»   » 'ಸಾಹೇಬ' ಚಿತ್ರದ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಶಾನ್ವಿ ಶ್ರೀವಾತ್ಸವ

'ಸಾಹೇಬ' ಚಿತ್ರದ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಶಾನ್ವಿ ಶ್ರೀವಾತ್ಸವ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ 'ಕನಸುಗಾರ' ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಹಾಗೂ 'ಮಾಸ್ಟರ್ ಪೀಸ್' ಖ್ಯಾತಿಯ ನಟಿ ಶಾನ್ವಿ ಶ್ರೀವಾತ್ಸವ ಕಾಣಿಸಿಕೊಂಡಿರುವ 'ಸಾಹೇಬ' ಚಿತ್ರದ ಶೂಟಿಂಗ್ ಬೆಂಗಳೂರಿನ ಸುತ್ತ-ಮುತ್ತ ಭರ್ಜರಿಯಾಗಿ ನಡೆದಿದ್ದು, ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.

ಇದೀಗ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಜೂನ್ 5 ರಿಂದ ಇಟಲಿಗೆ ಹಾರಲಿರುವ ಚಿತ್ರತಂಡ ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ನಡೆಸಲಿದೆ. ಇನ್ನು ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ ಬಗ್ಗೆ ನಟಿ ಶಾನ್ವಿ ಶ್ರೀವಾತ್ಸವ ಅವರು ಸಂತಸ ವ್ಯಕ್ತಪಡಿಸಿದ್ದಾರೆ.[ಕುದುರೆ ಸವಾರಿಗೆ ತರಬೇತಿ ಪಡೆಯುತ್ತಿದ್ದಾರೆ 'ಕ್ರೇಜಿಸ್ಟಾರ್' ಪುತ್ರ]

'I am going gaga about Kannada Movie 'Saheba' says Actress Shanvi Srivatsav

'ನಾನು ಸಾಹೇಬ ಚಿತ್ರದ ಪ್ರತೀ ಶಾಟ್ ಗೂ ಖುಷಿಪಡುತ್ತೇನೆ. ಏಕೆಂದರೆ ಈ ಚಿತ್ರದಲ್ಲಿ ಮಾನವ ಸಂಬಂಧಗಳ ಭಾವನೆಗಳಿವೆ ಹಾಗೂ ಈ ಕಥೆ ನನಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ' ಎಂದು ನಟಿ ಶಾನ್ವಿ ನುಡಿಯುತ್ತಾರೆ.

ಅಂದಹಾಗೆ ಚಿತ್ರದ ಸ್ಕ್ರಿಪ್ಟ್ ಕೂಡ ಓದದೆ ಸಹಿ ಮಾಡಿದ ಮೊದಲ ಸಿನಿಮಾ ಇದು ಎನ್ನುವ ನಟಿ ಶಾನ್ವಿ, 'ನನ್ನ ಪಾತ್ರದ ಬಗ್ಗೆ ನಿರ್ದೇಶಕ ಭರತ್ ಅವರು ಕೇವಲ 10 ನಿಮಿಷ ಹೇಳಿದ ತಕ್ಷಣ ಈ ಸಿನಿಮಾವನ್ನು ಒಪ್ಪಿಕೊಂಡೆ'.[ಮನೋರಂಜನ್ 'ಸಾಹೇಬ'ನಿಗೆ 'ಮಾಸ್ಟರ್ ಪೀಸ್' ಶಾನ್ವಿ ಸಾಥ್]

'I am going gaga about Kannada Movie 'Saheba' says Actress Shanvi Srivatsav

'ಈ ನಿರ್ಧಾರ ಯಾಕೆ ತೆಗೆದುಕೊಂಡೆ ಎಂದು ಇಂದಿಗೂ ಗೊತ್ತಿಲ್ಲ. ಆದರೆ ಈಗ ಆ ನಿರ್ಧಾರದಿಂದ ಸಂತಸವಾಗುತ್ತಿದೆ. ಇದು ನನ್ನ ವೃತ್ತಿ ಜೀವನದಲ್ಲಿ ಒಂದು ವಿಭಿನ್ನ ಸಿನಿಮಾ ಆಗಲಿದೆ' ಎಂದಿದ್ದಾರೆ ನಟಿ ಶಾನ್ವಿ ಶ್ರೀವಾತ್ಸವ್.

ಇನ್ನು ಮನೋರಂಜನ್ ಬಗ್ಗೆ ನಟಿ ಶಾನ್ವಿ ಅವರು 'ನಟ ಮನೋರಂಜನ್ ಅವರ ಹಾವ-ಭಾವ ಥೇಟ್ ಅವರ ತಂದೆ ರವಿಚಂದ್ರನ್ ತರಾನೇ ಇದ್ದು, ಅವರು ಕುದುರೆ ಓಡಿಸುವುದಾಗಲೀ ಹಾಗೂ ಭಾವನೆ ವ್ಯಕ್ತಪಡಿಸುವಾಗ ಅವರ ತಂದೆಯಂತೆ ಶಕ್ತಿಯುತ ನಟನೆ ನೀಡುತ್ತಾರೆ' ಎಂದು ನುಡಿದಿದ್ದಾರೆ.[ಮನೋರಂಜನ್ ರವಿಚಂದ್ರನ್ ಚೊಚ್ಚಲ ಚಿತ್ರದ ಚಿತ್ರೀಕರಣ ಫಿಕ್ಸ್.!]

'I am going gaga about Kannada Movie 'Saheba' says Actress Shanvi Srivatsav

ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡುತ್ತಿರುವ ಈ ಚಿತ್ರದಲ್ಲಿ ಕಾಮಿಡಿ ನಟ ಬುಲೆಟ್ ಪ್ರಕಾಶ್, ಹಿರಿಯ ನಟಿ ಜೂಲಿ ಲಕ್ಷ್ಮಿ ಸೇರಿದಂತೆ ಹಲವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

English summary
Actress Shanvi Srivatsav and Kannada Actor Manoranjan who will be leaving for Itlay for the song sequences of upcoming Kannada Movie 'Saheba' on June 5.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada