For Quick Alerts
  ALLOW NOTIFICATIONS  
  For Daily Alerts

  ಇನ್ನೂ 'ಕಾಂತಾರ' ನೋಡಿಲ್ಲ ಎಂದ ಶಿವಣ್ಣ ಯಾವಾಗ ನೋಡುತ್ತೇನೆ ಎಂಬುದನ್ನೂ ತಿಳಿಸಿದ್ರು

  |

  ಕಾಂತಾರ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವಂತಹ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡು ಪ್ರೇಕ್ಷಕರಿಂದ ತೀವ್ರ ಪ್ರಶಂಸೆ ಪಡೆದುಕೊಂಡ ಕಾಂತಾರ ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಯಿತು.

  ಕಾಂತಾರ ಚಿತ್ರ ವಿವಿಧ ಭಾಷೆಗಳಿಗೆ ಡಬ್ ಆದ ಬೆನ್ನಲ್ಲೇ ಪರಭಾಷಾ ಸಿನಿಮಾ ನಟರು, ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು ಚಿತ್ರವನ್ನು ವೀಕ್ಷಿಸಿ ಪ್ರಶಂಸೆಯ ಸುರಿಮಳೆಗೈದರು. ಕನ್ನಡ ನಟ ಕಿಚ್ಚ ಸುದೀಪ್ ಕೂಡ ಕಾಂತಾರ ಚಿತ್ರವನ್ನು ವೀಕ್ಷಿಸಿ ಚಿತ್ರದ ಕುರಿತಾಗಿ ಹಾಗೂ ರಿಷಬ್ ಶೆಟ್ಟಿ ಬಗ್ಗೆ ವಿಶೇಷ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯುವುದರ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದರು.

  'ಪುಷ್ಪ' ಟೋಟಲ್ ಕಲೆಕ್ಷನ್ ಹಿಂದಿಕ್ಕಲು 'ಕಾಂತಾರ' ಇನ್ನೆಷ್ಟು ಕೋಟಿ ಗಳಿಸಬೇಕು? ಪುಷ್ಪ.. ತಗ್ಗಲೇಬೇಕು!'ಪುಷ್ಪ' ಟೋಟಲ್ ಕಲೆಕ್ಷನ್ ಹಿಂದಿಕ್ಕಲು 'ಕಾಂತಾರ' ಇನ್ನೆಷ್ಟು ಕೋಟಿ ಗಳಿಸಬೇಕು? ಪುಷ್ಪ.. ತಗ್ಗಲೇಬೇಕು!

  ಕಾಂತಾರ ಪ್ರೀಮಿಯರ್ ಪ್ರದರ್ಶನವನ್ನು ರಾಜ್ ಕುಟುಂಬದ ಯುವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್ ವೀಕ್ಷಿಸಿದ್ದರು. ಆದರೆ ಶಿವರಾಜ್ ಕುಮಾರ್ ಮಾತ್ರ ಆಗಮಿಸಿರಲಿಲ್ಲ ಹಾಗೂ ಚಿತ್ರವನ್ನು ವೀಕ್ಷಿಸಿರಲಿಲ್ಲ. ನಮ್ಮ ಮಣ್ಣಿನ ಚಿತ್ರವನ್ನು ನಮ್ಮ ದೊಡ್ಡ ನಟರೇ ನೋಡಿಲ್ಲ ಎಂಬ ಟೀಕೆ ವ್ಯಕ್ತವಾದಾಗ ಶಿವಣ್ಣನ ಹೆಸರು ಸಹ ಕೇಳಿಬಂದಿತ್ತು. ಇದೀಗ ಸ್ವತಃ ಶಿವಣ್ಣ ಅವರೇ ಕಾಂತಾರ ಚಿತ್ರದ ಕುರಿತು ಮಾತನಾಡಿದ್ದಾರೆ.

   ರೇಮೊ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕಾಂತಾರ ಬಗ್ಗೆ ಮಾತನಾಡಿದ ಶಿವಣ್ಣ

  ರೇಮೊ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಕಾಂತಾರ ಬಗ್ಗೆ ಮಾತನಾಡಿದ ಶಿವಣ್ಣ

  ಪವನ್ ಒಡೆಯರ್ ನಿರ್ದೇಶನದ ಹಾಗೂ ಇಶಾನ್ ಮತ್ತು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೇಮೊ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ ಕಾಂತಾರ ಚಿತ್ರವನ್ನು ಉಲ್ಲೇಖಿಸಿದರು. ರೇಮೊ ಚಿತ್ರದ ಟ್ರೈಲರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶಿವಣ್ಣ ಇತ್ತೀಚೆಗಿನ ಕನ್ನಡ ಚಿತ್ರಗಳು ಅದ್ಭುತವಾಗಿ ಮೂಡಿ ಬರುತ್ತಿವೆ, ಅದರಲ್ಲಿಯೂ ಕಾಂತಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಎಂದರು.

   ಕಾಂತಾರ ಟ್ರೈಲರ್ ವೀಕ್ಷಿಸಿ ಮೆಚ್ಚಿಕೊಂಡಿದ್ದೆ, ಚಿತ್ರ ನೋಡುವೆ

  ಕಾಂತಾರ ಟ್ರೈಲರ್ ವೀಕ್ಷಿಸಿ ಮೆಚ್ಚಿಕೊಂಡಿದ್ದೆ, ಚಿತ್ರ ನೋಡುವೆ

  ಇನ್ನೂ ಮುಂದುವರಿದು ಮಾತನಾಡಿದ ಶಿವರಾಜ್ ಕುಮಾರ್ ಕಾಂತಾರ ಚಿತ್ರದ ಟ್ರೈಲರ್ ವೀಕ್ಷಿಸಿದ ನಂತರ ರಿಷಬ್ ಶೆಟ್ಟಿಗೆ ಕಾಲ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದೆ ಹಾಗೂ ವಿಶೇಷವಾಗಿ ಸಿಂಗಾರ ಸಿರಿಯೇ ಹಾಡು ನನ್ನನ್ನು ತುಂಬಾ ಕಾಡುತ್ತಿದೆ ಎಂದು ರಿಷಬ್ ಶೆಟ್ಟಿ ಬಳಿ ಹೇಳಿದ್ದೆ ಎಂದರು. ಚಿತ್ರೀಕರಣದಲ್ಲಿ ಬ್ಯುಸಿ ಇರುವ ಕಾರಣ ಕಾಂತಾರ ಚಿತ್ರವನ್ನು ವೀಕ್ಷಿಸಲಾಗಲಿಲ್ಲ ಆದರೆ ಇನ್ನೆರಡು ದಿನಗಳಲ್ಲಿ ಕಾಂತಾರ ಚಿತ್ರವನ್ನು ನೋಡುತ್ತೇನೆ ಎಂದು ಶಿವಣ್ಣ ಹೇಳಿದರು.

   ಪವನ್ ಒಡೆಯರ್ ಹಾಗೂ ಆಶಿಕಾ ಬಗ್ಗೆ ಮೆಚ್ಚುಗೆಯ ಸುರಿಮಳೆ

  ಪವನ್ ಒಡೆಯರ್ ಹಾಗೂ ಆಶಿಕಾ ಬಗ್ಗೆ ಮೆಚ್ಚುಗೆಯ ಸುರಿಮಳೆ

  ಇನ್ನು ಇಡೀ ರೇಮೊ ಚಿತ್ರತಂಡವನ್ನು ಹೊಗಳಿದ ಶಿವರಾಜ್ ಕುಮಾರ್ ವಿಶೇಷವಾಗಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಆಶಿಕಾ ರಂಗನಾಥ್ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದರು. ಪವನ್ ಒಡೆಯರ್ ಯಾವುದೇ ಚಿತ್ರ ಮಾಡಿದರೂ ಅಚ್ಚುಕಟ್ಟಾದ ಕೆಲಸ ಮಾಡುತ್ತಾರೆ ಅಪ್ಪು ಅವರಿಗೂ 2 ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದರು ಎಂದು ಹೊಗಳಿದರು. ಕನ್ನಡದ ಹುಡುಗಿ ಆಶಿಕಾ ರಂಗನಾಥ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದರ ಜತೆಗೆ ಉತ್ತಮ ನಟನೆ ಮಾಡಿದ್ದಾರೆ, ಈ ಹಿಂದೆ ಅವರು ನನ್ನ ಮಾಸ್ ಲೀಡರ್ ಚಿತ್ರದಲ್ಲಿ ಸೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಎಂದು ಶಿವಣ್ಣ ಹೊಗಳಿದರು.

  English summary
  : I didn't watch Kantara but definitely I will watch it says Shiva Rajkumar . Read on
  Sunday, November 6, 2022, 16:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X