twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದ ಶಿವಣ್ಣ

    By Rajendra
    |

    ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ 'ಭಜರಂಗಿ' ಇದೇ ಡಿಸೆಂಬರ್ 12ರಂದು ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿರುವುದು ಶಿವಣ್ಣ ಅವರಿಗೆ ಅಸಮಾಧಾನ ತಂದಿದೆ.

    ಚಿತ್ರದಲ್ಲಿ ಕೆಲವೊಂದು ಆಕ್ಷೇಪಾರ್ಹ ಸನ್ನಿವೇಶಗಳಿವೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಲಿ ಎ ಸರ್ಟಿಫಿಕೇಟ್ ನೀಡಿದೆ. ಈ ಚಿತ್ರ ಔಟ್ ಅಂಡ್ ಔಟ್ ಮನರಂಜನಾ ಚಿತ್ರವಾಗಿದ್ದು ಯು/ಎ ಸರ್ಟಿಫಿಕೇಟ್ ನೀಡಬಹುದಿತ್ತು. ಆದರೆ ಎ ಸರ್ಟಿಫಿಕೇಟ್ ಕೊಟ್ಟಿರುವುದು ಚಿತ್ರತಂಡಕ್ಕೂ ಕೊಂಚ ಅಸಮಾಧಾನ ತಂದಿದೆ.

    ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಶಿವಣ್ಣ, "ಈ ಆಕ್ಷನ್ ಪ್ರಧಾನ ಚಿತ್ರಕ್ಕೆ 'ಎ'ಗೆ ಬದಲಾಗಿ 'ಯು/ಎ' ಸರ್ಟಿಫಿಕೇಟ್ ನೀಡಬಹುದಾಗಿತ್ತು. ಈಗ ಎ ಪ್ರಮಾಣಪತ್ರ ಕೊಟ್ಟಿರುವುದು ಮನೆಮಂದಿಯಲ್ಲಾ ಬರಲು ಹಿಂದೇಟು ಹಾಕುತ್ತಾರೆ. ಸೆನ್ಸಾರ್ ಮಂಡಲಿ ಸದಸ್ಯರ ವಿರುದ್ಧ ತಮಗೆ ಅಸಮಾಧಾನವಿದೆ" ಎಂದಿದ್ದಾರೆ. ಇಷ್ಟಕ್ಕೂ ಶಿವಣ್ಣ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿದ್ಯಾಕೆ?...ಮುಂದೆ ಓದಿ.

    ಇದು ಔಟ್ ಅಂಡ್ ಔಟ್ ಎಂಟರ್ ಟೈನರ್

    ಇದು ಔಟ್ ಅಂಡ್ ಔಟ್ ಎಂಟರ್ ಟೈನರ್

    ಭಜರಂಗಿ ಚಿತ್ರ ಪಕ್ಕಾ ಎಂಟರ್ ಟೈನ್ ಮೆಂಟ್ ನಿಂದ ಕೂಡಿದೆ. ತಮ್ಮ ಚಿತ್ರದಲ್ಲಿ ಕೆಲವೊಂದು ಹಿಂಸಾತ್ಮಕ ಸನ್ನಿವೇಶಗಳಿವೆ ನಿಜ. ಆದರೆ ಇಂದು ಬರುತ್ತಿರುವ ಟಿವಿ ಕಾರ್ಯಕ್ರಮಗಳಲ್ಲಿನ ಸೆಕ್ಸ್, ಹಿಂಸಾತ್ಮಕ ಸನ್ನಿವೇಶಗಳಿಗೆ ಹೋಲಿಸಿದರೆ ಭಜರಂಗಿ ಚಿತ್ರದ ಸನ್ನಿವೇಶಗಳು ಏನೇನು ಅಲ್ಲ.

    ಚಿತ್ರದಲ್ಲಿ ಕೆಲವೊಂದು ರಕ್ತಪಾತ ಸನ್ನಿವೇಶಗಳಿವೆ

    ಚಿತ್ರದಲ್ಲಿ ಕೆಲವೊಂದು ರಕ್ತಪಾತ ಸನ್ನಿವೇಶಗಳಿವೆ

    ಚಿತ್ರದಲ್ಲಿ ಕೆಲವೊಂದು ರಕ್ತಪಾತದ ಸನ್ನಿವೇಶಗಳಿರುವುದೇ ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಕೊಡಲು ಕಾರಣ ಎನ್ನುತ್ತವೆ ಮೂಲಗಳು. ಶಿವಣ್ಣ ಅಭಿನಯದ ಕಡ್ಡಿಪುಡಿ ಚಿತ್ರಕ್ಕೂ ಎ ಸರ್ಟಿಫಿಕೇಟ್ ಸಿಕ್ಕಿತ್ತು.

    ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದ ಶಿವಣ್ಣ

    ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದ ಶಿವಣ್ಣ

    ಬೇಕಿದ್ದರೆ ಮಾಧ್ಯಮಗಳೇ 'ಭಜರಂಗಿ' ಚಿತ್ರ ನೋಡಿ ನಿರ್ಧರಿಸಲಿ. ಇಂದಿನ ಟಿವಿ ಧಾರಾವಾಹಿಗಳಿಗಿಂತಲೂ ತಮ್ಮ ಚಿತ್ರ ಸ್ವಚ್ಛವಾಗಿದೆ. ಒಂದು ವೇಳೆ ತಾನು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದರೆ ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದಿದ್ದಾರೆ ಶಿವಣ್ಣ.

    ಅರ್ಜುನ್ ಜನ್ಯ ಸಂಗೀತ, ಎ.ಹರ್ಷ ನಿರ್ದೇಶನ

    ಅರ್ಜುನ್ ಜನ್ಯ ಸಂಗೀತ, ಎ.ಹರ್ಷ ನಿರ್ದೇಶನ

    ಫಿಲಂ ಎಂಟರ್ ಟೈನರ್ ಲಾಂಛನದಲ್ಲಿ ನಟರಾಜ್ ಗೌ ಹಾಗೂ ಮಂಜು(ಜಾಕ್) ಅವರು ನಿರ್ಮಿಸಿರುವ 'ಭಜರಂಗಿ' ಚಿತ್ರಕ್ಕೆ ಕಥೆ ಬರೆದಿರುವ ಎ.ಹರ್ಷ ನಿರ್ದೇಶನವನ್ನು ಮಾಡಿದ್ದಾರೆ. ನಂದ, ಶಕ್ತಿ ಅವರೊಡನೆ ಚಿತ್ರಕಥೆ ಬರೆದಿರುವ ಹರ್ಷ ಈ ಚಿತ್ರದ ನೃತ್ಯ ನಿರ್ದೇಶಕರೂ ಹೌದು. ಜೈಆನಂದ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ.

    ಪಾತ್ರವರ್ಗದಲ್ಲಿ ಯಾರ್ಯಾರು ಇದ್ದಾರೆ?

    ಪಾತ್ರವರ್ಗದಲ್ಲಿ ಯಾರ್ಯಾರು ಇದ್ದಾರೆ?

    ದೀಪು.ಎಸ್.ಕುಮಾರ್ ಅವರ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರಮೇಶ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಐಂದ್ರಿತಾ ರೇ, ಊರ್ವಶಿ, ರುಕ್ಮಿಣಿ ವಿಜಯಕುಮಾರ್, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶೃತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ.

    English summary
    Centurion Star Shivaraj Kumar aka Shivanna seems to be unhappy with the Regional Central Censor Board. It is reported that the actor is disappointed with the committee members for awarding 'A' certificate for Bhajarangi. He even added that if he is proven wrong in his allegations, he will leave the film industry forever.
    Wednesday, December 11, 2013, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X