»   » 'ದಾಸ' ದರ್ಶನ್ ಗೆ ಕ್ಷಮೆ ಕೇಳಲ್ಲ: ಖಡಕ್ ಆಗಿ ನುಡಿದ ಸಂಜನಾ.!

'ದಾಸ' ದರ್ಶನ್ ಗೆ ಕ್ಷಮೆ ಕೇಳಲ್ಲ: ಖಡಕ್ ಆಗಿ ನುಡಿದ ಸಂಜನಾ.!

Posted By:
Subscribe to Filmibeat Kannada

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ದಾಸ' ದರ್ಶನ್ ಗೆ 'ಬಿಲ್ಡಪ್' ಎಂದು ಕರೆದ ಸಂಜನಾ ವಿರುದ್ಧ 'ಡಿ' ಬಾಯ್ಸ್ ಕೋಪಗೊಂಡಿದ್ದಾರೆ. ಆಡಿದ ಮಾತನ್ನ ವಾಪಸ್ ತಗೊಂಡು, ದರ್ಶನ್ ಗೆ ಕ್ಷಮೆ ಕೇಳಿದರೆ ಮಾತ್ರ ದಚ್ಚು ಅಭಿಮಾನಿಗಳ ಕೋಪ ಕಮ್ಮಿ ಆಗುತ್ತೆ.

ಇದೇ ವಾಸ್ತವ ಅಂತ ಗೊತ್ತಿದ್ದರೂ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನ ನಟಿ ಸಂಜನಾ ಕ್ಷಮೆ ಕೇಳುವುದಿಲ್ಲವಂತೆ. ಹಾಗಂತ ದಿಗ್ವಿಜಯ ನ್ಯೂಸ್ ಜೊತೆ ಮಾತನಾಡುತ್ತಾ ನಟಿ ಸಂಜನಾ ಹೇಳಿದ್ದಾರೆ.

I will not apologize Darshan says 'Bigg Boss' Sanjana

ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

''ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮಾತನಾಡುವವರು ಥರ್ಡ್ ಕ್ಲಾಸ್ ಜನ. ಅಂಥವರ ಬಳಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ'' ಎಂದು ಖಡಕ್ ಆಗಿ ನುಡಿದಿದ್ದಾರೆ ಸಂಜನಾ.

'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!

''ನನಗೆ ದರ್ಶನ್ ಸಿಕ್ಕಾಗ ಅವರಿಗೆ ನಡೆದ ವಿಷಯವನ್ನು ಹೇಳುತ್ತೇನೆ. ಜೊತೆಗೆ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ಅಷ್ಟಕ್ಕೂ, ದರ್ಶನ್ ಇಂಥ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ಮಿತಿ ಮೀರಿದರೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇನೆ'' ಎಂದು 'ಟ್ರೋಲ್' ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ ಸಂಜನಾ.

'ಬಿಲ್ಡಪ್' ರಾಣಿ ಸಂಜನಾಗೆ ಮಾತಲ್ಲೇ ಪೆಟ್ಟು ಕೊಟ್ಟ ನಟ ಜಗ್ಗೇಶ್.!

ಅಂದ್ಹಾಗೆ, 'ಟ್ರೋಲ್'ಗಳ ಕಾಟ ತಾಳಲಾರದೆ ಸಂಜನಾ ಅದಾಗಲೇ ಫೇಸ್ ಬುಕ್ ನಿಂದ ಹೊರ ಬಂದಿದ್ದಾರೆ. ಸದ್ಯ ಸಂಜನಾರ ಫೇಸ್ ಬುಕ್ ಅಕೌಂಟ್ ಬ್ಲಾಕ್ ಆಗಿದೆ. (ಕೃಪೆ - ದಿಗ್ವಿಜಯ ನ್ಯೂಸ್)

English summary
''I will not apologize Darshan'' says 'Bigg Boss' Sanjana to Digvijaya News Channel about her statement against Challenging Star Darshan in Colors Super Channel's Popular show 'Super Talk Time'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada