For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಮಗಳು ಸುರಕ್ಷಿತವಾಗಿರುವಂತೆ ನನ್ನ ಮಗನನ್ನು ಬೆಳೆಸುತ್ತೇನೆ: ಮೇಘನಾ ರಾಜ್

  |

  ಚಿರಂಜೀವಿ ಸರ್ಜಾ ಅಕಾಲಿಕ ನಿಧನದಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ನಟಿ ಮೇಘನಾ ರಾಜ್ ಪ್ರಸ್ತುತ ತಮ್ಮ ಮಗುವಿನ ಆರೈಕೆಯಲ್ಲಿ ಸಂತೋಶ ಕಾಣುತ್ತಿದ್ದಾರೆ.

  ನಿಮ್ಮ ಹೆಣ್ಣು ಮಗಳು ಸುರಕ್ಷಿತವಾಗಿರುವಂತೆ ನನ್ನ ಮಗನನ್ನು ಬೆಳೆಸುತ್ತೀನಿ. | Meghana Raj | Filmibeat Kannada

  ಮೇಘನಾ ರಾಜ್‌ ಗೆ ಅಕ್ಟೋಬರ್ 22 ರಂದು ಗಂಡು ಮಗುವಾಗಿದೆ. ಆದರೆ ಕೆಲವು ದಿನಗಳ ಹಿಂದೆಯಷ್ಟೆ, ಮಗುವಿಗೆ ಕೊರೊನಾ ಸೋಂಕು ತಗುಲಿತ್ತು, ಆದರೆ ಮಗು ಈಗ ತಾಯಿ ಮೇಘನಾ ರಾಜ್ ಆರೈಕೆಯಲ್ಲಿ ಆರಾಮವಾಗಿದೆ ಎನ್ನಲಾಗಿದೆ.

  ಇಂದು ಮೇಘನಾ ರಾಜ್ ಬಹಳ ಸುಂದರವಾದ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೇಘನಾ ಮಾಡಿರುವ ಪೋಸ್ಟ್, ತಾಯಿಯಾಗಿ ಅವರು ನಿರ್ವಹಿಸುತ್ತಿರುವ ಜವಾಬ್ದಾರಿಯನ್ನು ಪ್ರತಿನಿಧಿಸುತ್ತಿದೆ.

  'ನಿಮ್ಮ ಮಗಳು ಸುರಕ್ಷಿತವಾಗಿರುವಂತೆ ನಾನು ಮಗನನ್ನು ಬೆಳೆಸುತ್ತೇನೆ, ಇದು ನನ್ನ ಪ್ರತಿಜ್ಞೆ' ಎಂದು ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಮೇಘನಾ ರ ಈ ಪೋಸ್ಟ್ ಹಲವರ ಮನ ಗೆದ್ದಿದೆ.

  ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಲೇ, ಗಂಡುಮಕ್ಕಳನ್ನು ಬೆಳೆಸಬೇಕಾದ ರೀತಿಯ ಬಗ್ಗೆ ಮೇಘನಾ ರಾಜ್ ಪೋಸ್ಟ್ ಹೇಳುತ್ತಿದೆ. ಗಂಡು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದರೆ ಹೆಣ್ಣು ಮಕ್ಕಳು ಸುರಕ್ಷಿತವಾಗಿರಲು ಸಾಧ್ಯ, ತಾವು ಮಗನನ್ನು ಹಾಗೆಯೇ ಬೆಳೆಸುತ್ತೇನೆ ಎನ್ನುತ್ತಿದ್ದಾರೆ ನಟಿ ಮೇಘನಾ ರಾಜ್.

  ಇದೇ ಡಿಸೆಂಬರ್ 8 ರಂದು ಮೇಘನಾ ರಾಜ್, ಮಗು, ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಹಾಗೂ ಸುಂದರ್ ರಾಜ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಎಲ್ಲರೂ ಆರಾಮವಾಗಿದ್ದೇವೆ ಎಂದು ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

  English summary
  Actress Meghana Raj Instagram post saying that, 'I am raising a son that your daughter will be safe with, I promise'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X