For Quick Alerts
  ALLOW NOTIFICATIONS  
  For Daily Alerts

  ಆಶಿಕಾ ಕುಡಿತದ ದೃಶ್ಯ ಲೀಕ್ ಆಗಿದ್ದು ಹೀಗೆ, ತಪ್ಪಾಯ್ತು ಆಶಿಕಾ ಎಂದು ಕ್ಷಮೆ ಕೇಳಿದ ಪವನ್ ಒಡೆಯರ್!

  |

  ಕ್ರೇಜಿ ಬಾಯ್ ಎಂಬ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಆಶಿಕಾ ರಂಗನಾಥ್ ಗಣೇಶ್ ಅಭಿನಯದ ಮುಗುಳು ನಗೆ ಚಿತ್ರದ ಮೂಲಕ ನೇಮ್ ಹಾಗೂ ಫೇಮ್ ಗಿಟ್ಟಿಸಿಕೊಂಡರು. ನಂತರ ಹಲವು ಖ್ಯಾತ ನಟರ ಜತೆ ಕನ್ನಡ ಚಿತ್ರಗಳಲ್ಲಿ ನಟಿಸಿದ ನಟಿ ಆಶಿಕಾ ರಂಗನಾಥ್ ಈಗ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿಯೂ ಬಣ್ಣ ಹಚ್ಚುತ್ತಿದ್ದಾರೆ.

  ಹೀಗೆ ಮಾಡಿರುವ ಕೆಲವು ಚಿತ್ರಗಳಲ್ಲಿಯೇ ಬೇರೆ ಭಾಷೆಯ ಚಿತ್ರರಂಗದವರು ಗುರುತಿಸಿ ಆಫರ್ ನೀಡುವ ಮಟ್ಟಿಗೆ ಕ್ರೇಜ್ ಹೊಂದಿರುವ ನಟಿ ಆಶಿಕಾ ರಂಗನಾಥ್ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಯಾವುದೇ ರೀತಿಯ ವಿವಾದವನ್ನು ಮಾಡಿಕೊಂಡಿಲ್ಲ. ಮಿಲ್ಕಿ ಬ್ಯೂಟಿಯ ಟ್ರ್ಯಾಕ್ ರೆಕಾರ್ಡ್‌ನಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ.

  ಹೀಗೆ ಎಲ್ಲರಿಂದಲೂ ಒಳ್ಳೆಯ ಅಭಿಪ್ರಾಯವನ್ನು ಗಳಿಸಿರುವ ನಟಿ ಆಶಿಕಾ ರಂಗನಾಥ್ ಸದ್ಯ ತಪ್ಪಿಲ್ಲದಿದ್ದರೂ ವಿವಾದವೊಂದಕ್ಕೆ ಸಿಲುಕಿಕೊಂಡಿದ್ದಾರೆ. ಹೌದು, ನಟಿ ಕೈನಲ್ಲಿ ಮದ್ಯದ ಬಾಟಲಿ ಹಿಡಿದು ಕುಡಿಯುತ್ತಾ ಪೊಲೀಸ್ ಮುಂದೆಯೇ ರಸ್ತೆಯಲ್ಲಿ ತೂರಾಡಿ, ವಿಡಿಯೊ ಮಾಡುತ್ತಿದ್ದ ವ್ಯಕ್ತಿಗೆ ಮಧ್ಯದ ಬೆರಳು ತೋರಿಸಿದ್ದ ವಿಡಿಯೊವೊಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೊ ನಿಜವೊ ಅಥವಾ ಸುಳ್ಳೋ, ಇದರ ಹಿಂದಿನ ಸತ್ಯಾಂಶವೇನು ಎಂಬುದನ್ನು ಅರಿಯುವ ಮುನ್ನವೇ ವಿಡಿಯೊವನ್ನು ಶೇರ್ ಮಾಡಿಬಿಟ್ಟಿದ್ದರು ನೆಟ್ಟಿಗರು. ಈ ವಿಷಯ ಸದ್ಯ ನಟಿ ಆಶಿಕಾಗೆ ದೊಡ್ಡ ಮಟ್ಟದ ಬೇಸರವನ್ನು ತಂದಿದೆ. ಹೀಗಾಗಿ ವಿಡಿಯೊ ಹಿಂದಿನ ಸತ್ಯಾಂಶವೇನು ಎಂಬುದನ್ನು ನಿರ್ದೇಶಕ ಪವನ್ ಒಡೆಯರ್ ವಿಡಿಯೊವೊಂದರ ಮೂಲಕ ಬಿಚ್ಚಿಟ್ಟಿದ್ದು ನಟಿ ಆಶಿಕಾಗೆ ಕ್ಷಮೆಯಾಚಿಸಿದ್ದಾರೆ.

  ವಿಡಿಯೊ ನಿಜವಲ್ಲ, ಚಿತ್ರೀಕರಣದ್ದು

  ವಿಡಿಯೊ ನಿಜವಲ್ಲ, ಚಿತ್ರೀಕರಣದ್ದು

  ಆಶಿಕಾ ರಂಗನಾಥ್ ಮದ್ಯದ ಬಾಟಲ್ ಹಿಡಿದು ತೂರಾಡಿದ್ದ ವಿಡಿಯೊ ವೈರಲ್ ಆದ ಬೆನ್ನಲ್ಲೇ ವಿಡಿಯೊವೊಂದನ್ನು ಹಂಚಿಕೊಂಡಿರುವ ನಿರ್ದೇಶಕ ಪವನ್ ಒಡೆಯರ್ ಕಳೆದೆರಡು ದಿನಗಳಿಂದ ಹರಿದಾಡುತ್ತಿರುವ ವಿಡಿಯೊ ಆಶಿಕಾ ವೈಯಕ್ತಿಕ ಜೀನವದಲ್ಲ, ಬದಲಾಗಿ ಅದು ತನ್ನ ನಿರ್ದೇಶನದ ರೇಮೊ ಚಿತ್ರದ ದೃಶ್ಯವೊಂದರ ದೃಶ್ಯ ಎಂದು ತಿಳಿಸಿದ್ದಾರೆ.

  ಆಶಿಕಾ ಪ್ರಚಾರಕ್ಕೆ ಬರಲ್ಲ ಅಂತಿದ್ದಾರೆ

  ಆಶಿಕಾ ಪ್ರಚಾರಕ್ಕೆ ಬರಲ್ಲ ಅಂತಿದ್ದಾರೆ

  ಇನ್ನು ವಿಡಿಯೊ ತಪ್ಪಾಗಿ ಎಲ್ಲೆಡೆ ವೈರಲ್ ಆಗಿರುವುದರಿಂದ ಬೇಸರಗೊಂಡಿರುವ ನಟಿ ಆಶಿಕಾ ರಂಗನಾಥ್ ರೇಮೊ ಚಿತ್ರದ ಮುಂದಿನ ಪ್ರಚಾರ ಕಾರ್ಯಗಳಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಪವನ್ ಒಡೆಯರ್ ತಿಳಿಸಿದರು. ಅಷ್ಟೇ ಅಲ್ಲದೇ ಆಶಿಕಾ ಆ ತರಹದ ಹುಡುಗಿಯೂ ಅಲ್ಲ, ತುಂಬಾ ಮುಗ್ದೆ ಎಂದೂ ಸಹ ಪವನ್ ಒಡೆಯರ್ ಹೇಳಿದ್ದಾರೆ.

  ವಿಡಿಯೊ ಲೀಕ್ ಮಾಡಿದ್ಯಾರು?

  ವಿಡಿಯೊ ಲೀಕ್ ಮಾಡಿದ್ಯಾರು?

  ಇನ್ನು ಇದೇ ವಿಡಿಯೊದಲ್ಲಿ ಆಶಿಕಾ ರಂಗನಾಥ್‌ ಅವರ ಈ ವಿಡಿಯೊ ಲೀಕ್ ಆಗಿದ್ದೇಗೆ ಎಂಬುದನ್ನೂ ಸಹ ಪವನ್ ಒಡೆಯರ್ ತಿಳಿಸಿದ್ದಾರೆ. ಚಿತ್ರದ ಪ್ರಚಾರಕ್ಕೆ ಬಳಸಿಕೊಳ್ಳಲಿ ಎಂದು ಚಿತ್ರದ ಹಲವು ದೃಶ್ಯಗಳನ್ನು ಮಾರ್ಕೆಟಿಂಗ್ ತಂಡಕ್ಕೆ ನೀಡಿದ್ದೆವು, ಆ ವಿಡಿಯೊಗಳಲ್ಲಿ ಈ ವಿಡಿಯೊ ಕೂಡ ಇತ್ತು, ಚಿತ್ರದ ಪ್ರಚಾರಕ್ಕಾಗಿ ಈ ವಿಡಿಯೊವನ್ನು ತಂಡ ಬಳಸಿಕೊಂಡಿದೆ, ಆದರೆ ವಿಡಿಯೊ ತಪ್ಪಾಗಿ ವೈರಲ್ ಆಗಿದೆ ಎಂದು ಪವನ್ ಒಡೆಯರ್ ತಿಳಿಸಿದ್ದಾರೆ.

  ಆಶಿಕಾ ಕ್ಷಮೆಯಾಚಿಸಿದ ಪವನ್ ಒಡೆಯರ್!

  ಆಶಿಕಾ ಕ್ಷಮೆಯಾಚಿಸಿದ ಪವನ್ ಒಡೆಯರ್!

  ಹೀಗೆ ರೇಮೊ ಚಿತ್ರತಂಡ ಚಿತ್ರದ ದೃಶ್ಯವೊಂದನ್ನು ಹಂಚಿಕೊಂಡ ಕಾರಣದಿಂದಾಗಿ ಆಶಿಕಾ ರಂಗನಾಥ್ ಮೇಲೆ ತಪ್ಪಾದ ಭಾವನೆ ಜನರಲ್ಲಿ ಮೂಡುತ್ತಿದೆ ಎಂಬುದನ್ನು ಮನಗಂಡ ನಿರ್ದೇಶಕ ಪವನ್ ಒಡೆಯರ್ ಇದೇ ವಿಡಿಯೊದ ಕೊನೆಯಲ್ಲಿ ನನ್ನಿಂದ ಹಾಗೂ ನನ್ನ ಚಿತ್ರತಂಡದಿಂದ ತಪ್ಪಾಗಿದೆ ಎಂದು ನಟಿಯ ಕ್ಷಮೆಯಾಚಿಸಿದ್ದಾರೆ ಹಾಗೂ ಆದಷ್ಟು ಬೇಗ ಈ ವಿವಾದಕ್ಕೆ ಅಂತ್ಯ ಹಾಡಿ ಎಂದು ಬೇಡಿಕೆ ಇಟ್ಟಿದ್ದಾರೆ.

  English summary
  I am asking sorry to Ashika Ranganath as her drinking scene goes viral says Pawan Wadeyar. Read on
  Saturday, November 19, 2022, 17:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X