Just In
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Automobiles
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'16ನೇ ವಯಸ್ಸಿನಲ್ಲೇ ನನ್ನ ಮೇಲೆ ಅತ್ಯಾಚಾರ ನಡೆದಿತ್ತು' ಎಂದ ಟಿವಿ ನಿರೂಪಕಿ

'ನಾನು ಹದಿನಾರನೇ ವಯಸ್ಸಿನಲ್ಲಿದ್ದಾಗಲೇ ನನ್ನ ಮೇಲೆ ಅತ್ಯಾಚಾರವಾಗಿತ್ತು. ಆದರೆ ನಾನು 32 ವರ್ಷಗಳ ಕಾಲ ಈ ಬಗ್ಗೆ ಮಾತನಾಡದೆ ಸುಮ್ಮನಿದ್ದೆ' ಎಂದು ಅಮೆರಿಕದ ಮಾಡೆಲ್, ಟಿ ವಿ ನಿರೂಪಕಿ ಮತ್ತು ಲೇಖಕಿ ಪದ್ಮಾ ಲಕ್ಷ್ಮಿ ಸ್ಫೋಟಕ ಸತ್ಯ ಹೊರಹಾಕಿದ್ದಾರೆ.
'ಹೆಚ್ಚೇನೂ ತಿಳಿಯದ ಹದಿನಾರನೇ ವಯಸ್ಸಿನಲ್ಲಿ ನಮಬಿದ್ದ ವ್ಯಕ್ತಿಯಿಂದಲೇ ಇಂಥ ಆಘಾತ ಎದುರಿಸಿದ್ದು, ನನ್ನ ಮನಸ್ಸನ್ನು ಘಾಸಿಗೊಳಿಸಿತ್ತು.
'ನನ್ನ ಮೇಲಿನ ರೇಪ್ ಗೆ ನಾನೇ ಕಾರಣ' ಎಂದ ಪಾಪ್ ಗಾಯಕಿ ಯಾರು?
ಇದನ್ನು ಯಾರೊಂದಿಗೆ ಹಂಚಿಕೊಳ್ಳೋದು ಎಂಬುದು ಗೊತ್ತಿರಲಿಲ್ಲ. ನಾನು ಇಷ್ಟು ವರ್ಷಗಳ ಕಾಲ ಇದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಸುಮ್ಮನಿದ್ದೆ' ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಅವರು ನ್ಯೂಯಾರ್ಕ್ ಟೈಮ್ಸ್ ನಲ್ಲಿ ಬರೆದ ಲೇಖನದ ಸಾರ ಇಲ್ಲಿದೆ...
'ಬಿಸಿಲುಕುದುರೆ' ನಟಿ ರೇಪ್ ಪ್ರಕರಣಕ್ಕೆ ಹೊಸ ತಿರುವು

ನಾನು ಅವನನ್ನು ಪ್ರೀತಿಸುತ್ತಿದ್ದೆ!
"ನನಗಾಗ ಹದಿನಾರು ವರ್ಷ ವಯಸ್ಸು. 23 ವರ್ಷ ವಯಸ್ಸಿನ ಯುಕನೊಬ್ಬನೊಂದಿಗೆ ನಾನು ಡೇಟಿಂಗ್ ನಡೆಸುತ್ತಿದೆ. ಆ ಸಮಯದಲ್ಲಿ ನಾನೂ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದೆ. ಆತನೂ ರಾಬಿನ್ಸನ್ ಮೇ ಎಂಬಲ್ಲಿ ಕೆಲಸ ಮಾಡುತ್ತಿದ್ದ. ನೋಡವುದಕ್ಕೆ ಸುಂದರವಾಗಿದ್ದ, ನಾನೂ ಆತನ ಪ್ರೀತಿಯಲ್ಲಿ ಬಿದ್ದಿದ್ದೆ. ಆತ ನಮ್ಮ ಕುಟುಂಬಕ್ಕೂ ಪರಿಚಿತನಾಗಿದ್ದ. ನಾನು ಕಾಲೇಜು ಮುಗಿಸಿ ಹೊರಡುವುದು ತಡವಾದರೆ ನನ್ನನ್ನು ಮನೆಗೆ ಜೋಪಾನವಾಗಿ ಬಿಡುತ್ತಿದ್ದ. ಆದರೆ ಆತ ನನ್ನನ್ನು ಕಾಮದ ಕಣ್ಣಿನಿಂದ ನೋಡುತ್ತಿದ್ದ ಎಂಬುದು ನನಗೆ ತಿಳಿದಿರಲಿಲ್ಲ" -ಪದ್ಮಾ ಲಕ್ಷ್ಮಿ

ಹೊಸ ವರ್ಷದ ಸಂಭ್ರಮಾಚರಣೆ
"ಹೊಸ ವರ್ಷ ಸಂಭ್ರಮಾಚರಣೆಯ ಸಮಯದಲ್ಲಿ ಆತ ನನ್ನನ್ನು ಪಾರ್ಟಿಗೆ ಕರೆದೊಯ್ದು, ನಂತರ ನನ್ನ ಮೇಲೆ ಅತ್ಯಾಚಾರ ಎಸಗಿದ. ನಾನು ಅರೆಪ್ರಜ್ಞಾವ್ಥೆಯಲ್ಲಿದ್ದ. ನಾನೇನು ಪ್ರಚೋದನೆ ನೀಡುವಂಥ ಬಟ್ಟೆ ತೊಟ್ಟಿರಲಿಲ್ಲ. ಮದ್ಯವನ್ನೂ ಸೇವಿಸಿರಲಿಲ್ಲ. ಆತನೊಂದಿಗೆ ಅಷ್ಟು ಹೊತ್ತಿನಲ್ಲಿ ಹೋಗುವ ಅಗತ್ಯವೇನಿತ್ತು ಎಂದು ನೀವು ಕೇಳಬಹುದು. ನನಗೆ ಆತನ ಮೇಲೆ ಪ್ರೀತಿಯಿತ್ತು. ನಂಬಿಕೆ ಇತ್ತು. ಆತನ ಮನಸ್ಸಿನಲ್ಲಿ ಅಂಥ ಕ್ರೌರ್ಯವಿದೆ ಎಂಬುದುನ್ನು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ!"

32 ವರ್ಷಗಳ ನಂತರ ಹೊರಬಂದ ಸತ್ಯ!
ಇತ್ತೀಚೆಗಷ್ಟೇ ಅಮೆರಿಕ ಸುಪ್ರೀಂ ಕೋರ್ಟ್ ನಾಮಿನಿ ಬ್ರೆಟ್ ಕವನಾಫ್ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪದ್ಮಾ ಲಕ್ಷ್ಮಿ ತಮ್ಮ ಅನುಭವವನ್ನೂ ಹೊರಹಾಕಿದ್ದಾರೆ. ಪದ್ಮಅ ಲಕ್ಷ್ಮಿ ಅವರು ಏಉ ವರ್ಷ ವಯಸ್ಸಿನಲ್ಲಿದ್ದಾಗಲೇ ಅವರ ಸಂಬಂಧಿಯೊಬ್ಬರು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿಸದ್ದರು. ಇದರಿಂದ ಭಯಗೊಂಡ ಆಕೆ ಈ ವಿಷಯವನ್ನು ತನ್ನ ತಂದೆ-ತಾಯಿಗೆ ತಿಳಿಸಿದ್ದರು. ಪಾಲಕರು ಕೂಡಲೇ ಪದ್ಮಾ ಅವರನ್ನು ಅವರ ಅಜ್ಜಿ-ಅಜ್ಜ ನ ಊರಿಗೆ ಕಳಿಸಿ, ಅಲ್ಲಿಯೇ ಕೆಲ ವರ್ಷ ಉಲಿಯುವಂತೆ ಮಾಡಿದರು. 16 ನೇ ವಯಸ್ಸಿನಲ್ಲಿ ನಡೆದ ಅಚಾತುರ್ಯದ ಬಗ್ಗೆ ಹೇಳಿದರೂ ಅಪ್ಪ-ಅಮ್ಮ ಎಲ್ಲಿ ತನ್ನನ್ನು ಮತ್ತೆ ದೂರ ಕಳಿಸುತ್ತಾರೋ ಎಂಬ ಭಯಕ್ಕೆ ಅವರು ಸುಮ್ಮನಿದ್ದರು ಎಂದು ಲೇಖನದಲ್ಲಿ ಆವರು ಬರೆದುಕೊಂಡಿದ್ದಾರೆ.

ಯಾರು ಪದ್ಮಾ ಲಕ್ಷ್ಮಿ?
ಪದ್ಮಾ ಲಕ್ಷ್ಮಿ ಮೂಲತಃ ತಮಿಳುನಾಡಿನ ಚೆನ್ನೈ ನವರು. 1970 ಸೆ.1 ರಂದು ಜನಿಸಿದ ಲಕ್ಷ್ಮಿ, ಕ್ಯಾಲಿಫೋರ್ನಿಯಾದಲ್ಲಿ ವಿದ್ಯಾಭ್ಯಾಸ ಮುಗಿಸಿದರು. ರೂಪದರ್ಶಿಯಾಗಿ, ಲೇಖಕಿಯಾಗಿ, ಟಿವಿ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿರುವ ಅವರು ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿ ಅವರು ಮಾಜಿ ಪತ್ನಿಯೂ ಹೌದು. ನಂತರ ಆಡಂ ಡೆಲ್ ಅವರ ಜೊತೆ ಜೀವನ ಆರಂಭಿಸಿದ ಪದ್ಮಾ ಲಕ್ಷ್ಮಿ ಅವರಿಗೆ ಕೃಷ್ಣಾ ಎಂಬ ಎಂಟು ವರ್ಷ ವಯಸ್ಸಿನ ಮಗಳಿದ್ದಾಳೆ.