For Quick Alerts
  ALLOW NOTIFICATIONS  
  For Daily Alerts

  ಪರಭಾಷಿಗರನ್ನ ಹಿಂದಿಕ್ಕಿದ 'ವಿಲನ್' ಟ್ರೆಂಡಿಂಗ್ ನಲ್ಲಿ ನಂಬರ್ 1

  By Bharath Kumar
  |
  TheVillain : ಇದಪ್ಪಾ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಖದರ್ ಅಂದ್ರೆ...!! | FIlmibeat Kannada

  ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಚಿತ್ರದ ಮೊದಲ ಹಾಡು ಶನಿವಾರ ಬಿಡುಗಡೆಯಾಗಿತ್ತು. ಈ ಹಾಡಿಗೆ ಯೂಟ್ಯೂಬ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ರಿಲೀಸ್ ಆದ ಕೆಲವೇ ನಿಮಿಷಗಳಲ್ಲೇ ದಾಖಲೆಯ ವೀಕ್ಷಕರು ನೋಡಿ ಕ್ರೇಜ್ ಹುಟ್ಟಿಹಾಕಿದ್ದರು.

  ಸದ್ಯದ ಮಟ್ಟಿಗೆ ಈ ಹಾಡಿನ ಹವಾ ನೋಡ್ತಿದ್ರೆ ಇರೋ ರೆಕಾರ್ಡ್ ಗಳೆಲ್ಲಾ ಉಡೀಸ್ ಮಾಡುತ್ತೆ ಎನ್ನುವ ಲೆಕ್ಕಾಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಅದಕ್ಕೆ ಕಾರಣ ವೀಕ್ಷಕರ ಸಂಖ್ಯೆ.

  ಇಬ್ಬರಲ್ಲಿ ನಿಜವಾದ 'ವಿಲನ್' ಯಾರು ಎಂದು ಹೇಳುತ್ತಿದೆ ಈ ಸಾಲುಗಳು ಇಬ್ಬರಲ್ಲಿ ನಿಜವಾದ 'ವಿಲನ್' ಯಾರು ಎಂದು ಹೇಳುತ್ತಿದೆ ಈ ಸಾಲುಗಳು

  'ದಿ ವಿಲನ್' ಚಿತ್ರದ 'ಐ ಯಮ್ ವಿಲನ್' ಹಾಡು ಯೂಟ್ಯೂಬ್ ನಲ್ಲಿ ಘರ್ಜಿಸುತ್ತಿದೆ. ಎರಡು ದಿನಕ್ಕೆ 1.3 ಮಿಲಿಯನ್ (13 ಲಕ್ಷ) ವೀವರ್ಸ್ ಹಾಡನ್ನ ನೋಡಿದ್ದಾರೆ. ವಿಶೇಷ ಅಂದ್ರೆ ಎರಡು ದಿನಗಳು ಕಳೆದ್ರು ಈ ಹಾಡು ನಂಬರ್ ವನ್ ಟ್ರೆಂಡಿಂಗ್ ನಲ್ಲಿದೆ.

  ಸಾಮಾನ್ಯವಾಗಿ ಯೂಟ್ಯೂಬ್ ಟ್ರೆಂಡಿಂಗ್ ನ ಮೊದಲ ಸ್ಥಾನದಲ್ಲಿ ಪರಭಾಷೆಯ ಹಾಡುಗಳು ಹಾಗೂ ವಿಡಿಯೋಗಳೇ ಇರುತ್ತೆ. ಅದರಲ್ಲೂ ಸತತ ಎರಡು ದಿನಗಳ ಕಾಲ ವಿಲನ್ ಹಾಡು ನಂಬರ್ ವನ್ ಸ್ಥಾನದಲ್ಲಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

  ಧೂಳೆಬ್ಬಿಸುತ್ತಿದೆ 'ದಿ ವಿಲನ್' ಚಿತ್ರದ ಮೊದಲ ಹಾಡು ಧೂಳೆಬ್ಬಿಸುತ್ತಿದೆ 'ದಿ ವಿಲನ್' ಚಿತ್ರದ ಮೊದಲ ಹಾಡು

  I Am Villain song number 1 trending in youtube

  ''I AM Villian....'' ಎಂದು ಶುರುವಾಗುವ ಈ ಹಾಡಿಗೆ ಸ್ವತಃ ಜೋಗಿ ಪ್ರೇಮ್ ಅವರೇ ಸಾಹಿತ್ಯ ಬರೆದಿದ್ದು, ಶಂಕರ್ ಮಹಾದೇವನ್ ಹಾಡಿದ್ದಾರೆ. ಅಂದ್ಹಾಗೆ, ಸುದೀಪ್ ಅವರ ಸಾಂಗ್ ಎಂದು ಹೇಳಲಾಗುತ್ತಿದ್ದು, ಮುಂದಿನ ದಿನದಲ್ಲಿ ಶಿವಣ್ಣ ಅವರ ಸಾಂಗ್ ನೋಡುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

  ಇನ್ನುಳಿದಂತೆ 'ದಿ ವಿಲನ್' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ದಿ ವಿಲನ್' ಸಿನಿಮಾ ಇದೇ ವರ್ಷ ಬರುವ ಸಾಧ್ಯತೆ ಇದೆ. ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

  English summary
  Kannada actor sudeep and shivaraj kumar starrer the villain movie 'i am villain' song is number 1 trending in youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X