For Quick Alerts
  ALLOW NOTIFICATIONS  
  For Daily Alerts

  ಭಾವಿ ಪತ್ನಿ ರೇವತಿ ಜೊತೆಗೆ ರೊಮ್ಯಾಂಟಿಕ್ ಮೂಡ್ ನಲ್ಲಿ ನಿಖಿಲ್.!

  |
  ನಿಖಿಲ್ ಸಂದೇಶಕ್ಕೆ ನೆಟ್ಟಿಗರು ಫಿದಾ

  ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಬಾಚ್ಯುಲರ್ ಲೈಫ್ ಗೆ ಗುಡ್ ಬೈ ಹೇಳಿದ್ದಾಗಿದೆ. ಸಿಂಗಲ್ ಸ್ಟೇಟಸ್ ಗೆ ಬೈ ಬೈ ಹೇಳಿ, ರೇವತಿ ಜೊತೆಗೆ ನಿಖಿಲ್ ಕುಮಾರ್ ಎಂಗೇಜ್ ಆಗಿದ್ದಾರೆ.

  ತಂದೆ-ತಾಯಿ ಹುಡುಕಿರುವ ಹುಡುಗಿ ರೇವತಿ ಜೊತೆಗೆ ನಿಖಿಲ್ ಕುಮಾರ್ ನಿಶ್ಚಿತಾರ್ಥ ಸಮಾರಂಭ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆದಿತ್ತು. ಎಂಗೇಜ್ಮೆಂಟ್ ಆದ್ಮೇಲೆ ನಿಖಿಲ್ ಕುಮಾರ್ ಮತ್ತು ರೇವತಿ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ.

  ಮದುವೆಗೆ ಇನ್ನೆರಡು ತಿಂಗಳು ಬಾಕಿ ಉಳಿದಿದೆ. ಹೀಗಿರುವಾಗಲೇ, ರೇವತಿಯ ಪ್ರೇಮ ಪಾಶದಲ್ಲಿ ನಿಖಿಲ್ ಕುಮಾರ್ ಸಿಲುಕಿದ್ದಾರೆ. ರೇವತಿಯ ವ್ಯಕ್ತಿತ್ವಕ್ಕೆ ನಿಖಿಲ್ ಕುಮಾರ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಅದಕ್ಕೆ ಸಾಕ್ಷಿ ನಿಖಿಲ್ ರವರ ನುಡಿ ಮುತ್ತುಗಳು.!

  ನಿನ್ನನ್ನ ಪ್ರೀತಿಸುವೆ ಯುವರಾಣಿ

  ನಿನ್ನನ್ನ ಪ್ರೀತಿಸುವೆ ಯುವರಾಣಿ

  ''ನನ್ನ ಯುವರಾಣಿ.. ನಿನ್ನನ್ನ ತುಂಬಾ ಪ್ರೀತಿಸುತ್ತೇನೆ. ಸಮಯ ಕಳೆದ ಹಾಗೆ ಸೌಂದರ್ಯ ಮಾಸಬಹುದು. ಆದ್ರೆ, ಒಳ್ಳೆಯ ಗುಣ ಯಾವಾಗಲೂ ನಮ್ಮ ಜೊತೆ ಇರುತ್ತದೆ. ನಿನ್ನ ವ್ಯಕ್ತಿತ್ವವನ್ನು ನಾನು ಇಷ್ಟ ಪಡುತ್ತೇನೆ'' ಎಂದು ಇನ್ಸ್ಟಾಗ್ರಾಮ್ ನಲ್ಲಿ ಭಾವಿ ಪತ್ನಿ ರೇವತಿ ಬಗ್ಗೆ ನಿಖಿಲ್ ಕುಮಾರ್ ಬರೆದುಕೊಂಡಿದ್ದಾರೆ.

  'ಈ' ಉದ್ಯೋಗಕ್ಕೆ ಸೇರಲು ಮುಂದಾಗಿದ್ದ ನಿಖಿಲ್ ಭಾವಿ ಪತ್ನಿ ರೇವತಿ.!'ಈ' ಉದ್ಯೋಗಕ್ಕೆ ಸೇರಲು ಮುಂದಾಗಿದ್ದ ನಿಖಿಲ್ ಭಾವಿ ಪತ್ನಿ ರೇವತಿ.!

  ರೊಮ್ಯಾಂಟಿಕ್ ಫೀಲ್ ನಲ್ಲಿ ನಿಖಿಲ್

  ರೊಮ್ಯಾಂಟಿಕ್ ಫೀಲ್ ನಲ್ಲಿ ನಿಖಿಲ್

  ''ನಿನ್ನ ಜೊತೆ ನಾನು ಕಳೆಯುತ್ತಿರುವ ಪ್ರತಿ ಕ್ಷಣವೂ ಅಮೂಲ್ಯ. ಸಾಯುವ ಕೊನೆ ಘಳಿಗೆ ವರೆಗೂ ನಿನ್ನ ಕೈ ಹಿಡಿದಿರಬೇಕು ಎಂಬುದು ನನ್ನ ಇಚ್ಛೆ. ಸಾವಷ್ಟೇ ನಮ್ಮನ್ನ ಬೇರೆ ಮಾಡಬೇಕು. ಮುಂದಿನ ಜನ್ಮ ಅನ್ನೋದು ಇದ್ದರೆ, ನೀನೇ ನನ್ನ ಸಂಗಾತಿ ಆಗಬೇಕು'' ಅಂತ ರೇವತಿ ಬಗ್ಗೆ ರೊಮ್ಯಾಂಟಿಕ್ ಫೀಲ್ ನಲ್ಲಿ ನಿಖಿಲ್ ಕುಮಾರ್ ಬರೆದುಕೊಂಡಿದ್ದಾರೆ.

  ನಿಶ್ಚಿತಾರ್ಥ ಬಳಿಕ ಒಂದೇ ಮಾತಿನಲ್ಲೇ ಖುಷಿ ಹಂಚಿಕೊಂಡ ರೇವತಿನಿಶ್ಚಿತಾರ್ಥ ಬಳಿಕ ಒಂದೇ ಮಾತಿನಲ್ಲೇ ಖುಷಿ ಹಂಚಿಕೊಂಡ ರೇವತಿ

  ಇದು ರೇವತಿ ಕೈಬರಹ

  ಇದು ರೇವತಿ ಕೈಬರಹ

  ಜೊತೆಗೆ ರೇವತಿ ಕೈಯಾರೆ ಬರೆದಿರುವ ಜನಪ್ರಿಯ ಫ್ರೆಂಚ್ ರೊಮ್ಯಾಂಟಿಕ್ ನಾಟಕದ ಇಂಗ್ಲೀಷ್ ಅನುವಾದದ ಸಾಲುಗಳನ್ನು ಇಬ್ಬರೂ (ನಿಖಿಲ್ ಮತ್ತು ರೇವತಿ) ಕೈ ಕೈ ಹಿಡಿದುಕೊಂಡು ಓದುತ್ತಿರುವ ಫೋಟೋವನ್ನೂ ನಿಖಿಲ್ ಕುಮಾರ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

  ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿದ ನಿಖಿಲ್-ರೇವತಿಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿದ ನಿಖಿಲ್-ರೇವತಿ

  ಮದುವೆ ಯಾವಾಗ.?

  ಮದುವೆ ಯಾವಾಗ.?

  ನಿಖಿಲ್ ಕುಮಾರ್ ಮತ್ತು ರೇವತಿ ಮದುವೆ ಏಪ್ರಿಲ್ 17 ರಂದು ನಡೆಯಲಿದೆ. ರಾಮನಗರ ಮತ್ತು ಚನ್ನಪಟ್ಟಣ ಮಧ್ಯೆ ವಿಶಾಲ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ ಮದುವೆ ಮಾಡಲು ನಿಖಿಲ್ ತಂದೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

  ನಿಖಿಲ್-ರೇವತಿ ಮದುವೆ: ಭಾವಿ ಬೀಗರ ಜೊತೆ ಎಚ್.ಡಿ.ಕುಮಾರಸ್ವಾಮಿ ಸ್ಥಳ ವೀಕ್ಷಣೆನಿಖಿಲ್-ರೇವತಿ ಮದುವೆ: ಭಾವಿ ಬೀಗರ ಜೊತೆ ಎಚ್.ಡಿ.ಕುಮಾರಸ್ವಾಮಿ ಸ್ಥಳ ವೀಕ್ಷಣೆ

  English summary
  I dream to grow old with you says romantic Nikhil Kumar about fiance Revathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X