»   » ಕಂಡ ಕಂಡವರಿಗೆ ಹೊಡೆಯಲ್ಲ ಸಲಾಮು: ರಾಜಕೀಯದ ಬಗ್ಗೆ ದರ್ಶನ್ ಖಡಕ್ ಜವಾಬು.!

ಕಂಡ ಕಂಡವರಿಗೆ ಹೊಡೆಯಲ್ಲ ಸಲಾಮು: ರಾಜಕೀಯದ ಬಗ್ಗೆ ದರ್ಶನ್ ಖಡಕ್ ಜವಾಬು.!

Posted By:
Subscribe to Filmibeat Kannada

''ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ ಧುಮುಕಲಿದ್ದಾರೆ'' ಎಂಬ ಗುಸು ಗುಸು ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕದ ಮೂಲೆ ಮೂಲೆಯಲ್ಲೂ ಕೇಳಿ ಬಂದಿತ್ತು. ದರ್ಶನ್ ರವರಿಗೆ ಕಾಂಗ್ರೆಸ್ ಪಕ್ಷ ಗಾಳ ಹಾಕುತ್ತಿದೆ ಅಂತಲೂ ಗುಲ್ಲೆದ್ದಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಂಥ ಗಾಸಿಪ್ ಗಳೂ ಕೇಳಿ ಬರ್ತಿವೆ.!

ಅಂದು ಈ 'ರಾಜಕೀಯ'ದ ಸುದ್ದಿ ಬಗ್ಗೆ ತುಟಿ ಎರಡು ಮಾಡದ ನಟ ದರ್ಶನ್ ಇಂದು ಮೌನ ಮುರಿದಿದ್ದಾರೆ. ''ರಾಜಕೀಯಕ್ಕೂ ನನಗೂ ಆಗ್ಬರಲ್ಲ. ಕಂಡ ಕಂಡವರಿಗೆ ಸಲಾಮು ಹೊಡೆಯುವ ಸಂಸ್ಕೃತಿ ನನ್ನದಲ್ಲ'' ಎಂದು 'ಕನ್ನಡ ಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್ ಖಡಕ್ ಜವಾಬು ನೀಡಿದ್ದಾರೆ. ಮುಂದೆ ಓದಿರಿ....

ರಾಜಕೀಯಕ್ಕೆ ದರ್ಶನ್ ಬರಲ್ಲ.!

''ನನ್ನ ರಾಜಕೀಯ ಎಂಟ್ರಿ ಬಗ್ಗೆ ಹಬ್ಬಿರುವ ಸುದ್ದಿ ಸುಳ್ಳು'' ಎನ್ನುವ ಮೂಲಕ ಇಲ್ಲಿಯವರೆಗೂ ಹಬ್ಬಿದ್ದ ಎಲ್ಲ ಊಹಾಪೋಹಗಳಿಗೆ ನಟ ದರ್ಶನ್ ಪೂರ್ಣ ವಿರಾಮ ಇಟ್ಟಿದ್ದಾರೆ.

ಮಾಧ್ಯಮದವರು 'ರಾಜಕೀಯ'ದ ಪ್ರಶ್ನೆ ಕೇಳುವ ಮುನ್ನವೇ ಹೊರಟು ಹೋದ ದರ್ಶನ್

ಸಲಾಮು ಹೊಡೆಯುವ ಜಾಯಮಾನ ನನ್ನದಲ್ಲ.!

''ಕಂಡ ಕಂಡವರಿಗೆ ಸಲಾಮು ಹೊಡೆಯುವ ಜಾಯಮಾನ ನನ್ನದಲ್ಲ. ಸಲಾಮು ಸಂಸ್ಕೃತಿ ಇರುವ ರಾಜಕಾರಣಕ್ಕೂ ನನಗೂ ಆಗ್ಬರಲ್ಲ. ರಾಜಕೀಯಕ್ಕೆ ಸೇರುವ ಆಸಕ್ತಿ ನನಗಿಲ್ಲ'' ಎಂದಿದ್ದಾರೆ ನಟ ದರ್ಶನ್.

ದರ್ಶನ್ ಆಯ್ತು, ಈಗ ಸುದೀಪ್ ಅಂತೆ, ಇದು ನಿಜವಾದ ರಾಜಕೀಯ.!

ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ

''ನಾನು ಸಿನಿಮಾ ನಟ. ನನಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ನನಗೆ ರಾಜಕೀಯ ಗೊತ್ತಿಲ್ಲ'' - ನಟ ದರ್ಶನ್

ರಾಜಕೀಯಕ್ಕೆ ಬರ್ತಾರಾ ದರ್ಶನ್: ತಾಯಿ ಮೀನಾ ತೂಗುದೀಪ ಹೇಳಿದ್ದೇನು.?

ನಮಗೆ ಯಾಕೆ ಬೇಕು.?

''ವೋಟು ಹಾಕಿದ ಜನ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರಾಜಕಾರಣ ಅಂದ ಮೇಲೆ ಅದೆಲ್ಲವೂ ಇರುತ್ತೆ. ನಮಗೆ ಅದು ಯಾಕೆ ಬೇಕು.? ಅಂತಹ ವಾತಾವರಣ ನನಗೆ ಆಗ್ಬರಲ್ಲ'' ಎಂದು 'ಕನ್ನಡ ಪ್ರಭ' ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನಟ ದರ್ಶನ್ ತಿಳಿಸಿದ್ದಾರೆ.

English summary
''I wont join Politics'' clarifies Kannada Actor Darshan
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada