»   » ಭಾರತ ವರ್ಲ್ಡ್ ಕಪ್ ಫೈನಲ್ ಗೆ ಬಂದ್ರೆ ಎಡವಟ್ಟಾಗುತ್ತೆ

ಭಾರತ ವರ್ಲ್ಡ್ ಕಪ್ ಫೈನಲ್ ಗೆ ಬಂದ್ರೆ ಎಡವಟ್ಟಾಗುತ್ತೆ

By: ಜೀವನರಸಿಕ
Subscribe to Filmibeat Kannada

ಈ ಬಾರಿಯ ವರ್ಲ್ಡ್ ಕಪ್ ಕ್ರಿಕೆಟ್ ಅಷ್ಟೇನೂ ವಿಶೇಷವಾಗಿರಲ್ಲ ಅಂತಾನೇ ಎಲ್ಲರೂ ಭಾವಿಸಿದ್ರು. ಟೀಂನಲ್ಲಿ ಸ್ಟಾರ್ ಪ್ಲೇಯರ್ಸ್ ಗಳೇ ಇಲ್ಲ. ಹಿಂದಿನ ವರ್ಲ್ಡ್ ಕಪ್ ನಲ್ಲಿದ್ದ ಯುವರಾಜ್ ಸಿಂಗ್ ಇಲ್ಲ, ವಿರೇಂದ್ರ ಸೆಹ್ವಾಗ್ ಇಲ್ಲ, ಗೌತಮ್ ಗಂಭೀರ್ ಇಲ್ಲ. ಇನ್ನೆಲ್ಲಿ ಇಂಡಿಯಾ ಆಟ ನೋಡೋಕಾಗುತ್ತಾ ಅಂತ ಎಲ್ಲರೂ ಅಂದುಕೊಂಡಿದ್ರು.

ಆದ್ರೆ ಅಂದುಕೊಂಡಿದ್ದೆಲ್ಲವೂ ಉಲ್ಟಾ ಪಲ್ಟಾ ಆಗಿದೆ. ಸೋಲಿಲ್ಲದ ಸರದಾರನಂತೆ ಭಾರತ ತಂಡ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದೆ. ಭಾರತದ ವೇಗ ನೋಡ್ತಿದ್ರೆ ಕ್ವಾರ್ಟರ್ ಫೈನಲ್ ಗೆ ಹೆಚ್ಚು ಅಂಕ ಪಡೆದು ಹೋಗೋದ್ರಿಂದ ಸಹಜವಾಗೇ ಪಾಯಿಂಟ್ಸ್ ಪಟ್ಟಿಯ ಕೊನೆಯ ತಂಡ ಭಾರತಕ್ಕೆ ಎದುರಾಗಲಿದೆ.

ICC world Cup 2015 impact on Sandalwood movies

ಇಲ್ಲೂ ಸುಲಭವಾಗಿ ಸೆಮಿಫೈನಲ್ ತಲುಪಲಿರೋ ಭಾರತ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲುವ ಫೇವರೀಟ್ ಅನ್ನಿಸಿಕೊಳ್ಳಲಿದೆ. ಇದು ರಿಲೀಸಾಗೋಕೆ ತಯಾರಾಗಿದ್ದ ಸಿನಿಮಾಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ವರ್ಷವಿಡೀ ಒಳ್ಳೆಯ ಸಮಯಕ್ಕೆ ಕಾದು ಈಗ ಹೊಳೆಯಲ್ಲಿ ಹುಣಸೇಹಣ್ಣು ತೊಳೆದ ಹಾಗಾಗಬಾರ್ದು ಅಂತ ಹಲವು ಸಿನಿಮಾ ನಿರ್ಮಾಪಕರು ಚಿತ್ರವನ್ನ ರಿಲೀಸ್ ಮಾಡೋಕೆ ಹಿಂದೇಟು ಹಾಕ್ತಿದ್ದಾರೆ.

'ರನ್ನ', 'ರಣವಿಕ್ರಮ'ದಂತಹ ಸ್ಟಾರ್ ಸಿನಿಮಾಗಳೇ ಯಾಕಪ್ಪಾ ಬೀದಿಯಲ್ಲಿ ಹೋಗೋ ದೆವ್ವಾನ ಮೈಮೇಲೆಳ್ಕೊಳ್ಳೋದು ಅಂತ ಚಿತ್ರವನ್ನ ಏಪ್ರಿಲ್ ತಿಂಗಳಲ್ಲಿ ತೆರೆಗೆ ತರೋ ಪ್ಲಾನ್ ನಲ್ಲಿವೆ.

ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

English summary
If India will enters ICC World Cup 2015 finals, it affects the release of big budget Sandalwood movies. Sudeep's Ranna, Puneeth Rajkumar's Dheera Rana Vikrama movies release postponed to April.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada