ['ಐನಾಕ್ಸ್ ಗರುಡ' ಅನ್ಯಾಯದ ಬಗ್ಗೆ ಗುಡುಗಿದ ಕನ್ನಡ ಸಿನಿ ಪ್ರೇಕ್ಷಕ.!]

  ಎ.ಸಿ ಪ್ರಾಬ್ಲಂ.!

  ಎ.ಸಿ ಪ್ರಾಬ್ಲಂ.!

  ಜನ ತುಂಬಿ ತುಳುಕುವ ಥಿಯೇಟರ್ ನಲ್ಲಿ ಗಾಳಿ ಇಲ್ಲದಿದ್ದರೆ ಹೇಗೆ ಹೇಳಿ..? ಅದ್ರಲ್ಲೂ ಈಗ ಬೇಸಿಗೆ ಕಾಲ. ಹೀಗಿರುವಾಗ, ಎಲಿಮೆಂಟ್ಸ್ ಮಾಲ್ ನ ಪಿ.ವಿ.ಆರ್ ನಲ್ಲಿ 'ರಾಜಕುಮಾರ' ಚಿತ್ರ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಎ.ಸಿ ಭಾಗ್ಯ ಸಿಗಲಿಲ್ಲ. ಸೆಖೆಯಲ್ಲಿ ಕೂತು 'ರಾಜಕುಮಾರ' ನೋಡುವಂತಹ ಪರಿಸ್ಥಿತಿ ಎದುರಾಯ್ತು. [ಕೊನೆಗೂ ಕನ್ನಡ ಸಿನಿಪ್ರಿಯರ ಬೇಡಿಕೆ ಈಡೇರುತ್ತಾ.?]

  ದೊಡ್ಡೋರಿಗೆ ಕಿರಿಕಿರಿ ಆಯ್ತು: ಮಕ್ಕಳು 'ಗೊಳೋ' ಎಂದರು.!

  ದೊಡ್ಡೋರಿಗೆ ಕಿರಿಕಿರಿ ಆಯ್ತು: ಮಕ್ಕಳು 'ಗೊಳೋ' ಎಂದರು.!

  ಸೆಖೆ ಜಾಸ್ತಿ ಆದ ಹಾಗೆ ದೊಡ್ಡವರಿಗೆ ಕಿರಿಕಿರಿ ಹೆಚ್ಚಾಯ್ತು. ಪುಟಾಣಿ ಮಕ್ಕಳು 'ಗೊಳೋ' ಅಂತ ಅಳಲು ಆರಂಭಿಸಿದ್ವು. ಇದನ್ನ ಕಂಡ ಕೆಲವರು ಮಲ್ಟಿಪ್ಲೆಕ್ಸ್ ಸಿಬ್ಬಂದಿ ಬಳಿ ಎ.ಸಿ ಆನ್ ಮಾಡುವಂತೆ ಕೇಳಿಕೊಂಡರು. ಆಗ ಆ ಸಿಬ್ಬಂದಿ ಹೇಳಿದ್ದೇನು ಗೊತ್ತಾ.?

  ಉದ್ದಟತನ ಪ್ರದರ್ಶನ

  ಉದ್ದಟತನ ಪ್ರದರ್ಶನ

  ''ಕನ್ನಡ ಸಿನಿಮಾಗೆ ಎ.ಸಿ ಹಾಕಲ್ಲ. ಬೇಕಾದವರು ಸಿನಿಮಾ ನೋಡ್ಬಹುದು. ಇಲ್ಲಾಂದ್ರೆ ಎದ್ದು ಹೋಗ್ಬಹುದು'' ಅಂತ ಮಲ್ಟಿಪ್ಲೆಕ್ಸ್ ಸಿಬ್ಬಂದಿ ಹೇಳಿದರು. ಇದನ್ನ ಕೇಳಿಸಿಕೊಂಡ ಕನ್ನಡಿಗರು ರೊಚ್ಚಿಗೆದ್ದರು.

  ಪಿ.ವಿ.ಆರ್ ಡೌನ್ ಡೌನ್

  ಪಿ.ವಿ.ಆರ್ ಡೌನ್ ಡೌನ್

  ''ಎ.ಸಿ ಹಾಕಿಲ್ಲ ಅಂದ್ರೂ ತೊಂದರೆ ಇಲ್ಲ. ಕನ್ನಡ ಸಿನಿಮಾಗಳಿಗೆ ಎಸಿ ಹಾಕಲ್ಲ ಅಂದ್ರೆ ಏನರ್ಥ.? ಕನ್ನಡಿಗರಿಗೆ, ಕನ್ನಡ ಸಿನಿಮಾಗೆ ಅವಮಾನ ಮಾಡುತ್ತಿದ್ದಾರೆ. ಇದಕ್ಕೆ ಬಹಿರಂಗ ಕ್ಷಮೆ ಕೇಳಲೇಬೇಕು. ಇಲ್ಲಾಂದ್ರೆ ನಾವು ಸುಮ್ನೆ ಬಿಡಲ್ಲ'' ಅಂತ ಕನ್ನಡ ಪ್ರೇಕ್ಷಕರು ''ಪಿ.ವಿ.ಆರ್ ಗೆ ಡೌನ್ ಡೌನ್'' ಎಂದು ಧಿಕ್ಕಾರ ಕೂಗಲು ಆರಂಭಿಸಿದರು.

  ದುರಂತ ಏನು ಗೊತ್ತಾ.?

  ದುರಂತ ಏನು ಗೊತ್ತಾ.?

  ಎಲಿಮೆಂಟ್ಸ್ ಮಾಲ್ ನ ಪಿ.ವಿ.ಆರ್ ನಲ್ಲಿ ಪ್ರದರ್ಶನವಾಗುತ್ತಿದ್ದ ಬೇರೆ ಭಾಷೆಯ ಚಿತ್ರಗಳಿಗೆ ಎ.ಸಿ ಹಾಕಲಾಗಿತ್ತು. ಆದ್ರೆ, 'ರಾಜಕುಮಾರ' ಚಿತ್ರಕ್ಕೆ ಮಾತ್ರ ಎ.ಸಿ ಹಾಕಿರಲಿಲ್ಲ. ಈ ವಿಷಯ ಗೊತ್ತಾದ್ಮೇಲಂತೂ ಕೆಲವರು ಸಿಡಿದೆದ್ದರು.

  ಕನ್ನಡಿಗರ ರಣಕಹಳೆ

  ಕನ್ನಡಿಗರ ರಣಕಹಳೆ

  ''ಮಾಲ್ ನಲ್ಲಿ ಕನ್ನಡ ಸಿನಿಮಾ ಪ್ರೇಕ್ಷಕರಿಗಿಂತ ಎ.ಸಿ.ಯೇ ಹೆಚ್ಚಾಗಿ ಹೋಯ್ತಾ.? ಕನ್ನಡ ಸಿನಿಮಾ ಪ್ರೇಕ್ಷಕರು ಅಂದ್ರೆ ಅಷ್ಟೊಂದು ಅಸಡ್ಡೆಯೇ.? ಕನ್ನಡ ಪ್ರೇಕ್ಷಕರು ದುಡ್ಡು ಕೊಡದೆ ಕಲ್ಲು ಕೊಡ್ತಾರಾ.?'' ಅಂತೆಲ್ಲ ಕೇಳಿ ಮಲ್ಟಿಪ್ಲೆಕ್ಸ್ ಸಿಬ್ಬಂದಿಗೆ ಕೆಲವರು ನೀರು ಇಳಿಸಿದ್ದಾರೆ. ಆಗ ಟಿಕೆಟ್ ದುಡ್ಡು ವಾಪಸ್ ಕೊಟ್ಟು ಅರ್ಧಕ್ಕೆ ಜನರನ್ನ ಮನೆಗೆ ಕಳುಹಿಸಲಾಗಿದೆ.

  ದುಡ್ಡು ಏನು ಕಮ್ಮಿ ಇಲ್ಲ ಸ್ವಾಮಿ.!

  ದುಡ್ಡು ಏನು ಕಮ್ಮಿ ಇಲ್ಲ ಸ್ವಾಮಿ.!

  ಮಲ್ಟಿಪ್ಲೆಕ್ಸ್ ಗಳಲ್ಲಿ ಏಕರೂಪ ಪ್ರವೇಶ ನೀತಿ ಜಾರಿಯಾಗಬೇಕು. 200 ರೂಪಾಯಿಗಿಂತಲೂ ಹೆಚ್ಚಿನ ದುಡ್ಡು ಪಡೆಯುವಂತಿಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರೂ, ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರಕ್ಕೆ ಕಡಿವಾಣ ಬಿದ್ದಿಲ್ಲ. 'ರಾಜಕುಮಾರ' ಚಿತ್ರ ನೋಡಲು ನಿನ್ನೆ 'ಗೋಲ್ಡ್ ಕ್ಲಾಸ್'ಗಾಗಿ 315 ರೂಪಾಯಿ, ಪ್ಲಾಟಿನಂ ಕ್ಲಾಸ್ ಗಾಗಿ 230 ರೂಪಾಯಿ, ಸಿಲ್ವರ್ ಕ್ಲಾಸ್ ಗಾಗಿ 210 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲಾಗಿದೆ.

  ದುಡ್ಡು ಪೀಕಿದರೂ ಸೌಲಭ್ಯ ಇಲ್ಲ.!

  ದುಡ್ಡು ಪೀಕಿದರೂ ಸೌಲಭ್ಯ ಇಲ್ಲ.!

  200 ರೂಪಾಯಿಗಿಂತಲೂ ಹೆಚ್ಚು ದುಡ್ಡು ಪಡೆದರೂ ಮೂಲಭೂತ ಸೌಲಭ್ಯ ನೀಡಲ್ಲ. ಅದರ ಮೇಲೆ ದರ್ಪ ಪ್ರದರ್ಶನ ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಸಿನಿಮಾ ಪ್ರೇಕ್ಷಕರು ಎಂದು ಬೇಕಾಬಿಟ್ಟಿ ನಡೆದುಕೊಳ್ಳುವ ಇಂತಹ ಮಾಲ್ ಗಳು ಕನ್ನಡ ನೆಲದಲ್ಲಿ ಯಾಕೆ ಬೇಕು ಸ್ವಾಮಿ.? ['ಮಲ್ಟಿಪ್ಲೆಕ್ಸ್'ಗಳಲ್ಲಿ ಇನ್ನೂ ಸಿಗುತ್ತಿಲ್ಲ 200 ರೂಗೆ ಸಿನಿಮಾ ಟಿಕೆಟ್]

  ಕನ್ನಡ ಚಿತ್ರಗಳಿಗೆ ಜಾಗವೇ ಇಲ್ಲ.!

  ಕನ್ನಡ ಚಿತ್ರಗಳಿಗೆ ಜಾಗವೇ ಇಲ್ಲ.!

  ಎಲಿಮೆಂಟ್ಸ್ ಮಾಲ್ ನ ಪಿವಿಆರ್ ನಲ್ಲಿ 'ರಾಜಕುಮಾರ' ಮತ್ತು 'ಕಿರಿಕ್ ಪಾರ್ಟಿ' ಬಿಟ್ಟರೆ ಬೇರೆ ಯಾವ ಕನ್ನಡ ಚಿತ್ರಕ್ಕೂ ಜಾಗವಿಲ್ಲ. ತಮಿಳು, ಹಿಂದಿ, ಇಂಗ್ಲೀಷ್, ಮಲೆಯಾಳಂ ಚಿತ್ರಗಳೇ ಹೆಚ್ಚಾಗಿ ರಾರಾಜಿಸುತ್ತಿವೆ.

  ಮೊನ್ನೆಯಷ್ಟೇ ಇದೇ ಮಾಲ್ ನಲ್ಲಿ ಗಲಾಟೆ ಆಗಿತ್ತು.!

  ಮೊನ್ನೆಯಷ್ಟೇ ಇದೇ ಮಾಲ್ ನಲ್ಲಿ ಗಲಾಟೆ ಆಗಿತ್ತು.!

  ಕಾವೇರಿ ಹೋರಾಟದ ಸಂದರ್ಭದಲ್ಲಿ ಕನ್ನಡಿಗರ ವಿರುದ್ಧ ನಟ ಸತ್ಯರಾಜ್ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕೆ 'ಬಾಹುಬಲಿ-ದಿ ಬಿಗಿನ್ನಿಂಗ್' ಮರು ಪ್ರದರ್ಶನ ವಿರೋಧಿಸಿ ಕನ್ನಡ ಪರ ಕಾರ್ಯಕರ್ತರು ಮೊನ್ನೆಯಷ್ಟೇ ಇದೇ ಎಲಿಮೆಂಟ್ಸ್ ಮಾಲ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಈಗ ಅದೇ ಮಾಲ್ ನಲ್ಲಿ ಕನ್ನಡ ಸಿನಿ ಪ್ರೇಕ್ಷಕರಿಗೆ ಅವಮಾನ ಮಾಡಲಾಗಿದೆ. ['ಬಾಹುಬಲಿ' ವಿರುದ್ಧ ಕೆರಳಿದ ಕನ್ನಡಿಗರು, ರೀ-ರಿಲೀಸ್ ಗೆ ಬಿಡಲ್ಲ]

  ಎಚ್ಚರಿಕೆಯ ಗಂಟೆ

  ಎಚ್ಚರಿಕೆಯ ಗಂಟೆ

  ನೆಲ, ಜಲ, ಭಾಷೆಯ ವಿಷಯ ಬಂದಾಗ 'ನಮಗ್ಯಾಕೆ ಬೇಕು' ಅಂತ ಉಡಾಫೆ ಮಾಡುವ ಪ್ರತಿಯೊಬ್ಬರಿಗೂ ಈ ಸುದ್ದಿ ಎಚ್ಚರಿಕೆಯ ಗಂಟೆ ಅಂದ್ರೆ ಖಂಡಿತ ತಪ್ಪಾಗಲ್ಲ.

  English summary
  Kannada Cinema Audience were humiliated in Elements Mall PVR, Nagavara, Bengaluru by not facilitating Air Condition during Kannada Movie 'Raajakumara' show at 10 PM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X