»   » ಸೋದರನ ಜತೆ ಇದ್ದೆ: ಅದ್ಕೇ ಬಂಧಿಸೋದಾ? ಪೂನಂ

ಸೋದರನ ಜತೆ ಇದ್ದೆ: ಅದ್ಕೇ ಬಂಧಿಸೋದಾ? ಪೂನಂ

Posted By:
Subscribe to Filmibeat Kannada

ಮುಂಬೈ, ಮೇ 5: ಮೊನ್ನೆ ಶುಕ್ರವಾರ ಏನೋ ಮಾಡಬಾರದ ತಪ್ಪು ಮಾಡಿದವಳಂತೆ ಪೂನಂ ಪಾಂಡೆ ಎಂಬ ಬಾಲಿವುಡ್ಡಿನ ಯುವ ಬೆಡಗಿಯನ್ನು ಪೊಲೀಸರು ಬಂಧಿಸಿಬಿಟ್ಟಿದ್ದಾರಂತೆ ಎಂಬ ಸುದ್ದಿಯನ್ನು ಧಾವಂತ ಪಟ್ಟುಕೊಂಡು ಓದಿದವರಿಗೆ ಪ್ರಕರಣದ ಮತ್ತೊಂದು ಮುಖ ಅಂದರೆ ಪೂನಂ ಪಾಂಡೆಯ ಪ್ರತಿಕ್ರಿಯೆ ಏನು ಎಂಬುದನ್ನು ಇಲ್ಲಿ ನೀಡಲಾಗಿದೆ.

'ಏನೋ ಆವತ್ತು ವೀಕೆಂಡ್ ಮೂಡಿನಲ್ಲಿ ತಡರಾತ್ರಿ ನನ್ನ ಸೋದರನ ಜತೆ ಇದ್ದೆ. ಅದ್ಕೇ ನನ್ನನ್ನು ಈ ಮುಂಬೈ ಪೊಲೀಸರು ಬಂಧಿಸೋದಾ?' ಎಂದು ಪೂನಂ ಪಾಂಡೆ ಎಂಬ ಮಾಡೆಲ್ ಅಮಾಯಕವಾಗಿ ಪ್ರಶ್ನಿಸಿದ್ದಾರೆ. 'ಅಷ್ಟಕ್ಕೂ ಅವರೇನೂ ನನ್ನನ್ನು ಬಂಧಿಸಲಿಲ್ಲ. ಸುಮ್ಕೆ ಬಂಧಿಸುವಂತೆ ಮಾಡಿ, ವಸಿ ಬುದ್ಧಿ ಹೇಳಿ ಕಳುಹಿಸಿದ್ದಾರೆ' ಎಂದೂ ಒಗ್ಗರಣೆ ಹಾಕಿದ್ದಾರೆ ಸನ್ಮಾನ್ಯ ಪೂನಂ ಪಾಂಡೆ. (ರೇಪ್ ಕಡಿವಾಣಕ್ಕೆ ಗಂಡಂದಿರನ್ನು ಸಂತೃಪ್ತಿಗೊಳಿಸಿ ಸಾಕು)

I was listening to songs- it was not indecent behaviour - Poonam Pandey in Twitter

'ಇಷ್ಟಕ್ಕೂ ನಾನು ನನ್ನ ಸೋದರನ ಜತೆಯಿರುವುದು ಅಂತ ಅವರಿಗೂ (ಪೊಲೀಸರಿಗೆ) ಗೊತ್ತಿತ್ತು. ಆದರೆ ನಾನು ಸೆಲೆಬ್ರಿಟಿ ಅಂತ ಗೊತ್ತಾದ ತಕ್ಷಣ ನನ್ನನ್ನು ಬಂಧಿಸುವ ನಾಟಕವಾಡಿದರು. ಅದು ನಿಜಕ್ಕೂ ನನಗೆ ಮಾನಸಿಕ ಕ್ಷೋಭೆಯ ಕ್ಷಣಗಳು. ಅಷ್ಟಕ್ಕೂ ನಾನು ಮಾಡಿದ ತಪ್ಪಾದರೂ ಏನು?' ಎಂದು ಅಮಾಯಕವಾಗಿ ಪೂನಂ ಕೇಳಿದ್ದಾರೆ.

'Listening to songs in the car is not an 'indecent behaviour' pls stop spreading such kinda news about me' ಎಂದೂ ಟ್ವಿಟ್ಟರಿನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
<blockquote class="twitter-tweet blockquote" lang="en"><p>Listening to songs in the car is not an 'indecent behaviour' pls stop spreading such kinda news about me.</p>— Poonam Pandey (@iPoonampandey) <a href="https://twitter.com/iPoonampandey/statuses/462469729068654592">May 3, 2014</a></blockquote> <script async src="//platform.twitter.com/widgets.js" charset="utf-8"></script>

ಇದಕ್ಕೆ ಪೊಲೀಸರು ಏನು ಹೇಳುತ್ತಾರೆಂದರೆ...
Love is Poison ಚಿತ್ರದ ಕಥಾನಾಯಕಿ ಪೂನಂ ಪಾಂಡೆ ಯಾವುದೋ ಗಂಡಸಿನ ಜತೆ ರಸ್ತೆಯಲ್ಲಿ ಅಶ್ಲೀಲವಾಗಿ/ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಇದನ್ನು ನೋಡಿ ದಾರಿ ಹೋಕರು ಅಲ್ಲಿ ಜಮಾಯಿಸಿದರು. ಪರಿಸ್ಥಿತಿ ಕೈಮೀರುವುದನ್ನು ಅರಿತು ಅವರಲ್ಲೇ ಒಬ್ಬರು ನಮಗೆ ಫೋನ್ ಮಾಡಿ ವಿಷಯ ತಿಳಿಸಿದರು. ನಾವು ತಕ್ಷಣ ಸ್ಥಳಕ್ಕೆ ಧಾವಿಸಿ, ಆಕೆಯನ್ನು ಬಂಧಿಸಿ ಠಾಣೆಗೆ ಕರೆತಂದು ಬುದ್ಧಿವಾದ ಪ್ಲಸ್ ಖಡಕ್ ವಾರ್ನಿಂಗ್ ಕೊಟ್ಟು ಬಿಟ್ಟುಕಳುಹಿಸಿದೆವು/ ಆಕೆ ಸ್ಟಾರೋ ಮತ್ತೊಂದೂ. ನಾವು ಅದ್ನೆಲ್ಲಾ ನೋಡಲಿಲ್ಲ. Bombay Police Act ಪ್ರಕಾರ ಆಕೆಯ ವಿರುದ್ಧ ಕ್ರಮ ಜರುಗಿಸಿದೆವು ಅಷ್ಟೆ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಹಿಂದಿನ ಸುದ್ದಿ: ಶುಕ್ರವಾರ ತಡರಾತ್ರಿ ಮುಂಬೈ ಪೊಲೀಸರು ವಿವಾದಿತ ನಟಿ, ಮಾಡೆಲ್ ಪೂನಂ ಪಾಂಡೆ ಅವರನ್ನು ಬಂಧಿಸಿದ್ದಾರೆ.

ಮುಂಬೈನ ಮೀರಾ ರಸ್ತೆಯಲ್ಲಿ ಅಸಭ್ಯ ವರ್ತನೆಗಾಗಿ ನಿನ್ನೆ ರಾತ್ರಿ ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ಅವರನ್ನು ಬಂಧಿಸಿದ್ದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ/ ಅಶ್ಲೀಲವಾಗಿ ವರ್ತಿಸುತ್ತಿದ್ದ ಪೂನಂ ಪಾಂಡೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆವು. ಆನಂತರ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ.

ನಿನ್ನೆ ರಾತ್ರಿ 10.30 ರಿಂದ 11 ಗಣಟೆಯ ನಡುವೆ ತುಂಡುಡುಗೆ ತೊಟ್ಟು ಯಾರಿಗೋ ಕಾಯುತ್ತಾ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಳು. ಹಾಗಾಗಿ ಆ ಯುವತಿಯನ್ನು ಬಂಧಿಸಿ, ಠಾಣೆಗೆ ಕರೆತಂದಿವಿ ಎಂದು Mira Road ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಫುಲ್ ವಾಘ್ ತಿಳಿಸಿದ್ದಾರೆ.

ಅಂದಹಾಗೆ 23 ವರ್ಷದ ತರುಣಿ ಪೂನಂ ಹೀಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಇದೇ ಮೊದಲಲ್ಲ. ನಟಿ ಪೂನಂ ಪಾಂಡೆ ತಾಜಾ ಆಗಿ ನಶಾ ಎಂಬ ಮಾದಕ ಚಿತ್ರದಲ್ಲಿ ನಟಿಸಿದ್ದರು. (ನಟಿ ಪೂನಂ ಪಾಂಡೆ ಯಾವುದೇ ಕ್ಷಣದಲ್ಲಿ ಬಂಧನ)

English summary
I was listening to songs- it was not indecent behaviour says Poonam Pandey in Twitter. Bollywood actress Poonam Pandey was arrested late on Friday night from Mira road in Mumbai. She was held for allegedly behaving indecently in public. The actress was later released after a warning from the police.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada