For Quick Alerts
  ALLOW NOTIFICATIONS  
  For Daily Alerts

  ಆ ಚಿತ್ರದಲ್ಲಿ ತಮ್ಮ ಲುಕ್ ಚೆನ್ನಾಗಿರಲಿಲ್ಲ ಎಂಬ ನೋವು ಶಿವಣ್ಣನಲ್ಲಿ ಇಂದಿಗೂ ಇದೆ!

  |

  ಶಿವ ರಾಜ್‌ಕುಮಾರ್ ಚಂದನವನದ ಚಿರಯುವಕ. ವಯಸ್ಸು ಅರವತ್ತಾದ್ರೂ ಯುವಕರೇ ನಾಚುವಂತ ಎನರ್ಜಿ ಹೊಂದಿರುವಂತಹ ನಟ. ಈ ವಯಸ್ಸಿನಲ್ಲೂ ಜಿಂಕೆಯಂತೆ ಎಗರುವ ಹಾಗೂ ವೇಗವಾಗಿ ಡಾನ್ಸ್ ಮಾಡುವ ಶಿವಣ್ಣ ಅವರನ್ನು ನೋಡಿ ಈ ಯಪ್ಪನಿಗೆ ವಯಸ್ಸೇ ಆಗಲ್ವಾ ಹೇಗೆ ಎಂದು ಹಲವಾರು ಬಾರಿ ಮನಸ್ಸಿನಲ್ಲೇ ಪ್ರಶ್ನೆ ಹಾಕಿಕೊಂಡಿದ್ದಾರೆ. ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶಿವಣ್ಣ ಅಂದಿನಿಂದ ಇಂದಿನವರೆಗೂ ಸತತವಾಗಿ ತಮ್ಮ ಚಿತ್ರಗಳ ಮೂಲಕ ರಂಜಿಸುತ್ತಾ ಬಂದಿದ್ದಾರೆ.

  ನೂರು ಚಿತ್ರಗಳನ್ನು ನಾಯಕ ನಟನಾಗಿ ಪೂರೈಸುವ ಮೂಲಕ ಸೆಂಚುರಿ ಸ್ಟಾರ್ ಎಂಬ ಬಿರುದು ಪಡೆದುಕೊಂಡಿದ್ದ ಶಿವ ರಾಜ್‌ಕುಮಾರ್ ಸದ್ಯ 125 ಚಿತ್ರಗಳನ್ನು ಪೂರೈಸುವ ಹಂತಕ್ಕೆ ತಲುಪಿದ್ದಾರೆ. ಹೌದು, ಶಿವ ರಾಜ್‌ಕುಮಾರ್ ಅಭಿನಯದ 125ನೇ ಚಿತ್ರ ವೇದಾ ಇದೇ ಡಿಸೆಂಬರ್ 23ಕ್ಕೆ ತೆರೆ ಕಾಣಲಿದೆ. ಭಜರಂಗಿ, ವಜ್ರಕಾಯ ಹಾಗೂ ಭಜರಂಗಿ 2 ಬಳಿಕ ನಾಲ್ಕನೇ ಬಾರಿಗೆ ಎ ಹರ್ಷ ಜತೆ ಕೈಜೋಡಿಸಿರುವ ಶಿವ ರಾಜ್‌ಕುಮಾರ್ ಈ ಚಿತ್ರದ ಮೂಲಕ ಗೆಲ್ಲುವ ಎಲ್ಲಾ ಲಕ್ಷಣಗಳೂ ಚಿತ್ರ ಟೀಸರ್ ಹಾಗೂ ಟ್ರೈಲರ್ ಮೂಲಕ ಕಾಣಿಸುತ್ತಿವೆ.

  ಇನ್ನು ವೇದಾ ಚಿತ್ರತಂಡ ಚಿತ್ರದ ಬಿಡುಗಡೆ ದಿನ ಸಮೀಪಿಸುತ್ತಿದ್ದಂತೆ ಚಿತ್ರದ ಹಾಡು ಹಾಗೂ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಹೈಪ್ ಹೆಚ್ಚಿಸುತ್ತಿದ್ದರೆ, ಶಿವ ರಾಜ್‌ಕುಮಾರ್ ಸಂದರ್ಶನಗಳಲ್ಲಿ ಪಾಲ್ಗೊಂಡು ಚಿತ್ರದ ಕುರಿತಾಗಿ ಮಾತನಾಡಿ ಪ್ರಚಾರವನ್ನು ಮಾಡುತ್ತಿದ್ದಾರೆ. ಹೀಗೆ ನಮ್ಮ ಫಿಲ್ಮಿಬೀಟ್ ಕನ್ನಡ ಚಾನೆಲ್ ನಡೆಸಿದ ವೇದಾ ಚಿತ್ರದ ಸಂದರ್ಶನದಲ್ಲಿಯೂ ಭಾಗವಹಿಸಿದ ಶಿವ ರಾಜ್‌ಕುಮಾರ್ ವೇದಾ ಮಾತ್ರವಲ್ಲದೇ ಉಳಿದ ಚಿತ್ರಗಳ ಬಗ್ಗೆಯೂ ಸಹ ಈ ಕೆಳಕಂಡಂತೆ ಮಾತನಾಡಿದ್ದಾರೆ.

  ಯಾವ ಚಿತ್ರದ ಲುಕ್ ಇಷ್ಟವಿರಲಿಲ್ಲ?

  ಯಾವ ಚಿತ್ರದ ಲುಕ್ ಇಷ್ಟವಿರಲಿಲ್ಲ?

  ಈ ಸಂದರ್ಶನದಲ್ಲಿ ವೇದಾ ಚಿತ್ರದ ತಮ್ಮ ಲುಕ್ ಇಷ್ಟವಾಯಿತು ಎಂದು ಖುಷಿ ವ್ಯಕ್ತಪಡಿಸಿದ ಶಿವ ರಾಜ್‌ಕುಮಾರ್ ಅವರಿಗೆ ಈ ಹಿಂದಿನ ನಿಮ್ಮ ಚಿತ್ರಗಳ ಪೈಕಿ ಯಾವುದಾದರೂ ಒಂದು ಚಿತ್ರದ ಲುಕ್ ಬೇಡವಾಗಿತ್ತು ಎನಿಸಿತ್ತಾ ಎಂಬ ಪ್ರಶ್ನೆಯನ್ನು ಸಂದರ್ಶಕರು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ಶಿವ ರಾಜ್‌ಕುಮಾರ್ 'ಸತ್ಯ ಇನ್ ಲವ್' ಚಿತ್ರದಲ್ಲಿನ ತಮ್ಮ ಲುಕ್ ತಮಗೆ ಇಷ್ಟವಾಗಿರಲಿಲ್ಲ, ಬೇಡ ಎನಿಸಿತ್ತು, ಆದರೆ ನಿರ್ದೇಶಕರು ಇಷ್ಟಪಟ್ಟಿದ್ದರು ಹಾಗೂ ಚೆನ್ನಾಗಿ ಕಾಣುತ್ತೆ ಎಂದಿದ್ದ ಕಾರಣ ಆ ಲುಕ್‌ನಲ್ಲಿ ನಟಿಸಿದ್ದೆ ಎಂದು ಹೇಳಿದರು.

  ಆದರೂ ಚಿತ್ರ ಹಿಟ್ ಆಯಿತು

  ಆದರೂ ಚಿತ್ರ ಹಿಟ್ ಆಯಿತು

  ಇನ್ನೂ ಮುಂದುವರಿದು ಮಾತನಾಡಿದ ಶಿವ ರಾಜ್‌ಕುಮಾರ್ ಆದರೂ ಸಹ ಸತ್ಯ ಇನ್ ಲವ್ ಚಿತ್ರ ದೊಡ್ಡ ಹಿಟ್ ಆಯಿತು. ಚಿತ್ರದ ಕಂಟೆಂಟ್ ಹಾಗೂ ಹಾಡುಗಳು ಚೆನ್ನಾಗಿದ್ದ ಕಾರಣ ವೀಕ್ಷಕರು ಲುಕ್‌ ಬಗ್ಗೆ ಅಷ್ಟೊಂದು ಗಮನ ಕೊಡಲಿಲ್ಲ ಎಂದು ಹೇಳಿದರು ಹಾಗೂ ಇನ್ನೂ ಸ್ವಲ್ಪ ಲುಕ್ ಬಗ್ಗೆ ಸತ್ಯ ಇನ್ ಲವ್ ಚಿತ್ರದಲ್ಲಿ ಗಮನ ಕೊಡಬೇಕಿತ್ತು ಎನಿಸಿತ್ತು ಎಂದೂ ಸಹ ಮುಕ್ತವಾಗಿ ಮಾತನಾಡಿದರು.

  ವೇದಾ ಚಿತ್ರದಲ್ಲಿ ಡಾನ್ಸ್ ಇರುತ್ತಾ?

  ವೇದಾ ಚಿತ್ರದಲ್ಲಿ ಡಾನ್ಸ್ ಇರುತ್ತಾ?

  ಇನ್ನು ವೇದಾ ಚಿತ್ರದಲ್ಲಿ ನೀವು ಸೀರಿಯಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಡಾನ್ಸ್ ಇರಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವ ರಾಜ್‌ಕುಮಾರ್ ಖಂಡಿತವಾಗಿ 100 ಪರ್ಸೆಂಟ್ ಒಂದೊಳ್ಳೆ ಡಾನ್ಸ್ ಚಿತ್ರದಲ್ಲಿ ಇರಲಿದೆ ಹಾಗೂ ಈ ಚಿತ್ರದಲ್ಲಿ ಡಾನ್ಸ್ ತುಸು ಕಷ್ಟವೇ ಇತ್ತು, ಕಾಲಿಗೆ ಗಾಯವಾಗಿತ್ತು ಎಂದು ಹೇಳಿದರು.

  English summary
  I hated my look in Satya in Love movie says Shiva Rajkumar. Read on
  Thursday, December 15, 2022, 17:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X