For Quick Alerts
  ALLOW NOTIFICATIONS  
  For Daily Alerts

  ಮನೆಯಲ್ಲಿ ಹೆಂಡ್ತಿ ಮಕ್ಕಳಿದ್ದಾರೆ ಸೇಫ್ ಆಗಿ ಹೋಗ್ತಿವಾ?; 'ಗಂಧದ ಗುಡಿ' ವೇಳೆ ಸಾವಿಗೆ ಹೆದರಿದ್ರು ಅಪ್ಪು!

  |

  ಇಂದು ( ಅಕ್ಟೋಬರ್ 28 ) ರಾಜ್ಯಾದ್ಯಂತ ಪುನೀತ್ ರಾಜಕುಮಾರ್ ಅಭಿನಯದ ಅಂತಿಮ ಚಿತ್ರ ಗಂಧದಗುಡಿ ಭರ್ಜರಿಯಾಗಿ ಬಿಡುಗಡೆಗೊಂಡಿದೆ. ಮೊದಲೇ ಹೇಳಿದಂತೆ ಪುನೀತ್ ರಾಜ್ ಕುಮಾರ್ ಈ ಚಿತ್ರದಲ್ಲಿ ತಾವಾಗಿಯೇ ಕಾಣಿಸಿಕೊಂಡಿದ್ದಾರೆ.

  ಗಂಧದಗುಡಿ ಚಿತ್ರವನ್ನು ಈಗಾಗಲೇ ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಿದ ಪ್ರೇಕ್ಷಕರು ಓರ್ವ ಯಶಸ್ವಿ ನಾಯಕ ನಟ ಇಷ್ಟು ಸರಳವಾಗಿ ಬದುಕಬಹುದೇ ಎಂದು ಮೂಕವಿಸ್ಮಿತರಾಗಿದ್ದಾರೆ. ಅಪ್ಪು ಅವರು ಎಷ್ಟು ಸರಳ ಜೀವಿ ಎಂಬುದನ್ನು ಈ ಹಿಂದೆ ನಾವು ಕೆಲ ಫೋಟೋ ಹಾಗೂ ಸಣ್ಣ ವಿಡಿಯೋ ಕ್ಲಿಕ್ ಮೂಲಕ ಕಂಡಿದ್ದೆವು. ಆದರೆ ಗಂಧದ ಗುಡಿ ಚಿತ್ರ ವೀಕ್ಷಿಸಿದ ನಂತರ ಅಪ್ಪು ಅವರು ಯಾವ ರೀತಿ ಸರಳವಾಗಿ ಜೀವಿಸುತ್ತಿದ್ದರು ಎಂಬ ಸ್ಪಷ್ಟ ಚಿತ್ರಣ ಪ್ರೇಕ್ಷಕರಿಗೆ ಸಿಕ್ಕಿದೆ.

  ಚಿತ್ರದುದ್ದಕ್ಕೂ ಅಪ್ಪು ಕಾಡಿನ ಕುರಿತು ಕುತೂಹಲದಿಂದ ಪ್ರಶ್ನೆ ಕೇಳುವ ರೀತಿ ಹಾಗೂ ತಮಗಾದ ಅನುಭವಗಳನ್ನು ಅಮೋಘವರ್ಷ ಜತೆ ಪುಟ್ಟ ಮಗುವಿನಂತೆ ಹಂಚಿಕೊಳ್ಳುವ ರೀತಿ ಕಂಡ ಸಿನಿಪ್ರೇಕ್ಷಕರು ಆಶ್ಚರ್ಯಕ್ಕೊಳಗಾಗುವುದರ ಜೊತೆಗೆ ಭಾವುಕರಾಗಿದ್ದಾರೆ. ಅದರಲ್ಲಿಯೂ ಚಿತ್ರವೊಂದರ ದೃಶ್ಯದಲ್ಲಿ ಪುನೀತ್ ರಾಜ್ ಕುಮಾರ್ ಸಾವಿನ ಕುರಿತಾಗಿ ಆಡಿದ ಮಾತುಗಳು ಅಭಿಮಾನಿಗಳ ಕಣ್ಣಂಚಲಿ ನೀರು ತರಿಸಿವೆ.

   ಸೇಫ್ ಆಗಿ ಮನೆಗೆ ಹೋಗ್ತೀವಾ ಎಂದಿದ್ರು ಅಪ್ಪು

  ಸೇಫ್ ಆಗಿ ಮನೆಗೆ ಹೋಗ್ತೀವಾ ಎಂದಿದ್ರು ಅಪ್ಪು

  ಗಂಧದಗುಡಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಅಮೋಘವರ್ಷ ಪಶ್ಚಿಮ ಘಟ್ಟದ ಕಾಡಿಗೆ ಭೇಟಿ ನೀಡ್ತಾರೆ. ಈ ಸಂದರ್ಭದಲ್ಲಿ ಸಪ್ಪಳವೊಂದನ್ನು ಕೇಳಿ ಪುನೀತ್ ಕುತೂಹಲದಿಂದ ಇದೇನು ಶಬ್ದ ಎಂದು ಅಮೋಘ ಅವರಿಗೆ ಪ್ರಶ್ನೆ ಹಾಕುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ಅಮೋಘವರ್ಷ ಅದು ಹಾವಿನ ಶಬ್ದವಿರಬಹುದು, ಇಲ್ಲಿ ವಿಪರೀತ ಹಾವುಗಳಿವೆ ಎನ್ನುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಹಾವು ಎಂದರೆ ಸಿಕ್ಕಾಪಟ್ಟೆ ಭಯ ಪಡುವ ಪುನೀತ್ ಇನ್ನೂ 3 ಚಿತ್ರಗಳಿವೆ, ಮನೆಯಲ್ಲಿ ಹೆಂಡತಿ ಮಕ್ಕಳಿದ್ದಾರೆ ನಾವು ಸೇಫ್ ಆಗಿ ಮನೆ ಸೇರುತ್ತೀವಾ ಎಂದು ಪ್ರಶ್ನೆಯನ್ನು ಮಾಡಿದ್ದರು. ಹೀಗೆ ಅಪ್ಪು ಅಂದಿನ ದಿನವೇ ಸಾವಿನ ಕುರಿತು ಭಯ ವ್ಯಕ್ತಪಡಿಸಿದ್ದರು.

   ದೇವರಿಗೆ ಶಾಪ ಹಾಕಿದ ಫ್ಯಾನ್ಸ್

  ದೇವರಿಗೆ ಶಾಪ ಹಾಕಿದ ಫ್ಯಾನ್ಸ್

  ಹೀಗೆ ಅಪ್ಪು ಹೇಳಿದ ಈ ಮಾತನ್ನು ಕೇಳಿ ಅಭಿಮಾನಿಗಳು ದೇವರಿಗೆ ಹಿಡಿಶಾಪ ಹಾಕಿದ್ದಾರೆ. ಇನ್ನೂ ಹಲವಾರು ಚಿತ್ರಗಳಲ್ಲಿ ಅಭಿನಯಿಸಬೇಕು ಹಾಗೂ ಕುಟುಂಬದ ಜತೆ ಚೆನ್ನಾಗಿ ಬಾಳಬೇಕು ಎಂಬ ಆಶಯವನ್ನು ಹೊಂದಿದ್ದ ಅಪ್ಪು ಅವರನ್ನು ಬೇಗನೇ ತಮ್ಮಿಂದ ಕಿತ್ತುಕೊಂಡೆಯಲ್ಲಾ ಎಂದು ದೇವರನ್ನು ದೂಷಿಸಿದ್ದಾರೆ.

   ಚಿಕ್ಕ ವಯಸ್ಸಿನಿಂದಲೂ ಹಾವುಗಳೆಂದರೆ ಅಪ್ಪುಗೆ ಭಯ

  ಚಿಕ್ಕ ವಯಸ್ಸಿನಿಂದಲೂ ಹಾವುಗಳೆಂದರೆ ಅಪ್ಪುಗೆ ಭಯ

  ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಾವುಗಳ ಸರಮಾಲೆಯನ್ನು ಹಾಕಿಕೊಂಡು ನಟಿಸಿದ್ದ ಅಪ್ಪು ವೀಕ್ಷಕರಿಂದ ಸೈ ಎನಿಸಿಕೊಂಡಿದ್ದರು. ಆದರೆ ಪುನೀತ್ ರಾಜ್ ಕುಮಾರ್ ಅಂದು ಕೂಡ ಭಯದಿಂದಲೇ ಹಾವುಗಳನ್ನು ಕುತ್ತಿಗೆಯಲ್ಲಿ ಇರಿಸಿಕೊಂಡು ನಟಿಸಿದ್ದರಂತೆ. ಹೌದು ಹಾವುಗಳು ಕುತ್ತಿಗೆಗೆ ಸುತ್ತಿಕೊಂಡಾಗ ಅವುಗಳು ಮಾಡುತ್ತಿದ್ದ ಶಬ್ದ ಇಂದಿಗೂ ಸಹ ನೆನಪಿದೆ ಎನ್ನುತ್ತಾರೆ ಪುನೀತ್ ರಾಜ್ ಕುಮಾರ್. ಹೀಗಾಗಿಯೇ ದೊಡ್ಡವನಾಗಿ ಬೆಳೆದ ನಂತರವೂ ಸಹ ಪುನೀತ್ ಅವರಿಗೆ ಹಾವುಗಳೆಂದರೆ ಸಿಕ್ಕಾಪಟ್ಟೆ ಭಯವಿತ್ತು.

  English summary
  I wanna go home safely: Puneeth Rajkumar's dialogue from Gandhada Gudi made fans cry at theatre . Read on
  Friday, October 28, 2022, 17:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X