'ಅಮ್ಮ'ದಿಂದ ಹಿಂದೆ ಸರಿದ ಮಲಯಾಳ ನಟ ದಿಲೀಪ್

By Bharath Kumar

ಮಲಯಾಳಂ ಖ್ಯಾತ ನಟ ದಿಲೀಪ್ ಅವರು ಮಲಯಾಳಂ ಕಲಾವಿದರ ಸಂಘಕ್ಕೆ ಸೇರಿಸಿಕೊಂಡ ಬೆನ್ನಲ್ಲೆ ನಾಲ್ವರು ಪ್ರಮುಖ ನಟಿಯರು 'ಅಮ್ಮ' (AMMA- Association of Malayalam Movie Artistes) ಸಂಘಟನೆಯಿಂದ ಹೊರ ಬಂದಿದ್ದಾರೆ.

ಬಹುಭಾಷಾ ನಟಿಯನ್ನ ಅಪಹರಿಸಿ, ದೌರ್ಜನ್ಯವೆಸಗಿರುವ ಪ್ರಕರಣದಲ್ಲಿ ದಿಲೀಪ್ ಆರೋಪಿಯಾಗಿದ್ದು, ಇನ್ನು ದೋಷ ಮುಕ್ತವಾಗಿಲ್ಲ. ಈ ನಡುವೆ 'ಅಮ್ಮ' ಸಂಘಕ್ಕೆ ಮತ್ತೆ ಸೇರಿಸಿಕೊಂಡಿದ್ದಕ್ಕೆ ನಟಿಯರು ಆಕ್ರೋಶಗೊಂಡಿದ್ದರು.

ಇದೀಗ, ದಿಲೀಪ್ ಅವರೇ ಅಮ್ಮ ಸಂಘದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ದೋಷಮುಕ್ತನಾದ ನಂತರವೇ ನಾನು ಸಂಘಕ್ಕೆ ಬರುತ್ತೇನೆ, ಅಲ್ಲಿಯವರೆಗೂ ಅಲ್ಲಿಂದ ದೂರವೇ ಇರುತ್ತೇನೆ ತಿಳಿಸಿದ್ದಾರೆ.

i Will not return to amma till cleared my innocence

ಈ ಬಗ್ಗೆ ಅಮ್ಮ ಸಂಘಕ್ಕೆ ಪತ್ರ ಬರೆದಿರುವ ದಿಲೀಪ್ ''ನನ್ನನ್ನು ಸಂಘಟನೆಗೆ ಸೇರಿಸಿಕೊಂಡಿದ್ದಕ್ಕೆ ಧನ್ಯವಾದ. ಆದ್ರೆ, ನಾನು ಎದುರಿಸುತ್ತಿರುವ ಆರೋಪದಿಂದ ನಾನಿ ನಿರಪರಾಧಿ ಎಂದು ಪ್ರೂವ್ ಆಗಲಿ. ಅಲ್ಲಿಯವರೆಗೂ ಯಾವುದೇ ಸಂಘಟನೆಯಲ್ಲಿ ಇರಲು ನಾನು ಇಷ್ಟಪಡುವುದಿಲ್ಲ. ನನ್ನಿಂದ ಕಲಾವಿದರ ಸಂಘಕ್ಕೆ ಕಪ್ಪುಚುಕ್ಕೆ ಬರುವುದು ಬೇಡ. ಹೊಸದಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳು'' ಎಂದು ತಿಳಿಸಿದ್ದಾರೆ.

2017, ಫೆಬ್ರವರಿಯಲ್ಲಿ ಬಹುಭಾಷಾ ನಟಿಯ ಅಪಹರಣ ಮತ್ತು ದೌರ್ಜನ್ಯ ಪ್ರಕರಣ ಸಿನಿ ಜಗತ್ತಿನಲ್ಲಿ ಬಹುದೊಡ್ಡ ವಿವಾದ ಹುಟ್ಟುಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲಯಾಳಂನ ಖ್ಯಾತ ನಟ ದಿಲೀಪ್ ಅವರನ್ನ ಆರೋಪಿಯನ್ನಾಗಿಸಿ ಬಂಧಿಸಲಾಗಿತ್ತು. ಹಲವು ತಿಂಗಳು ನಟ ದಿಲೀಪ್ ಸೆರೆಮನೆ ವಾಸ ಕೂಡ ಅನುಭವಿಸಿದ್ದರು.

More from Filmibeat

English summary
Not associating with any organisation until my innocence is proven says malayalam actor dileep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X