For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ ಸ್ಪರ್ಧಿ ದಿವಾಕರ್ ವಿರುದ್ಧ ದೂರು ಕೊಡುತ್ತೇನೆಂದ ಅಹೋರಾತ್ರ?

  |

  ಆನ್‌ಲೈನ್ ರಮ್ಮಿ ವಿರುದ್ಧ ಸಮರ ಸಾರಿರುವ ಅಹೋರಾತ್ರ, ತಮ್ಮ ಫೇಸ್‌ಬುಕ್‌ನಲ್ಲಿ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಸುದೀಪ್ ವಿರುದ್ಧ, ರಮ್ಮಿ ಆಟದ ವಿರುದ್ಧ ಪೋಸ್ಟ್‌ಗಳನ್ನು ಹಾಕುತ್ತಲಿರುತ್ತಾರೆ.

  ಬಿಗ್ ಬಾಸ್ ದಿವಾಕರ್ ವಿರುದ್ಧ ದೂರು ಕೊಡಲು ಮುಂದಾದ ಅಹೋರಾತ್ರ..?

  ಇದಕ್ಕೆ ಪ್ರತಿರೋಧವಾಗಿ ಹಲವಾರು ಸುದೀಪ್ ಅಭಿಮಾನಿಗಳು ಅಹೋರಾತ್ರಗೆ ಕರೆ ಮಾಡಿ ಒರಟಾಗಿ ಮಾತನಾಡಿದ್ದರು. ಕೆಲವರು ಬೆದರಿಕೆಯನ್ನೂ ಹಾಕಿದ್ದರು. ಈ ಬಗ್ಗೆ ಅಹೋರಾತ್ರ ದೂರು ಸಹ ನೀಡಿದ್ದರು.

  ಅಹೋರಾತ್ರ ಅವರಿಗೆ ಇದೇ ವಿಷಯವಾಗಿ ದಿನಾಕರ್ ಎಂಬಾತ ಕರೆ ಮಾಡಿದ್ದು, 'ದಿವಾಕರ್ ಬಿಗ್‌ಬಾಸ್ ಕಿಚ್ಚ' ಎಂಬ ಕಾಲರ್ ಐಡಿ ಪ್ರಕಟವಾಗಿದೆ. ಇದು ಬಿಗ್‌ಬಾಸ್‌ನಲ್ಲಿ ರನ್ನರ್ ಅಪ್ ಆಗಿದ್ದ ದಿವಾಕರ್‌ ಅವರದ್ದೇ ಕರೆ ಎನ್ನಲಾಗುತ್ತಿದೆ.

  ಆನ್‌ಲೈನ್ ರಮ್ಮಿ ವಿಷಯವಾಗಿ ಕರೆ

  ಆನ್‌ಲೈನ್ ರಮ್ಮಿ ವಿಷಯವಾಗಿ ಕರೆ

  ಆನ್‌ಲೈನ್ ರಮ್ಮಿ ವಿಷಯವಾಗಿ ಮಾತನಾಡಲೆಂದು ದಿವಾಕರ್ ಅಹೋರಾತ್ರ ಗೆ ಕರೆ ಮಾಡಿದ್ದಾರೆ. ಆದರೆ ರಮ್ಮಿ ಕುರಿತು ಮಾತು ಸೀಮಿತಗೊಳ್ಳದೆ ಪರಸ್ಪರ ನಿಂದನೆ ಕಡೆ ಮಾತುಗಳು ಹರಿದಿರುವುದು ಆಡಿಯೋ ಕ್ಲಿಪ್ ಕೇಳಿದರೆ ತಿಳಿದುಬರುತ್ತದೆ.

  'ದೂರು ನೀಡುವುದು ಖಂಡಿತ'

  'ದೂರು ನೀಡುವುದು ಖಂಡಿತ'

  ದಿವಾಕರ್ ಕರೆ ಮಾಡಿರುವ ಬಗ್ಗೆ ಫೇಸ್‌ಬುಕ್ ಪೋಸ್ಟ್ ಬರೆದಿರುವ ಅಹೋರಾತ್ರ, 'ನನ್ನನ್ನು ಪಾಕಿಸ್ತಾನಿ' ಎಂದ ಈತನ ಮೇಲೆ ದೂರು ನೀಡುವುದು ಖಂಡಿತ ಎಂದಿದ್ದಾರೆ.

  ಪಾಕಿಸ್ತಾನದವರಾ? ಎಂದು ಕೇಳಿದ ದಿವಾಕರ್

  ಪಾಕಿಸ್ತಾನದವರಾ? ಎಂದು ಕೇಳಿದ ದಿವಾಕರ್

  ಅಹೋರಾತ್ರ ಜೊತೆ ಮಾತನಾಡುತ್ತಾ 'ನೀವು ಕರ್ನಾಟಕದವರಾ?' ಎಂದು ದಿವಾಕರ್ ಕೇಳುತ್ತಾರೆ. ಆಗ ಅದಕ್ಕೆ ಅಹೋರಾತ್ರಾ ಉತ್ತರಿಸುವುದಿಲ್ಲ, ಆಗ ದಿವಾಕರ್, ನೀವು ಭಾರತದವರಾ ಅಥವಾ ಪಾಕಿಸ್ತಾನದವರಾ? ಎಲ್ಲಿಯವರು ನೀವು? ಎನ್ನುತ್ತಾರೆ. ಇದಕ್ಕೆ ಅಹೋರಾತ್ರ ಸಿಟ್ಟಿಗೇಳುತ್ತಾರೆ.

  ಬೆದರಿಕೆ ಹಾಕಿದರೇ ದಿವಾಕರ್

  ಬೆದರಿಕೆ ಹಾಕಿದರೇ ದಿವಾಕರ್

  ದಿವಾಕರ್ ಮತ್ತು ತಮ್ಮ ನಡುವೆ ನಡೆದ ಮಾತುಕತೆಯನ್ನು ಅಹೋರಾತ್ರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ದಿವಾಕರ್ ಯಾವ ಬೆದರಿಕೆ ಹಾಕಿಲ್ಲವಾದರೂ, ಅಹೋರಾತ್ರ ಅವರನ್ನು ವ್ಯಂಗ್ಯ ಮಾಡುವ, ಹೀಗಳೆಯು ಪ್ರಯತ್ನ ಮಾಡಿದರು. ಅಹೋರಾತ್ರ ಸಹ ದಿವಾಕರ್ ಅವರನ್ನು ನಿಂದಿಸಿದರು, ವ್ಯಂಗ್ಯ ಮಾಡಿದ್ದಾರೆ.

  English summary
  Social Activisit Ahoratra on his facebook said that he will lodge complaint against Divakar who asked him if he is a Pakistani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X