twitter
    For Quick Alerts
    ALLOW NOTIFICATIONS  
    For Daily Alerts

    5000 ರೂಪಾಯಿಗೆ 'ಕರಿಯ' ಚಿತ್ರದಲ್ಲಿ ನಟಿಸಿದ್ದೆ, ಲಕ್ಷ ನೋಡಿದ್ದು ಈ ಚಿತ್ರದಿಂದ ಎಂದ ದರ್ಶನ್!

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಹಾಭಾರತ ಚಿತ್ರದಲ್ಲಿ ಬಾಲು ಎಂಬ ಪಾತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದು ಡಿಬಾಸ್ ಆಗಿ, ಬಾಕ್ಸ್ ಆಫೀಸ್ ಸುಲ್ತಾನನಾಗಿ, ಕನ್ನಡ ಚಿತ್ರರಂಗದ ಪ್ರಮುಖ ಪಿಲ್ಲರ್ ಆಗಿ ನೆಲೆಯೂರಿದ್ದಾರೆ. ಹಿರಿಯ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ ಎಂಬ ಮಾತ್ರಕ್ಕೆ ದರ್ಶನ್ ಅವರ ಬಣ್ಣದ ಬದುಕಿನ ಹಾದಿ ಸುಲಭದ್ದಾಗಿರಲಿಲ್ಲ.

    2002ರಲ್ಲಿ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕನಾಗಿ ತನ್ನ ಜರ್ನಿ ಆರಂಭಿಸಿದ ನಟ ದರ್ಶನ್ ತಮಿಳಿನ ಒಂದು ಚಿತ್ರವೂ ಸೇರಿದಂತೆ ಒಟ್ಟು ಆರು ಚಿತ್ರಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ರು. ಇನ್ನು ದರ್ಶನ್ ನಟನಾಗಿ ಬಣ್ಣ ಹಚ್ಚಿದ ಮೊದಲ ಚಿತ್ರವೇ ಶತ ದಿನೋತ್ಸವ ಆಚರಿಸಿಕೊಂಡು ದರ್ಶನ್ ಸಿನಿ ಬದುಕಿಗೆ ದೊಡ್ಡ ಮಟ್ಟದ ತಿರುವನ್ನು ನೀಡಿತು. ಈ ಚಿತ್ರದ ಬಳಿಕ ದರ್ಶನ್ ಅವರನ್ನು ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದದ್ದು ನಿಜ ಹಾಗೂ ನಂತರದ ಚಿತ್ರಗಳಲ್ಲಿ ಅವರು ಸಿಕ್ಕ ಅವಕಾಶಗಳನ್ನು ಕೈ ಚೆಲ್ಲದೇ ಸದುಪಯೋಗಪಡಿಸಿಕೊಂಡದ್ದೂ ನಿಜ.

    ಈಗಿನ ರೀತಿ ದರ್ಶನ್ ಅಂದಿನ ದಿನಗಳಲ್ಲಿ ಕಥೆ ಇಷ್ಟವಾಗದಿದ್ದರೆ ಬಿಡುವ ಪರಿಸ್ಥಿತಿಯಲ್ಲೂ ಇರಲಿಲ್ಲ. ಹೀಗಾಗಿ ಸಿಕ್ಕ ಚಿತ್ರಗಳೆಲ್ಲೆಲ್ಲಾ ನಟಿಸಿದ್ದರು. ಇನ್ನು ಈಗ ಕೋಟಿ ಕೋಟಿ ಸಂಭಾವನೆ ಪಡೆಯುವ ದರ್ಶನ್ ತಮ್ಮ ಆರಂಭದ ಚಿತ್ರಗಳಲ್ಲಿ ಎಷ್ಟು ರೂಪಾಯಿ ಸಂಭಾವನೆ ಪಡೆದಿರಬಹುದು ಎಂಬ ಪ್ರಶ್ನೆ ಹಾಗೂ ಕುತೂಹಲ ಹಲವರಲ್ಲಿತ್ತು. ಈ ಕುರಿತಾಗಿ ಇದೀಗ ಸ್ವತಃ ದರ್ಶನ್ ಅವರೇ ಡೆಕ್ಕನ್ ಹೆರಾಲ್ಡ್ ಜೊತೆ ನಡೆದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿ ಎಷ್ಟು ಸಂಭಾವನೆ ಪಡೆದಿದ್ದರು ಎಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

    'ಮೆಜೆಸ್ಟಿಕ್‌'ಗೆ ಸಂಭಾವನೆಯೇ ಇಲ್ಲ, 'ಕರಿಯ'ಗೆ ಐದು ಸಾವಿರ!

    'ಮೆಜೆಸ್ಟಿಕ್‌'ಗೆ ಸಂಭಾವನೆಯೇ ಇಲ್ಲ, 'ಕರಿಯ'ಗೆ ಐದು ಸಾವಿರ!

    ತಮ್ಮ ಕೆರಿಯರ್‌ನ ಆರಂಭದಲ್ಲಿ ಹಣ ಬೇಕೆಂದು ಕೆಲಸ ಮಾಡುತ್ತಿರಲಿಲ್ಲ, ಜನರಿಗೆ ತನ್ನ ಮುಖ ಪರಿಚಯವಾಗಬೇಕು ಎಂಬ ಉದ್ದೇಶದಿದ ಹಲವು ಚಿತ್ರಗಳಲ್ಲಿ ಸಂಭಾವನೆ ಇಲ್ಲದೇ ನಟಿಸಿದೆ ಎಂದ ನಟ ದರ್ಶನ್ ಮೆಜೆಸ್ಟಿಕ್ ಚಿತ್ರಕ್ಕೆ ಯಾವುದೇ ರೀತಿಯ ಸಂಭಾವನೆ ಪಡೆಯದೇ ಬಣ್ಣ ಹಚ್ಚಿದ್ದೆ ಎಂಬುದನ್ನು ಬಿಚ್ಚಿಟ್ಟರು. ಇನ್ನು ಕರಿಯ ಚಿತ್ರಕ್ಕೆ ಐದು ಸಾವಿರ, ಧೃವ ಚಿತ್ರಕ್ಕೆ ಹತ್ತು ಸಾವಿರ, ನಿನಗೋಸ್ಕರ ಹಾಗೂ ನೀನಂದ್ರೆ ಇಷ್ಟ ಚಿತ್ರಗಳಿಗೆ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದೆ ಎಂದು ದರ್ಶನ್ ಹೇಳಿದ್ದರು.

    ಒಂದು ಲಕ್ಷ ಪಡೆದಿದ್ದು ಈ ಚಿತ್ರದ ಮೂಲಕ

    ಒಂದು ಲಕ್ಷ ಪಡೆದಿದ್ದು ಈ ಚಿತ್ರದ ಮೂಲಕ

    ಇನ್ನೂ ಮುಂದುವರೆದು ಮಾತನಾಡಿದ ದರ್ಶನ್ ಹೀಗೆ ಆರಂಭದಲ್ಲಿ ಸಾವಿರ ಮಟ್ಟದಲ್ಲಿ ಸಂಭಾವನೆ ಪಡೆಯುತ್ತಿದ್ದ ನಾನು ಒಂದು ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನಾಗಿ ಪಡೆಯಲು ಒಂಬತ್ತು ಚಿತ್ರಗಳು ಬೇಕಾಯಿತು ಎಂದರು. ಈ ಮೂಲಕ ದರ್ಶನ್ ನಾಯಕನಾಗಿ ನಟಿಸಿದ ಹತ್ತನೇ ಚಿತ್ರದಲ್ಲಿ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದರು. ಅಂದರೆ ದರ್ಶನ್ ತನ್ನ ಹತ್ತನೇ ಚಿತ್ರ ದಾಸ ಮೂಲಕ ಲಕ್ಷ ರೂಪಾಯಿ ಸಂಭಾವನೆ ಪಡೆದರು ಎನ್ನಬಹುದು.

    ಚಿತ್ರರಂಗಕ್ಕೆ ಬರಲು ಆ ದಿನ ಕಾರಣ

    ಚಿತ್ರರಂಗಕ್ಕೆ ಬರಲು ಆ ದಿನ ಕಾರಣ

    ಇನ್ನು ದರ್ಶನ್ ಮೊದಲಿಗೆ ಝೂ ಕೀಪರ್ ಅಥವಾ ನಟನಾಗಬೇಕು ಎಂಬ ಉದ್ದೇಶ ಹೊಂದಿದ್ದರಾದರೂ ಎರಡರಲ್ಲಿ ಯಾವುದನ್ನು ಆರಿಸಬೇಕೆಂಬ ಖಚಿತತೆ ಅವರಲ್ಲಿ ಇರಲಿಲ್ಲ. ಆದರೆ ದರ್ಶನ್ ತಮ್ಮ ತಂದೆಯನ್ನು ಕಳೆದುಕೊಂಡ ದಿನದಂದು ಮನೆ ಮುಂದೆ ನೆರೆದಿದ್ದ ಜನ ಸಾಗರವನ್ನು ಕಂಡು ಈ ಜನರನ್ನು ತಾನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿ ತಾನು ನಟನಾಗಲೇಬೇಕು ಎಂದು ತೀರ್ಮಾನಿಸಿದರು.

    English summary
    I worked for Majestic without taking any money and got 5000 rupees for Kariya says Darshan. Read on
    Tuesday, November 29, 2022, 16:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X