»   » ಬಿಎಸ್ಆರ್ ಬಿಡೋಲ್ಲ : ಪೂಜಾಗಾಂಧಿ

ಬಿಎಸ್ಆರ್ ಬಿಡೋಲ್ಲ : ಪೂಜಾಗಾಂಧಿ

Posted By:
Subscribe to Filmibeat Kannada

ಬೆಂಗಳೂರು, ಮಾ.17 : ಸಿನಿಮಾರಂಗದಿಂದ ರಾಜಕೀಯಕ್ಕೆ ಬಂದ ನಟಿ ಪೂಜಾಗಾಂಧಿ ಆರು ತಿಂಗಳಿನಲ್ಲಿ ಎರಡು ಪಕ್ಷ ಬದಲಾಯಿಸಿದ್ದಾರೆ. ನನಗೆ ಸೂಕ್ತ ಅವಕಾಶ ನೀಡಲಿಲ್ಲ. ನನ್ನ ಸ್ವಾಭಿಮಾನಕ್ಕೆ ಪಕ್ಷದಲ್ಲಿ ಧಕ್ಕೆ ಉಂಟಾಯಿತು ಎಂದು ಎರಡು ಪಕ್ಷ ಬದಲಾಯಿಸಿ, ಸದ್ಯ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಅಪಾರ ರಾಜಕೀಯ ಅನುಭವವಿರುವಂತೆ ಮಾತನಾಡುವ ಪೂಜಾಗಾಂಧಿ ಸಿನಿಮಾ, ರಾಜಕೀಯ, ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗ ಪೂಜಾಗಾಂಧಿ ತಮ್ಮ ರಾಜಕೀಯ ಪ್ರವೇಶ, ಚುನಾವಣೆಗೆ ಸ್ಪರ್ಧಿಸುವುದು ಮುಂತಾದ ವಿಚಾರಗಳ ಕುರಿತಂತೆ ಪಬ್ಲಿಕ್ ಟಿವಿಯ ಹೆಚ್.ಆರ್.ರಂಗನಾಥ್ ಜೊತೆ ಮಾತನಾಡಿದ ಕೆಲವು ಅಂಶಗಳು ಇಲ್ಲಿವೆ.

ಸಮಾಜ ಸೇವೆಗಾಗಿ ರಾಜಕೀಯ

ನಾನು ಸ್ವಯಂಸೇವಾ ಸಂಸ್ಥೆಯ ಹಿನ್ನೆಲೆಯಿಂದ ಬಂದವಳು. ವಿವಿಧ ಸಮಾಜ ಸೇವೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಏಡ್ಸ್ ಪೀಡಿತ ರೋಗಿಗಳಿಗೆ ಸಹಾಯ ಮಾಡುತ್ತಿದ್ದೇನೆ. ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡ ಮಹಿಳೆಯಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಪ್ರಯತ್ನಿಸುತಿದ್ದೇನೆ ಆದ್ದರಿಂದ ರಾಜಕೀಯ ಪ್ರವೇಶ ಅನಿವಾರ್ಯವಾಗಿತ್ತು.

ಸಿನಿಮಾದಲ್ಲಿ ಅವಕಾಶಗಳ ಕೊರತೆ ಇಲ್ಲ

ಸಿನಿಮಾರಂಗದಲ್ಲಿ ಅವಕಾಶಗಳಿಲ್ಲ ಆದ್ದರಿಂದ ಪೂಜಾ ರಾಜಕೀಯ ಸೇರಿದ್ದಾರೆ ಎಂಬ ಆರೋಪ ಸುಳ್ಳು. `ದಂಡುಪಾಳ್ಯ' ನನ್ನ ಕಡೆಯ ಚಿತ್ರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲಗು ಭಾಷೆಗೆ ಡಬ್ ಆದ ದಂಡುಪಾಳ್ಯ ಆಂಧ್ರ ಪ್ರದೇಶದಲ್ಲಿ 50 ದಿನ ಪೂರೈಸಿದೆ. ನನ್ನ ಕೈಯಲ್ಲಿ ಈಗಲೂ 3 ಚಿತ್ರಗಳು ಬಿಡುಗಡೆಗೆ ತಯಾರಾಗಿವೆ. ಸಿನಿಮಾದಿಂದ ನಿವೃತ್ತಿ ಹೊಂದಿ ರಾಜಕೀಯಕ್ಕೆ ಬಂದಿಲ್ಲ.

ಸ್ವತಂತ್ರ್ಯ ನೀಡಲಿಲ್ಲ

ಪಕ್ಷಾಂತರಕ್ಕೆ ಮೊದಲ ಕಾರಣ ಸ್ವಾತಂತ್ರ್ಯ. ಪಕ್ಷದ ಸಂಘಟನಾ ಕೆಲಸಗಳಲ್ಲಿ ತೊಡಗಲು ಅವಕಾಶ ನೀಡುತ್ತೇನೆ ಎಂದು ಭರವಸೆ ಎರಡು ಪಕ್ಷದವರು ಭರವಸೆ ನೀಡಿದ್ದರು. ನಂತರ ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸಿದರು. ಆದ್ದರಿಂದ ಪಕ್ಷ ಬಿಡುವುದು ಅನಿವಾರ್ಯವಾಗಿತ್ತು. ರಾಜಕೀಯದಲ್ಲಿ ನಾನು ಕಲಿಯುವುದು ಬಹಳವಿದೆ, ನಾನಿನ್ನು ಚಿಕ್ಕವಳು.

ಬಿಎಸ್ಆರ್ ಕಾಂಗ್ರೆಸ್ ಬಿಡುವುದಿಲ್ಲ

ಬಿಎಸ್ಆರ್ ಪಕ್ಷದ ಶ್ರೀರಾಮುಲು ಅವರ ಸರಳತೆ ಮೆಚ್ಚಿ ಪಕ್ಷ ಸೇರಿದ್ದೇನೆ. ರಾಜಕೀಯ ಎಂದರೆ ಕೇವಲ ಅಧಿಕಾರವಲ್ಲ, ಜನಸೇವೆ ಮಾಡುವುದು ಎಂದು ಶ್ರೀರಾಮುಲು ಹೇಳಿದ್ದಾರೆ. ನನಗೆ ಪಕ್ಷದಲ್ಲಿ ಯಾವುದೇ ಹುದ್ದೆ ಬೇಡ. ಸಾಮಾನ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತೇನೆ. ಪುನಃ ಪಕ್ಷಾಂತರ ಮಾಡುವುದಿಲ್ಲ.

ರಕ್ಷಿತಾ ವಿರೋಧಿಯಲ್ಲ

ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರುವಾಗ ನಟಿ ರಕ್ಷಿತಾ ವಿರೋಧ ವ್ಯಕ್ತಪಡಿಸಿದರು ಎಂಬುದು ಸುಳ್ಳು. ಅವರು ರಾಜಕೀಯ ಮತ್ತು ಸಿನಿಮಾರಂಗದಲ್ಲಿ ನನಗೆ ಹಿರಿಯರು ಅವರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಇಂದಿಗೂ ನಾವು ಉತ್ತಮ ಗೆಳತಿಯರು.

ಉತ್ತರ ಕರ್ನಾಟಕದಿಂದ ಸ್ಪರ್ಧೆ

ನಾನು ಟಿಕೆಟ್ ಕೇಳಿಕೊಂಡು ಬಿಎಸ್ಆರ್ ಕಾಂಗ್ರೆಸ್ ಸೇರಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇದೆ. ಪಕ್ಷದ ಪ್ರಮುಖರು ನಿರ್ಧಾರ ಕೈಗೊಳ್ಳುತ್ತಾರೆ. ಟಿಕೆಟ್ ಸಿಕ್ಕರೆ ಉತ್ತರ ಕರ್ನಾಟದಿಂದ ಸ್ಪರ್ಧಿಸುತ್ತೇನೆ. ಟಿಕೆಟ್ ದೊರೆಯದಿದ್ದರೆ ಸಾಮಾನ್ಯ ಕಾರ್ಯಕರ್ತೆ ಯಾಗಿರುತ್ತೇನೆ.

ನಾನು ಕನ್ನಡದ ಹುಡುಗಿ

ಪೂಜಾಗಾಂಧಿ ಈಗ ಕನ್ನಡದ ಹುಡುಗಿಯಾಗಿ ಬದಲಾಗಿದ್ದಾಳೆ. 35 ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ. ಇವ ನಮ್ಮವ ಇವ ನಮ್ಮವ ಎನ್ನುವ ವಚನದಂತೆ ನಾನು ಕನ್ನಡಿಗಳು. ಚಿತ್ರರಂಗದಿಂದ ದೂರಾಗಿಲ್ಲ. ಮೊದಲ ಆದ್ಯತೆ ಚಿತ್ರರಂಗಕ್ಕೆ ನಂತರ ರಾಜಕೀಯ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Kannada actress and politican Pooja Gandhi said, She will nor quit BSR Congress party. In private Chanel interview She said. i want to contest from North Karnataka.
Please Wait while comments are loading...