ಚುನಾವಣಾ ಪ್ರಚಾರಕ್ಕೆ ಯಶ್ ಬರಬೇಕಂದ್ರೆ ರಾಜಕಾರಣಿಗಳು 'ಈ' ಕಂಡೀಷನ್ ನ ಒಪ್ಪಿಕೊಳ್ಳಲೇಬೇಕು.!
Recommended Video

ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರಿದೆ. ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವಾಗಲೇ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಅಭ್ಯರ್ಥಿಗಳ ಪರ ಸೆಲೆಬ್ರಿಟಿಗಳು ಪ್ರಚಾರ ಮಾಡುವುದು ಮಾಮೂಲು. ರಾಜಕೀಯ ಪಕ್ಷಗಳ ಪರ ಸ್ಟಾರ್ ಕ್ಯಾಂಪೇನರ್ ಗಳು ಚುನಾವಣಾ rally ಯಲ್ಲಿ ಪಾಲ್ಗೊಳ್ಳುವುದು ಕೂಡ ಕಾಮನ್. ಹೀಗಿರುವಾಗ, ರಾಕಿಂಗ್ ಸ್ಟಾರ್ ಯಶ್ ಯಾವ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾರೆ.? ಯಾವ ಅಭ್ಯರ್ಥಿ ಪರ ಕ್ಯಾಂಪೇನ್ ಮಾಡುತ್ತಾರೆ.? ಎಂಬ ಕುತೂಹಲ ಹಲವರಲ್ಲಿ ಕಾಡುತ್ತಿದೆ.
ಈ ಕುತೂಹಲಕ್ಕೆ ನಟ ಯಶ್ ಬ್ರೇಕ್ ಹಾಕಿದ್ದಾರೆ. ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವ ಬಗ್ಗೆ ಯಶ್ ಇನ್ನೂ ನಿರ್ಧಾರ ಮಾಡಿಲ್ಲ. ಆದ್ರೆ, ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಅಂತಾದರೆ, ಯಶ್ ಹಾಕುವ ಒಂದು ಕಂಡೀಷನ್ ಗೆ ಆ ಅಭ್ಯರ್ಥಿ ಒಪ್ಪಿಕೊಳ್ಳಲೇಬೇಕು. ಏನು ಆ ಕಂಡೀಷನ್ ಅಂದ್ರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ..

ಪಕ್ಷದ ಪರವಾಗಿ ಪ್ರಚಾರ ಮಾಡ್ತಾರಾ ಯಶ್.?
''ಪ್ರತಿ ಒಂದು ಕ್ಷೇತ್ರದಲ್ಲಿಯೂ ಅದರದ್ದೇ ಆದ ಸಮಸ್ಯೆಗಳು ಇವೆ. ಹೀಗಾಗಿ ಯಾವುದೋ ಒಂದು ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ನಾನು ಇನ್ನೂ ನಿರ್ಧಾರ ಮಾಡಿಲ್ಲ. ರಾಜಕಾರಣದಲ್ಲಿ ಸಾಕಷ್ಟು ಜನ ಸ್ನೇಹಿತರು ಇದ್ದಾರೆ. ಎಲ್ಲರೂ ಬಂದು ಪ್ರಚಾರ ಮಾಡುವ ಬಗ್ಗೆ ನನ್ನ ಬಳಿ ಕೇಳುತ್ತಿದ್ದಾರೆ'' - ನಟ ಯಶ್

ಪ್ರಚಾರ ಮಾಡಲು ಹಿಂದೆ ಮುಂದೆ ನೋಡ್ತಿರೋದು ಯಾಕೆ.?
''ನಾನು ಪ್ರಚಾರ ಮಾಡ್ತೀನಿ ಅಂದರೂ, ನಾಳೆ ಏನಾದರೂ ಹೆಚ್ಚು ಕಮ್ಮಿ ಆದರೆ ಜನ ನನ್ನನ್ನ ಕೇಳ್ತಾರೆ. ಆಗ ನಾನು ಏನು ಉತ್ತರ ಕೊಡಲಿ.? ಹೀಗಾಗಿ ಪ್ರಚಾರ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಒಂದ್ವೇಳೆ ಬಂದರೆ ನಾನೇ ಹೇಳುತ್ತೇನೆ'' ಅಂತಾರೆ ನಟ ಯಶ್.

ಅಭ್ಯರ್ಥಿಗಳಿಗೆ ಯಶ್ ಹಾಕುವ ಕಂಡೀಷನ್ ಏನು.?
''ಬೆಂಗಳೂರಲ್ಲಿ ಐದು ಲಕ್ಷ ಮರಗಳನ್ನು ನೆಡಬೇಕು ಅಂತಿದ್ದೀನಿ. ಇದಕ್ಕೆ ಯಾರ್ಯಾರು ಸಹಾಯ ಮಾಡುತ್ತಾರೋ, ಅವರ ಪರ ನಾನು ಪ್ರಚಾರ ಮಾಡುತ್ತೇನೆ. ಜನರಿಗೆ ಒಳ್ಳೆಯದ್ದು ಆಗುತ್ತೆ ಅಂದ್ರೆ ಖಂಡಿತ ನಾನು ಸಹಾಯ ಮಾಡುತ್ತೇನೆ'' ಎಂದಿದ್ದಾರೆ ನಟ ಯಶ್.

ರಾಜಕೀಯದಲ್ಲಿ ಆಸಕ್ತಿ ಇಲ್ಲ.!
ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುವ ನಟ ಯಶ್ ಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ''ನನಗೆ ರಾಜಕೀಯ ಬೇಡ. ನಾನು ಎಂ.ಎಲ್.ಎ ಆಗಬೇಕು ಅಂತೇನಿಲ್ಲ'' ಎಂದು ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಯಶ್ ತಿಳಿಸಿದ್ದಾರೆ.


Click it and Unblock the Notifications











