For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ನಟನಾಗುವ ಬದಲು, ಕ್ರಿಕೆಟರ್ ಆಗ್ತಾರೆ ಅಂದುಕೊಂಡಿದ್ದೆ ಎಂದವರು ಯಾರು?

  By Suneetha
  |

  ಚಂದನವನದಲ್ಲಿ ಹ್ಯಾಟ್ರಿಕ್ ಹೀರೋ ಅಂತಾನೇ ಖ್ಯಾತಿ ಗಳಿಸಿರುವ ನಟ ಶಿವರಾಜ್ ಕುಮಾರ್ ಅವರು ನಟರಾಗುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ ಬದಲಾಗಿ ಅವರೊಬ್ಬ ಕ್ರಿಕೆಟರ್ ಆಗಬಹುದು ಅಂದುಕೊಂಡಿದ್ದೆ. ಎಂದು ನಿರ್ಮಾಪಕ-ಚಲನಚಿತ್ರ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು ನುಡಿದಿದ್ದಾರೆ.

  ನವೆಂಬರ್ 2 ರಂದು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಕಿಲ್ಲಿಂಗ್ ವೀರಪ್ಪನ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಾರಾ ಗೋವಿಂದು ಅವರನ್ನು 'ಕಿಲ್ಲಿಂಗ್ ವೀರಪ್ಪನ್' ಚಿತ್ರತಂಡ ಅಭಿನಂದಿಸಿದರು.['ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್ ಮಾಡಲಿರುವ ಪವರ್ ಸ್ಟಾರ್]

  ಈ ಸಂದರ್ಭದಲ್ಲಿ ಮಾತನಾಡಿದ ಅವರು "ಶಿವಣ್ಣ ಅವರು ನಟರಾಗುವ ಬದಲು, ಕ್ರಿಕೆಟ್ ಆಟಗಾರರಾಗುತ್ತಾರೆ ಎಂದು ನಾನು ತಿಳಿದಿದ್ದೆ, ಅವರು ಸಣ್ಣ ಹುಡುಗನಾಗಿದ್ದಾಗ ಇಲ್ಲಿ ಕ್ರಿಕೆಟ್ ಆಡಲು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದದ್ದು, ಇನ್ನೂ ನನಗೆ ನೆನಪಿದೆ'.

  'ಬ್ಯಾಟ್ ಮತ್ತು ಬಾಲ್ ನ ಆಟ ಎಂದರೆ ಅವರಿಗೆ ಹುಚ್ಚು. ಅವರು ವಾಪಸ್ ಚೆನ್ನೈಗೆ ಹೋಗುವಾಗ ಮರೆಯದೆ ತೆಗೆದುಕೊಂಡು ಹೋಗುತ್ತಿದ್ದ ಒಂದೇ ಒಂದು ವಸ್ತು ಎಂದರೆ ಅದು ಕ್ರಿಕೆಟ್ ಸೆಟ್'. ಎಂದು ಸಾರಾ ಗೋವಿಂದು ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.[ನವೆಂಬರ್ 2 ರಂದು 'ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್]

  ನಿರ್ಮಾಪಕ-ಚಲನಚಿತ್ರ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರನ್ನು ಅಭಿನಂದಿಸಿದ ಶಿವಣ್ಣ ಅವರು, 'ಕನ್ನಡ ಸಿನಿಮಾಗಳನ್ನು ಚಲನಚಿತ್ರ ಮಂಡಳಿ ಉತ್ತೇಜಿಸಬೇಕು ಎಂಬುದಷ್ಟೇ ನನ್ನ ಅಭಿಲಾಷೆ' ಎಂದು ಹೇಳಿದ್ದಾರೆ.

  ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಆಡಿಯೋ ಬಿಡುಗಡೆಯ ಅದ್ದೂರಿ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ನಟ-ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಚಾರಿ ವಿಜಯ್, ರಾಮ್ ಗೋಪಾಲ್ ವರ್ಮಾ, ಪುನೀತ್ ರಾಜ್ ಕುಮಾರ್, ಮತ್ತು ಲಹರಿವೇಲು ಮುಂತಾದ ಚಿತ್ರರಂಗದ ಖ್ಯಾತ ಗಣ್ಯರು ಪಾಲ್ಗೊಂಡಿದ್ದರು.

  English summary
  Sa Ra Govindu, producer and now the President of Karnataka Film Chamber of Commerce never thought that Shivarjkumar would be an actor, but a cricket player. He mentioned it at the audio release of Killing Veerappan, held at Chamundeshwari Studio, on Monday (November 2) in the presence of actor Shivarajkumar and director Ram Gopal Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X