For Quick Alerts
  ALLOW NOTIFICATIONS  
  For Daily Alerts

  ನಮ್ಮ ಅಪ್ಪು ಸರ್ ಹೆಸರಿನಲ್ಲಿ ಈ ಕೆಲಸ ಮಾಡ್ತೀನಿ ಎಂದ ಯಶ್; ಸೀಟಿನಿಂದ ಎದ್ದು ಕೈಮುಗಿದ ಪ್ರಕಾಶ್ ರಾಜ್

  |

  ನಿನ್ನೆ ( ಅಕ್ಟೋಬರ್ 21 ) ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅಭಿನಯದ ಅಂತಿಮ ಚಿತ್ರ ಗಂಧದಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು.

  ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತ ಚಿತ್ರರಂಗದ ಹಲವಾರು ತಾರೆಗಳಿಗೆ ಆಹ್ವಾನವನ್ನು ನೀಡಲಾಗಿತ್ತು. ಈ ಪೈಕಿ ಬಹುತೇಕರು ಕಾರ್ಯಕ್ರಮಕ್ಕೆ ಆಗಮಿಸಿದರೆ, ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಹಾಜರಾಗದೆ ಇದ್ದವರು ವಿಡಿಯೋ ಮೂಲಕ ಅಪ್ಪು ಅವರನ್ನು ನೆನೆದು ಮಾತನಾಡಿದರು.

  ಅಪ್ಪುವನ್ನು ಲೋಹಿತ್ ಎನ್ನುತ್ತಿದ್ದೆ; ಅಪ್ಪುಗಿಂತ ನಾವು ಆ ನಟನ ಭಕ್ತರು ಎಂದ ಸುಧಾ ಮೂರ್ತಿಅಪ್ಪುವನ್ನು ಲೋಹಿತ್ ಎನ್ನುತ್ತಿದ್ದೆ; ಅಪ್ಪುಗಿಂತ ನಾವು ಆ ನಟನ ಭಕ್ತರು ಎಂದ ಸುಧಾ ಮೂರ್ತಿ

  ಇನ್ನು ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನವನ್ನು ಸೆಳೆದದ್ದು ತಮಿಳಿನ ಸ್ಟಾರ್ ನಟ ಸೂರ್ಯ ಹಾಗೂ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ಆಡಿದ ಮಾತುಗಳು. ಪುನೀತ್ ರಾಜ್ ಕುಮಾರ್ ಅವರು ನಂಬರ್ 1ಗಿಂತ ಮೇಲೆ ಎಂದು ನಟ ಸೂರ್ಯ ಹೊಗಳಿದರೆ, ಯಶ್ ಪುನೀತ್ ರಾಜ್ ಕುಮಾರ್ ಅವರ ಜತೆಗಿನ ತಮ್ಮ ಒಡನಾಟ ಹಾಗೂ ಅಪ್ಪು ಅವರ ಯೋಜನೆ ಮತ್ತು ಚಿಂತನೆಗಳನ್ನು ನೆನೆದು ಕೊಂಡಾಡಿದರು. ಇನ್ನು ಸದಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದ ಅಪ್ಪು ಅವರಿಗಾಗಿ ನಡೆದ ಈ ಕಾರ್ಯಕ್ರಮದಲ್ಲಿ ಯಶ್ ಕೂಡ ಮತ್ತೊಂದು ಸಮಾಜಮುಖಿ ಕೆಲಸವನ್ನು ಮಾಡಲು ಮುಂದಾಗುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.

  ಅಪ್ಪು ಎಕ್ಸ್‌ಪ್ರೆಸ್‌ ಆಂಬ್ಯುಲೆನ್ಸ್

  ಅಪ್ಪು ಎಕ್ಸ್‌ಪ್ರೆಸ್‌ ಆಂಬ್ಯುಲೆನ್ಸ್

  ಕಾರ್ಯಕ್ರಮದಲ್ಲಿ ಯಶ್ ಮಾತನಾಡುವ ಮುನ್ನ ಪ್ರಕಾಶ್ ರಾಜ್ ಮಾತನಾಡಿದ್ದರು. ಅಪ್ಪು ನಿಧನದ ನಂತರ ಅವರ ನೆನಪಿನಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿಯೂ ಅಪ್ಪು ಎಕ್ಸ್‌ಪ್ರೆಸ್‌ ಹೆಸರಿನಡಿಯಲ್ಲಿ ಆಂಬ್ಯುಲೆನ್ಸ್ ಸೇವೆ ನೀಡಲು ನಿರ್ಧರಿಸಿದ್ದೆ ಎಂದರು. 'ಮನಸ್ಸಿನಲ್ಲಿ ಅಂದುಕೊಳ್ಳುವುದಿಲ್ಲ ಏನಾದರೂ ಮಾಡಬೇಕು ಪ್ರಕಾಶ್ ಸರ್' ಎಂದು ಅಪ್ಪು ಹೇಳಿದ್ದ ಮಾತೇ ಈ ಕೆಲಸ ಮಾಡಲು ಸ್ಫೂರ್ತಿ ಎಂದು ಪ್ರಕಾಶ್ ರಾಜ್ ಹೇಳಿಕೊಂಡರು. ಹಾಗಾಗಿಯೇ ಮೈಸೂರಿನಲ್ಲಿ ಒಂದು ಆಂಬ್ಯುಲೆನ್ಸ್ ಸೇವೆ ಆರಂಭಿಸಿ ಅಪ್ಪು ಎಕ್ಸ್‌ಪ್ರೆಸ್‌ ಶುರುಮಾಡಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.

  ಪ್ರಕಾಶ್ ರಾಜ್ ಯೋಜನೆಗೆ ಕೈಜೋಡಿಸಿದ ಶಿವಣ್ಣ, ಸೂರ್ಯ, ಚಿರಂಜೀವಿ

  ಪ್ರಕಾಶ್ ರಾಜ್ ಯೋಜನೆಗೆ ಕೈಜೋಡಿಸಿದ ಶಿವಣ್ಣ, ಸೂರ್ಯ, ಚಿರಂಜೀವಿ

  ಹೀಗೆ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಿಗೂ ಅಪ್ಪು ಹೆಸರಿನಡಿಯಲ್ಲಿ ಆಂಬ್ಯುಲೆನ್ಸ್ ಒದಗಿಸಲು ದೊಡ್ಡ ಯೋಜನೆ ಹಾಕಿಕೊಂಡಿದ್ದ ಪ್ರಕಾಶ್ ರಾಜ್ ಅವರಿಗೆ ಶಿವಣ್ಣ, ಸೂರ್ಯ ಹಾಗೂ ತೆಲುಗಿನ ಚಿರಂಜೀವಿ ನಾವೂ ಸಹ ಒಂದೊಂದು ಆ್ಯಂಬ್ಯುಲೆನ್ಸ್ ನೀಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಈ ವಿಷಯವನ್ನು ಪ್ರಕಾಶ್ ರಾಜ್ ಗಂಧದಗುಡಿ ಪ್ರಿ ರಿಲೀಸ್ ವೇದಿಕೆ ಮೇಲೆ ಬಿಚ್ಚಿಟ್ಟರು.

  ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ನೀಡಲು ಮುಂದಾದ ಯಶ್, ಕೈಮುಗಿದ ಪ್ರಕಾಶ್ ರಾಜ್

  ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ನೀಡಲು ಮುಂದಾದ ಯಶ್, ಕೈಮುಗಿದ ಪ್ರಕಾಶ್ ರಾಜ್

  ಹೀಗೆ ಅಪ್ಪು ಹೆಸರಿನಡಿಯಲ್ಲಿ ರಾಜ್ಯದ ಪೂರ್ತಿ ಆಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿರುವ ಪ್ರಕಾಶ್ ರಾಜ್ ಅವರ ಯೋಜನೆಗೆ ಸ್ಪಂದಿಸಿದ ಯಶ್ ಗಂಧದಗುಡಿ ವೇದಿಕೆ ಮೇಲೆ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಒದಗಿಸಲು ನಾನು ಸಿದ್ಧನಿದ್ದೇನೆ ಎಂದು ಘೋಷಿಸಿದರು. 'ಅನ್ಯತಾ ಭಾವಿಸಬೇಡಿ, ನನ್ನದು ಯಶೋಮಾರ್ಗ ಎಂಬ ಫೌಂಡೇಶನ್ ಇದೆ, ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಒದಗಿಸುವ ಸೇವೆಯನ್ನು ನಾನು ನನ್ನ ಸ್ನೇಹಿತ ಮಾಡುತ್ತೇವೆ. ನಮ್ಮ ಅಪ್ಪು ಅವರ ಹೆಸರಿನಲ್ಲಿ ನೀವು ಈ ಯೋಜನೆ ಆರಂಭಿಸಿದ್ದೀರಾ, ಆ ಕನಸು ಈ ಕ್ಷಣದಿಂದಲೇ ನನಸಾಗಬೇಕು, ಉಳಿದ 25 ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಸೇವೆ ಒದಗಿಸುತ್ತೇನೆ' ಎಂದು ಹೇಳಿಕೆ ನೀಡುವುದರ ಮೂಲಕ ಯಶ್ ಅಪ್ಪು ಎಕ್ಸ್‌ಪ್ರೆಸ್‌ ಯೋಜನೆಗೆ ಬೃಹತ್ ಕೊಡುಗೆಯನ್ನು ನೀಡಿದರು. ಹೀಗೆ ಯಶ್ ಹೇಳಿಕೆ ನೀಡುತ್ತಿದ್ದಂತೆ ಭಾವುಕರಾದ ಪ್ರಕಾಶ್ ರಾಜ್ ತಮ್ಮ ಸೀಟಿನಿಂದ ಎದ್ದು ನಿಂತು ಯಶ್ ಅವರಿಗೆ ಕೈಮುಗಿದು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು ಹಾಗೂ ವೇದಿಕೆಗೆ ಓಡಿಹೋಗಿ ಯಶ್ ಅವರನ್ನು ಅಪ್ಪಿಕೊಂಡರು.

  English summary
  I will arrange the ambulance service for entire Karnataka under our Appu sir name says Yash
  Saturday, October 22, 2022, 10:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X