»   » ಕ್ರಿಕೆಟ್ ಸಮರ ಎದುರಿಸಲು ಸಜ್ಜಾದ ಸಿನಿಮಾರಂಗ

ಕ್ರಿಕೆಟ್ ಸಮರ ಎದುರಿಸಲು ಸಜ್ಜಾದ ಸಿನಿಮಾರಂಗ

Posted By:
Subscribe to Filmibeat Kannada

ಎಲ್ಲೆಲ್ಲೂ ಈಗ 'ವರ್ಲ್ಡ್ ಕಪ್' ಫೀವರ್. ನಾಳೆ (ಫೆಬ್ರವರಿ 14) ರಿಂದ ಕ್ರಿಕೆಟ್ ವರ್ಲ್ಡ್ ಕಪ್ ಶುರುವಾಗಲಿದೆ. ಏನೇ ಕೆಲಸ ಇರಲಿ, ಟಾಸ್ ಆಗ್ತಿದ್ದಂತೆ ಟಿವಿ ಮುಂದೆ ಹಾಜರಾಗುವ ಕೋಟ್ಯಾಂತರ ಕ್ರಿಕೆಟ್ ಭಕ್ತರು ನಮ್ಮ ದೇಶದಲ್ಲಿದ್ದಾರೆ.

ಕ್ರಿಕೆಟ್ ಸ್ಟಾರ್ಟ್ ಆಯ್ತು ಅಂದ್ರೆ, ಬೇರೆಲ್ಲಾ ವಾಹಿನಿಗಳ ಟಿ.ಆರ್.ಪಿ ರೇಟಿಂಗ್ ಪಾತಳ ತಲುಪುವುದು ಸಹಜ. ಹೀಗಿರಬೇಕಾದ್ರೆ, ಹೊಸ ಸಿನಿಮಾಗಳು ರಿಲೀಸ್ ಆದ್ರೆ, ಅದರ ಕಥೆ ಏನು? ಕ್ರಿಕೆಟ್ ಬಿಟ್ಟು ಯಾರಾದರೂ, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರಾ? ಈ ಪ್ರಶ್ನೆಗಳು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ.


'ವರ್ಲ್ಡ್ ಕಪ್' ಸೀಸನ್ ನಲ್ಲಿ ಸಿನಿಮಾಗಳು ಬಂದ್ ಆಗ್ತಿದ್ದ ಕಾಲವೊಂದಿತ್ತು. ಆದ್ರೆ, ಈಗ ಕಾಲ ಬದಲಾಗಿದೆ. 'ವರ್ಲ್ಡ್ ಕಪ್' ಮೇನಿಯಾ ಇದ್ದರೂ, ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳಿಗೇನು ಕಮ್ಮಿ ಇಲ್ಲ. [ಕನ್ನಡ ವೀಕ್ಷಕ ವಿವರಣೆಯೊಂದಿಗೆ ಕ್ರಿಕೆಟ್ ವರ್ಲ್ಡ್ ಕಪ್!]


ಕ್ರಿಕೆಟ್ ಪಾಡಿಗೆ ಕ್ರಿಕೆಟ್ ಇರಲಿ, ಸಿನಿಮಾ ಬರೋದು ಬರಲಿ ಅಂತ ಬರುವ ಆರು ವಾರಗಳಲ್ಲಿ ಸಾಲು ಸಾಲು ಚಿತ್ರಗಳು ರಿಲೀಸ್ ಆಗೋಕೆ ಕ್ಯೂ ನಲ್ಲಿವೆ. ಹಾಗೆ, ಕ್ರಿಕೆಟ್ ಗೆ ಚಾಲೆಂಜ್ ಹಾಕಿರುವ ಸಿನಿಮಾಗಳ ಲಿಸ್ಟ್ ಇಲ್ಲಿದೆ...ಸ್ಲೈಡ್ ಗಳಲ್ಲಿ ನೋಡಿ.....


ಫೆಬ್ರವರಿ 20ಕ್ಕೆ 'ಮೈತ್ರಿ' ನಿಮ್ಮ ಮುಂದೆ

ಪುನೀತ್ ರಾಜ್ ಕುಮಾರ್ ಮತ್ತು ಮೋಹನ್ ಲಾಲ್ ಅಭಿನಯದ 'ಮೈತ್ರಿ' ಸಿನಿಮಾ ಫೆಬ್ರವರಿ 20ಕ್ಕೆ ಬಿಡುಗಡೆಯಾಗಲಿದೆ. ಹಾಗೆ ನೋಡಿದರೆ, 'ಮೈತ್ರಿ' ಇಷ್ಟೊತ್ತಿಗಾಗಲೇ ರಿಲೀಸ್ ಆಗಿರ್ಬೇಕಿತ್ತು. ಹಲವು ಕಾರಣಗಳಿಂದ ಪೋಸ್ಟ್ ಪೋನ್ ಆಗುತ್ತಲೇ ಬಂದ 'ಮೈತ್ರಿ' ಸಿನಿಮಾ ಸೆನ್ಸಾರ್ ಅಂಗಳದಿಂದ ನಿನ್ನೆಯಷ್ಟೇ ಕ್ಲೀನ್ ಚಿಟ್ ಪಡೆದಿದೆ. ವರ್ಲ್ಡ್ ಕಪ್ ಗೆ ಹೆದರದೆ ತೆರೆಗೆ ಅಪ್ಪಳಿಸುವುದಕ್ಕೆ 'ಮೈತ್ರಿ' ರೆಡಿಯಾಗಿದೆ. ಪುನೀತ್ ಮತ್ತು ಮೋಹನ್ ಲಾಲ್ 'ಮೈತ್ರಿ' ಆಗಿರುವ ಕಾರಣ, ಚಿತ್ರವನ್ನ ಅವರ ಫ್ಯಾನ್ಸ್ ಕೈಬಿಡಲ್ಲ ಅನ್ನುವ ನಂಬಿಕೆ ಚಿತ್ರತಂಡದ್ದು. [ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಸಂತಸದ ಸುದ್ದಿ]


'ಕೃಷ್ಣಲೀಲಾ' ದರ್ಬಾರ್ 27 ರಿಂದ

ಅಜೇಯ್ ರಾವ್ ಮತ್ತು ಮಯೂರಿ ನಟನೆಯ 'ಕೃಷ್ಣಲೀಲಾ' ಚಿತ್ರ ಫೆಬ್ರವರಿ 27ಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಮತ್ತು ಸಾಂಗ್ಸ್ ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಿದೆ. ಎಲ್ಲೆಲ್ಲೂ 'ಪೆಸಲ್ ಮ್ಯಾನ್' ನದ್ದೇ ಕಾರುಬಾರಾಗಿರುವುದರಿಂದ 'ವರ್ಲ್ಡ್ ಕಪ್' ಮುಂದೆ ಠುಸ್ ಆಗಲ್ಲ ಅನ್ನುವ ಅಭಿಪ್ರಾಯ ನಿರ್ದೇಶಕ ಶಶಾಂಕ್ ರದ್ದು. [ಧ್ವನಿ ಸಾಂದ್ರಿಕೆ ವಿಮರ್ಶೆ: ಮಸ್ತ್ ಹಾಡುಗಳ ಗುಚ್ಛ 'ಕೃಷ್ಣಲೀಲಾ']


ಮಾರ್ಚ್ 5 ಕ್ಕೆ 'ವಾಸ್ತು ಪ್ರಕಾರ'

ಯೋಗರಾಜ್ ಭಟ್ಟರ ಪ್ರಕಾರ 'ಅದೃಷ್ಟ ಚೆನ್ನಾಗಿದ್ದರೆ ವಾಸ್ತು, ಕ್ರಿಕೆಟ್ ಯಾವುದೂ ಲೆಕ್ಕಕ್ಕೆ ಬರಲ್ಲ'. ಸಿನಿಮಾ ಚೆನ್ನಾಗಿದ್ದರೆ, ಕ್ರಿಕೆಟ್ ಇರಲಿ, ಬಿಡಲಿ ಜನ ನೋಡ್ತಾರೆ. ಇಲ್ಲಾಂದ್ರೆ ಇಲ್ಲ! ಅಂತ ಅದೃಷ್ಟ ಪರೀಕ್ಷೆಗೆ ಮಾರ್ಚ್ 5 ರಂದು ಇಳಿದೇ ಬಿಟ್ಟಿದೆ ಭಟ್ರ ತಂಡ. ಎಂದಿನ ಭಟ್ರ ಶೈಲಿಯ ಹಾಡುಗಳು, ಅದರೊಂದಿಗೆ ಜಗ್ಗೇಶ್ ಕಾಮಿಡಿ ಕಿಕ್ ಚಿತ್ರದಲ್ಲಿರುವುದರಿಂದ 'ವಾಸ್ತುಪಕಾರ' ಮನರಂಜನೆಗೆ ಮೋಸ ಇಲ್ಲ. ಕ್ರಿಕೆಟ್ ನೋಡಿ ನೋಡಿ ಬೇಜಾರಾಗಿರುವವರು 'ವಾಸ್ತುಪ್ರಕಾರ' ನೋಡಿ ರಿಲ್ಯಾಕ್ಸ್ ಆಗಲಿ ಅನ್ನೋದು ಚಿತ್ರತಂಡದ ಆಶಯ. [ಭಟ್ಟರ 'ವಾಸ್ತು ಪ್ರಕಾರ' ಸಾಂಗು ಹೆಂಗೈತೆ ಹೇಳ್ರಪಾ]


ಮಾರ್ಚ್ ಮೊದಲ ವಾರದಲ್ಲಿ 'ಓಂ'

ಪ್ರತಿ ಬಾರಿ ರಿಲೀಸ್ ಆದಾಗಲೂ 'ಓಂ' ಚಿತ್ರಕ್ಕೆ ಹೌಸ್ ಫುಲ್ ಬೋರ್ಡ್ ಮಿಸ್ ಇಲ್ಲ. ವರ್ಲ್ಡ್ ಕಪ್ ಇದ್ದರೂ, ಅದೇ ಗ್ಯಾಪಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣನ ಅಭಿಮಾನಿಗಳು ಒಂದು ಬಾರಿ 'ಓಂ' ನೋಡುವುದು ಖಚಿತ. ಅದ್ರಲ್ಲೂ 5.1 ಡಿಜಿಟಲ್ ಸರೌಂಡ್ ಸೌಂಡ್ ಎಫೆಕ್ಟ್ ನಲ್ಲಿ 'ಓಂ' ತೆರೆಕಾಣುವುದರಿಂದ ಸೂಪರ್ ಹಾಡುಗಳನ್ನ ಕೇಳೋಕೆ ಕನ್ನಡ ಸಿನಿ ಪ್ರಿಯರು ಹಿಂದೇಟು ಹಾಕಲ್ಲ. ಇಪತ್ತು ವರ್ಷದಿಂದ ಸತತವಾಗಿ ಸೆಂಚುರಿ ಬಾರಿಸುತ್ತಿರುವ 'ಓಂ'ಗೆ ಈ ಬಾರಿಯ ವರ್ಲ್ಡ್ ಕಪ್ ಯಾವ ಲೆಕ್ಕ!? [ಶಿವಣ್ಣನ ಅಭಿಮಾನಿಗಳಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ]


ಶುರುವಾಗಿದೆ 'ಡಿಕೆ' ಸಾಹೇಬನ ಸರ್ಕಾರ

ನಾಳೆಯಿಂದ ವರ್ಲ್ಡ್ ಕಪ್ ಶುರು. ಆದರೆ, ಸ್ಯಾಂಡಲ್ ವುಡ್ ನಲ್ಲಿ ಇಂದಿನಿಂದಲೇ 'ಡಿ.ಕೆ' ಸಾಹೇಬನ ದರ್ಬಾರ್ ಗೆ ಚಾಲನೆ ಸಿಕ್ಕಿದೆ. 'ಡಿಕೆ' ಗಿಮಿಕ್, ಸನ್ನಿ ಲಿಯೋನ್ ಡ್ಯಾನ್ಸು...ಇಷ್ಟಿದ್ಮೇಲೆ 'ಡಿಕೆ'ಗೆ ಭಯ ಯಾಕೆ. ''ಸಿನಿಮಾನೇ ಬೇರೆ, ಕ್ರಿಕೆಟ್ ಬೇರೆ'' ಅಂತಾರೆ ಪ್ರೇಮ್. [ಸಂದರ್ಶನ : 'ಡಿಕೆ' ಗುಟ್ಟು ಬಿಟ್ಟುಕೊಟ್ಟ ಪ್ರೇಮ್]


ಥಿಯೇಟರ್ ಸಮಸ್ಯೆ! ಕ್ರಿಕೆಟ್ ಅಲ್ಲ!

ಗಾಂಧಿನಗರಕ್ಕೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಅಂದ್ರೆ ಅದು ಥಿಯೇಟರ್ ಗಳ ಕೊರತೆ. ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆದ್ರೆ, ಹೆಚ್ಚೆಚ್ಚು ಜನ ನೋಡ್ತಾರೆ. ವರ್ಲ್ಡ್ ಕಪ್ ಫೀವರ್ ಅಂತ ಸುಮ್ಮನಾದ್ರೆ, ನಂತ್ರ ಚಿತ್ರಮಂದಿರಗಳು ಸಿಗುವುದಿಲ್ಲ. ಎಲ್ಲಾ ಒಂದೊಂದೇ ವಾರಕ್ಕೆ ಎತ್ತಂಗಡಿ ಆಗುವ ಪರಿಸ್ಥಿತಿ ಎದುರಾಗುತ್ತೆ. ಇದನ್ನ ಮನಗಂಡಿರುವ ಚಿತ್ರತಂಡಗಳು ಕ್ರಿಕೆಟ್ ಇದ್ದರೂ ಅಡ್ಡಿಯಿಲ್ಲ ಅಂತ ಪ್ರೇಕ್ಷಕರ ಮುಂದೆ ಬರುವುದಕ್ಕೆ ನಿರ್ಧರಿಸಿದೆ. ಅವರಿಗೆ ಜೈಕಾರ ಹಾಕುವ ಜವಾಬ್ದಾರಿ ನಿಮ್ಮದು...


English summary
ICC World Cup doesn't effect Sandalwood on the upcoming release. Here is the list of movies which is set to release in another 6 weeks, during Cricket season.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada