For Quick Alerts
  ALLOW NOTIFICATIONS  
  For Daily Alerts

  ಮುನಿರತ್ನ 'ಕುರುಕ್ಷೇತ್ರ'ದಲ್ಲಿ ಏನು ನಡೆಯುತ್ತಿದೆ ಅನ್ನೋದೇ ದರ್ಶನ್ ಗೆ ಗೊತ್ತಿಲ್ಲ ಸ್ವಾಮಿ.!

  By Harshitha
  |
  ಇದ್ದಕ್ಕಿದ್ದ ಹಾಗೇ ದರ್ಶನ್ ಕುರುಕ್ಷೇತ್ರ ಸಿನಿಮಾ ಬಗ್ಗೆ ಹೀಗೆ ಹೇಳಿದ್ದೇಕೆ..? | Filmibeat Kannada

  ಅದಾಗಲೇ 'ಮುನಿರತ್ನ ಕುರುಕ್ಷೇತ್ರ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ ತಿಂಗಳುಗಳೇ ಉರುಳಿದೆ. ಚಿತ್ರದ ಡಬ್ಬಿಂಗ್ ಕಾರ್ಯ ಕೂಡ ಕಂಪ್ಲೀಟ್ ಆಗಿದೆ. ಹೀಗಿದ್ದರೂ, ಸಿನಿಮಾದ ಆಡಿಯೋ ರಿಲೀಸ್ ಆಗಿಲ್ಲ, ಬಿಡುಗಡೆ ದಿನಾಂಕ ಕೂಡ ನಿಗದಿ ಆಗಿಲ್ಲ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50 ನೇ ಸಿನಿಮಾ ಎಂಬ ಕಾರಣಕ್ಕೆ 'ಕುರುಕ್ಷೇತ್ರ' ಬಹು ನಿರೀಕ್ಷೆ ಮೂಡಿಸಿದೆ. ಆದ್ರೆ, ಒಳ್ಳೆಯ ವಿಚಾರಕ್ಕಿಂತ ಹೆಚ್ಚಾಗಿ ಇದೀಗ ಈ ಸಿನಿಮಾ ವಿವಾದಗಳಿಂದಲೇ ಸದ್ದು-ಸುದ್ದಿ ಆಗುತ್ತಿದೆ.

  'ಮುನಿರತ್ನ ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂಬ ಗುಸುಗುಸು ಇತ್ತೀಚೆಗಷ್ಟೇ ಕೇಳಿಬಂದಿತ್ತು. ಈಗ ನೋಡಿದ್ರೆ, ಮುನಿರತ್ನ 'ಕುರುಕ್ಷೇತ್ರ'ದಲ್ಲಿ ಏನು ನಡೆಯುತ್ತಿದೆ ಅನ್ನೋದೇ ಗೊತ್ತಿಲ್ಲ ಅಂತಿದ್ದಾರೆ ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್.

  'ಕುರುಕ್ಷೇತ್ರ' ಸಿನಿಮಾ ಯಾವಾಗ ಬಿಡುಗಡೆ ಆಗುತ್ತೋ ಗೊತ್ತಿಲ್ಲ. ಆದ್ರೆ, 'ಯಜಮಾನ' ಚಿತ್ರ ಬೇಗ ರಿಲೀಸ್ ಆಗಲಿ ಅಂತ ಕಟ್ಟಪ್ಪಣೆ ಹೊರಡಿಸಿದ್ದಾರಂತೆ ನಟ ದರ್ಶನ್. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಟೈಮ್ ವೇಸ್ಟ್ ಮಾಡದ ದರ್ಶನ್

  ಟೈಮ್ ವೇಸ್ಟ್ ಮಾಡದ ದರ್ಶನ್

  'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿಸಿದ ಬಳಿಕ ನಟ ದರ್ಶನ್ ಕೊಂಚ ಕೂಡ ಟೈಮ್ ವೇಸ್ಟ್ ಮಾಡದೆ 'ಯಜಮಾನ' ಚಿತ್ರಕ್ಕೆ ಚಾಲನೆ ನೀಡಿದರು. ಇಂದು 'ಯಜಮಾನ' ಚಿತ್ರದ ಟಾಕಿ ಪೋರ್ಷನ್ ಕಂಪ್ಲೀಟ್ ಆಗಲಿದ್ದು, ಸಾಂಗ್ ಶೂಟಿಂಗ್ ಮಾತ್ರ ಬ್ಯಾಲೆನ್ಸ್ ಇದೆ.

  'ಕುರುಕ್ಷೇತ್ರ'ದಿಂದ ಹೊರಬಿದ್ದಿರುವ ಎಕ್ಸ್ ಕ್ಲೂಸಿವ್ ಫೋಟೋ ಇದು!'ಕುರುಕ್ಷೇತ್ರ'ದಿಂದ ಹೊರಬಿದ್ದಿರುವ ಎಕ್ಸ್ ಕ್ಲೂಸಿವ್ ಫೋಟೋ ಇದು!

  'ಯಜಮಾನ' ಬೇಗ ಬಿಡುಗಡೆ ಆಗಲಿ...

  'ಯಜಮಾನ' ಬೇಗ ಬಿಡುಗಡೆ ಆಗಲಿ...

  ಟಾಕಿ ಪೋರ್ಷನ್ ಮುಗಿದಿರುವ ಕಾರಣ, ''ಚಿತ್ರದ ಪ್ರಮೋಷನ್ ಕೆಲಸ ಶುರು ಮಾಡಿ, ಆದಷ್ಟು ಬೇಗ 'ಯಜಮಾನ' ಬಿಡುಗಡೆ ಆಗಲಿ'' ಎಂದು ನಿರ್ಮಾಪಕರಿಗೆ ದರ್ಶನ್ ಹೇಳಿದ್ದಾರಂತೆ.

  ದರ್ಶನ್ ಜೊತೆಗೆ ನಟಿಸಿದ್ಮೇಲೆ ಅರ್ಜುನ್ ಸರ್ಜಾ ಮನಸ್ಸಲ್ಲಿ ಮೂಡಿದ ಭಾವನೆ ಏನು.?ದರ್ಶನ್ ಜೊತೆಗೆ ನಟಿಸಿದ್ಮೇಲೆ ಅರ್ಜುನ್ ಸರ್ಜಾ ಮನಸ್ಸಲ್ಲಿ ಮೂಡಿದ ಭಾವನೆ ಏನು.?

  ಪಕ್ಕಾ ಪ್ಲಾನ್ ಆಗಿದೆ

  ಪಕ್ಕಾ ಪ್ಲಾನ್ ಆಗಿದೆ

  ಆಗಸ್ಟ್ 4 ರಂದು 'ಯಜಮಾನ' ಚಿತ್ರದ ಫೋಟೋಶೂಟ್ ನಿಗದಿ ಆಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಡಬ್ಬಿಂಗ್ ಮುಗಿಸುವೆ ಎಂದಿದ್ದಾರಂತೆ ದರ್ಶನ್. ಈ ನಡುವೆ ಸಾಂಗ್ ಶೂಟಿಂಗ್ ಕೂಡ ಮುಗಿಯಬೇಕಿದೆ. ಅಂದ್ಹಾಗೆ, 'ಯಜಮಾನ' ಚಿತ್ರಕ್ಕೆ ಶೈಲಜಾ ನಾಗ್, ಬಿ.ಸುರೇಶ ಬಂಡವಾಳ ಹಾಕುತ್ತಿದ್ದು ಪಿ.ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಯಜಮಾನ' ಚಿತ್ರದಲ್ಲಿ ದರ್ಶನ್ ಗೆ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ನಾಯಕಿ ಆಗಿದ್ದಾರೆ.

  ಮೊದಲು ಡಾ.ರಾಜ್, ನಂತ್ರ ದರ್ಶನ್.! ಡಿ-ಬಾಸ್ ಬಗ್ಗೆ ಹೀಗ್ಯಾಕಂದ್ರು ರವಿಶಂಕರ್.?ಮೊದಲು ಡಾ.ರಾಜ್, ನಂತ್ರ ದರ್ಶನ್.! ಡಿ-ಬಾಸ್ ಬಗ್ಗೆ ಹೀಗ್ಯಾಕಂದ್ರು ರವಿಶಂಕರ್.?

  'ಕುರುಕ್ಷೇತ್ರ' ಬಗ್ಗೆ ಗೊತ್ತಿಲ್ಲ

  'ಕುರುಕ್ಷೇತ್ರ' ಬಗ್ಗೆ ಗೊತ್ತಿಲ್ಲ

  'ಯಜಮಾನ' ಚಿತ್ರಕ್ಕೂ ಮುನ್ನ 'ಕುರುಕ್ಷೇತ್ರ' ಸಿನಿಮಾ ಬಿಡುಗಡೆ ಆಗುತ್ತಾ ಅಂತ ಪ್ರಶ್ನೆ ಮಾಡಿದ್ರೆ ದರ್ಶನ್ ಕಡೆಯಿಂದ ಬರುವ ಉತ್ತರ - ''ಗೊತ್ತಿಲ್ಲ. ನಿಜ ಹೇಳಬೇಕು ಅಂದ್ರೆ, 'ಮುನಿರತ್ನ ಕುರುಕ್ಷೇತ್ರ' ಚಿತ್ರದ ಈಗಿನ ಸ್ಟೇಟಸ್ ಬಗ್ಗೆ ನನ್ನ ಬಳಿ ಕ್ಲಿಯರ್ ಪಿಕ್ಚರ್ ಇಲ್ಲ''

  ಮೊದಲು ಕಂಪ್ಲೀಟ್ ಆಗುವ ಚಿತ್ರಕ್ಕೆ ಪ್ರಾಮುಖ್ಯತೆ

  ಮೊದಲು ಕಂಪ್ಲೀಟ್ ಆಗುವ ಚಿತ್ರಕ್ಕೆ ಪ್ರಾಮುಖ್ಯತೆ

  ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ದರ್ಶನ್ ರವರ 'ತಾರಕ್' ಚಿತ್ರ ಬಿಡುಗಡೆ ಆಗಿತ್ತು. ಇನ್ನೊಂದು ತಿಂಗಳು ಕಳೆದರೆ ದರ್ಶನ್ ಸಿನಿಮಾ ರಿಲೀಸ್ ಆಗಿ ವರ್ಷ ಆಗುತ್ತೆ. ಹೀಗಾಗಿ ಹೆಚ್ಚು ಕಾಲಹರಣ ಮಾಡುವುದು ದರ್ಶನ್ ಗೆ ಇಷ್ಟ ಇಲ್ಲ. ಯಾವ ಸಿನಿಮಾ ಬೇಗ ಕಂಪ್ಲೀಟ್ ಆಗುತ್ತೋ, ಅದನ್ನ ಮೊದಲು ಬಿಡುಗಡೆ ಮಾಡಲು ದರ್ಶನ್ ಮುಂದಾಗಿದ್ದಾರೆ.

  English summary
  ''I don't have a clear picture about the status of Muniratna Kurukshetra'' says Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X