For Quick Alerts
  ALLOW NOTIFICATIONS  
  For Daily Alerts

  ದರ್ಶನ್, ಪ್ರಿಯಾಮಣಿಗೆ ಫಿಲಂಫೇರ್ ಪ್ರಶಸ್ತಿ ಗರಿ

  By Mahesh
  |

  ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿಯ 60ನೇ ಕಂತಿನಲ್ಲಿ ಪ್ರಪ್ರಥಮ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಫಿಲಂಫೇರ್ ಪ್ರಶಸ್ತಿ ಪಡೆದು ನಲಿದಿದ್ದಾರೆ. ಕನ್ನಡ ಚಲನಚಿತ್ರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಪ್ರಿಯಾಮಣಿ ಅವರು ಶ್ರೇಷ್ಠ ನಟಿ ಎನಿಸಿದ್ದಾರೆ.

  ಹೈದರಾಬಾದಿನಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ದಕ್ಷಿಣ ಭಾರತದ ಸಿನಿತಾರೆಯರಿಗೆ ಐಡಿಯಾ 60ನೇ ಫಿಲಂಫೇರ್ ಪ್ರಶಸ್ತಿ 2012 ಪ್ರದಾನ ಮಾಡಲಾಯಿತು. ನಿರೀಕ್ಷೆಯಂತೆ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರರಂಗದ ಹಿರಿಯ-ಕಿರಿಯ ನಟ ನಟಿಯರು ಸಮಾರಂಭಕ್ಕೆ ಆಗಮಿಸಿದ್ದರು. ಶ್ರುತಿ ಹಾಸನ್, ನವ್ಯಾ ನಾಯರ್, ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವಾರು ಸಿನಿತಾರೆಯರು ನೃತ್ಯ ಪ್ರದರ್ಶನ ನೀಡಿ ರಂಜಿಸಿದರು.

  2004ರಲ್ಲಿ ಬಿಡುಗಡೆಯಾದ ಆಪ್ತಮಿತ್ರ ಚಿತ್ರ ಐದು ಪ್ರಶಸ್ತಿಯನ್ನು, 2005ರಲ್ಲಿ ಬಿಡುಗಡೆಯಾದ ತಮಿಳು ಅನ್ನಿಯನ್ ಮತ್ತು ತೆಲುಗು ನೂವಸ್ತಾನುಂಟೆ ಚಿತ್ರ ಎಂಟು ಪ್ರಶಸ್ತಿಯನ್ನು ಬಾಚಿಕೊಂಡಿತ್ತು.ಜುಲೈ 20ರಂದು ಹೈದರಾಬಾದಿನ international convention center ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ವಿಭಾಗ ಎಲ್ಲಾ ಭಾಷೆಗಳ ಚಿತ್ರಗಳ ಪ್ರಶಸ್ತಿ ವಿವರ ನಿರೀಕ್ಷಿಸಿ..ಕನ್ನಡ ವಿಭಾಗದ ಪ್ರಶಸ್ತಿಗಳ ಸಂಪೂರ್ಣ ವಿವರ ಚಿತ್ರಸರಣಿಯಲ್ಲಿ ನೋಡಿ

  ಫಿಲಂಫೇರ್ ದಕ್ಷಿಣ ಪ್ರಶಸ್ತಿ ಸಂಪೂರ್ಣ ಪಟ್ಟಿ

  ಅತ್ಯುತ್ತಮ ಚಿತ್ರ ಪ್ರಶಸ್ತಿ

  ಅತ್ಯುತ್ತಮ ಚಿತ್ರ ಪ್ರಶಸ್ತಿ

  * ನಾಗಣ್ಣ ನಿರ್ದೇಶನದ, ಆನಂದ ಅಪ್ಪುಗೋಳ್ ನಿರ್ಮಾಣದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಈ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಒಲಿಯಿತು. ಸ್ಪರ್ಧೆಯಲ್ಲಿ ಅದ್ದೂರಿ, ಡ್ರಾಮಾ, ಎದೆಗಾರಿಕೆ ಹಾಗೂ ಸಿದ್ಲಿಂಗು ಕೂಡಾ ಇದ್ದವು

  ಶ್ರೇಷ್ಠ ನಟ

  ಶ್ರೇಷ್ಠ ನಟ

  * ದರ್ಶನ್ ತೂಗುದೀಪ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ನಟಿಸಿ ಮೊದಲ ಬಾರಿಗೆ ಕಪ್ಪು ಸುಂದರಿ ಫಿಲಂಫೇರ್ ಪಡೆದಿದ್ದಾರೆ.

  ಸ್ಪರ್ಧೆಯಲ್ಲಿದ್ದವರು ಆದಿತ್ಯ (ಎದೆಗಾರಿಕೆ), ಪುನೀತ್ ರಾಜಕುಮಾರ್ (ಅಣ್ಣಾಬಾಂಡ್) ಯಶ್ (ಡ್ರಾಮಾ) ಯೋಗೀಶ್ (ಸಿದ್ಲಿಂಗು)

  ಅತ್ಯುತ್ತಮ ನಟಿ

  ಅತ್ಯುತ್ತಮ ನಟಿ

  ಚಾರುಲತಾ ಚಿತ್ರದಲ್ಲಿ ಸಯಾಮಿ ಅವಳಿ ಪಾತ್ರದಲ್ಲಿ ಕಾಣಿಸಿಕೊಂಡ ಪ್ರಿಯಾಮಣಿ ಮೊದಲ ಬಾರಿಗೆ ಕನ್ನಡ ಚಿತ್ರದ ಮೂಲಕ ಫಿಲಂಫೇರ್ ಗೆದ್ದ ಸಾಧನೆ ಮಾಡಿದ್ದಾರೆ.

  ಸ್ಪರ್ಧೆಯಲ್ಲಿದ್ದವರು ಪ್ರಣೀತಾ (ಭೀಮಾ ತೀರದಲಿ), ಪೂಜಾಗಾಂಧಿ (ದಂಡುಪಾಳ್ಯ) ರಮ್ಯಾ (ಸಿದ್ಲಿಂಗು) ರಾಧಿಕಾ ಪಂಡಿತ್ (ಅದ್ದೂರಿ)

  ಸಂಗೀತ ನಿರ್ದೇಶನ

  ಸಂಗೀತ ನಿರ್ದೇಶನ

  ನಾಲ್ಕನೇ ಬಾರಿಗೆ ಸಂಗೀತ ನಿರ್ದೇಶನಕ್ಕಾಗಿ ವಿ. ಹರಿಕೃಷ್ಣ ಅವರು ಫಿಲಂಫೇರ್ ಪಡೆದಿದ್ದಾರೆ. ಡ್ರಾಮಾ ಚಿತ್ರದ ಸಂಗೀತ ಹರಿಕೃಷ್ಣ ಅವರಿಗೆ ಕಪ್ಪು ಸುಂದರಿ ಮತ್ತೊಮ್ಮೆ ಒಲಿಯುವಂತೆ ಮಾಡಿದೆ.

  ಉಳಿದಂತೆ, ಅನೂಪ್ ಸೀಳನ್ (ಸಿದ್ಲಿಂಗು) ಅರ್ಜುನ್ ಜನ್ಯಾ (ಅಲೆಮಾರಿ) ಗುರುಕಿರಣ್ (ಗೋವಿಂದಾಯ ನಮ:) ಅವರು ಕೂಡಾ ಸ್ಪರ್ಧೆಯಲ್ಲಿದ್ದರು.

  ಗೀತ ಸಾಹಿತ್ಯ

  ಗೀತ ಸಾಹಿತ್ಯ

  ಡ್ರಾಮಾ 'ಬೊಂಬೆ ಆಡಿಸೋನು' ಹಾಡಿಗೆ ಅತ್ಯುತ್ತಮ ಚಿತ್ರ ಸಾಹಿತ್ಯ ಯೋಗರಾಜ್ ಭಟ್ ಫಿಲಂಫೇರ್ ಪ್ರಶಸ್ತಿ ಗಳಿಸಿದ್ದಾರೆ.

  ಜಯಂತ್ ಕಾಯ್ಕಿಣಿ (ಅಣ್ಣಾಬಾಂಡ್ ಚಿತ್ರದ ಏನೆಂದು ಹೆಸರಿಡಲಿ ಹಾಡು) ಕವಿರಾಜ್ (ರೋಮಿಯೋ ಚಿತ್ರದ ಆಲೋಚನೆ ಹಾಡು) ಪವನ್ ಒಡೆಯರ್ (ಗೋವಿಂದಾಯ ನಮ: ಚಿತ್ರದ ಪ್ಯಾರ್ಗೆ ಆಗ್ಬಿಟ್ಟೈತೆ ಹಾಡು) ವಿ ನಾಗೇಂದ್ರ ಪ್ರಸಾದ್ (RAMBO ಚಿತ್ರದ ಮನೆತನಕ ಬಾರೇ ಹಾಡು) ಕೂಡಾ ರೇಸ್ ನಲ್ಲಿದ್ದರು. ಇನ್ನಷ್ಟು ನಿರೀಕ್ಷಿಸಿ...

  ಶ್ರೇಷ್ಠ ನಿರ್ದೇಶಕ

  ಶ್ರೇಷ್ಠ ನಿರ್ದೇಶಕ

  ಸಿದ್ಲಿಂಗು ಚಿತ್ರಕ್ಕಾಗಿ ವಿಜಯ ಪ್ರಸಾದ್ ಅವರು ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದಾರೆ. ಕಿರುತೆರೆ ಮೂಲದಿಂದ ಬಂದ ವಿಜಯ ಪ್ರಸಾದ್ ಅವರು ಎಪಿ ಅರ್ಜುನ್ (ಅದ್ದೂರಿ), ನಾಗಣ್ಣ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ), ಸಂತು (ಅಲೆಮಾರಿ) ಸುಮನಾ ಕಿತ್ತೂರು (ಎದೆಗಾರಿಕೆ) ಅವರನ್ನು ಸೋಲಿಸಿರುವುದು ವಿಶೇಷ.

  ಎದೆಗಾರಿಕೆ ಹಾಗೂ ಸಂಗೊಳ್ಳಿ ರಾಯಣ್ಣ ನಿರ್ದೇಶಕರಿಂದ ತೀವ್ರ ಪೈಪೋಟಿ ಇತ್ತು ಎನ್ನಲಾಗಿದೆ.

  ಪೋಷಕ ಪಾತ್ರ ನಟ

  ಪೋಷಕ ಪಾತ್ರ ನಟ

  ಸುಮನಾ ಕಿತ್ತೂರ್ ನಿರ್ದೇಶನದ 'ಎದೆಗಾರಿಕೆ' ಚಿತ್ರದ ಅಭಿನಯಕಾಗಿ ಅತುಲ್ ಕುಲಕರ್ಣಿ ಪ್ರಶಸ್ತಿ ಪಡೆದಿದ್ದಾರೆ.

  ಉಳಿದಂತೆ ರವಿಕಾಳೆ (ದಂಡುಪಾಳ್ಯ), ಸಾಯಿಕುಮಾರ್ (ಕಲ್ಪನಾ), ಶರಣ್ (ಪಾರಿಜಾತ), ಶಿವಕುಮಾರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ಸ್ಪರ್ಧೆಯಲ್ಲಿದ್ದರು.

  ಪೋಷಕ ಪಾತ್ರ ನಟಿ

  ಪೋಷಕ ಪಾತ್ರ ನಟಿ

  ಸಿದ್ಲಿಂಗು ಚಿತ್ರದ ನಟನೆಗಾಗಿ ಸುಮನ್ ರಂಗನಾಥನ್ ಅವರು ಫಿಲಂಫೇರ್ ಪ್ರಶಸ್ತಿ ಪಡೆದಿದ್ದಾರೆ.

  ಸುಮನ್ ಅವರಿಗೆ ಕ್ಯಾಥರೀನಾ (ಗಾಡ್ ಫಾದರ್), ಜಯಪ್ರದಾ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ), ಸಿಂಧು ಲೋಕನಾಥ್ (ಡ್ರಾಮಾ), ಉಮಾಶ್ರೀ (ಅಲೆಮಾರಿ) ಅವರು ಪೈಪೋಟಿ ನೀಡಿದ್ದರು.

  ಶ್ರೇಷ್ಠ ಗಾಯಕ

  ಶ್ರೇಷ್ಠ ಗಾಯಕ

  ಅವಿನಾಶ್ ಛೆಬ್ಬಿ ಅವರಿಗೆ ಸಿದ್ಲಿಂಗು ಚಿತ್ರದ ಎಲ್ಲೆಲ್ಲೊ ಓಡುವ ಮನಸೆ...ಹಾಡಿಗಾಗಿ ಪ್ರಶಸ್ತಿ ಸಿಕ್ಕಿದೆ.

  ಉಳಿದಂತೆ ಚೇತನ್ (ಗೋವಿಂದಾಯ ನಮ: ಚಿತ್ರದ ಪ್ಯಾರ್ಗೆ ಆಗ್ಬಿಟ್ಟೈತೆ ಹಾಡಿಗಾಗಿ) ಫಯಾಜ್ ಖಾನ್ (ಅಲೆಮಾರಿ ಚಿತ್ರದ ಅಲೆ ಅಲೆಯೋ ಹಾಡಿಗಾಗಿ) ಸೋನು ನಿಗಂ (ಡ್ರಾಮಾ ಚಿತ್ರದ ಚೆಂದುಟಿಯ ಪಕ್ಕದಲಿ ಹಾಡಿಗಾಗಿ) ವಿ ಹರಿಕೃಷ್ಣ (ಅದ್ದೂರಿ ಚಿತ್ರದ ಆ ಅಮಾಟೆ ಹಾಡಿಗಾಗಿ) ಸ್ಪರ್ಧೆಯಲ್ಲಿದ್ದರು.

  ಶ್ರೇಷ್ಠ ಗಾಯಕಿ

  ಶ್ರೇಷ್ಠ ಗಾಯಕಿ

  ಗೋವಿಂದಾಯ ನಮ: ಚಿತ್ರದ ಪ್ಯಾರ್ಗೆ ಆಗ್ಬಿಟ್ಟೈತೆ ಹಾಡಿಗಾಗಿ ಇಂದು ನಾಗರಾಜ್ ಅವರಿಗೆ ಮೊದಲ ಬಾರಿಗೆ ಫಿಲಂಫೇರ್ ಪ್ರಶಸ್ತಿ ಸಿಕ್ಕಿದೆ.

  ಅನುರಾಧಾ ಭಟ್ (ಸಿದ್ಲಿಂಗು ಚಿತ್ರ ಎಲ್ಲೆಲ್ಲೋ ಓಡುವ ಮನಸೆ ಹಾಡಿಗಾಗಿ) ಶ್ರೇಯಾ ಘೋಷಾಲ್ (ಅಣ್ಣಾ ಬಾಂಡ್ ಚಿತ್ರದ ಏನೆಂದು ಹೆಸರಿಡಲಿ ಮತ್ತು ರೋಮಿಯೋ ಚಿತ್ರದ ಆಲೋಚನೆ ಹಾಡಿಗಾಗಿ) ವಾಣಿ ಹರಿಕೃಷ್ಣ (ಅದ್ದೂರಿ ಚಿತ್ರದ ಮುಸ್ಸಂಜೆ ವೇಳೇಲಿ ಹಾಡಿಗಾಗಿ) ಸ್ಪರ್ಧೆಯಲ್ಲಿದ್ದ ಇತರರು.

  Debut ಪ್ರಶಸ್ತಿ

  Debut ಪ್ರಶಸ್ತಿ

  ಸೈಬರ್ ಯುಗದೋಳ್ ನವ ಯುವ ಪ್ರೇಮ ಕಾವ್ಯಂ ಚಿತ್ರದ ನಟನೆಗಾಗಿ ಮೊದಲ ಚಿತ್ರದಲ್ಲೇ ಉತ್ತಮ ಅಭಿನಯಕ್ಕಾಗಿ ಶ್ವೇತ ಶ್ರೀವಾಸ್ತವ್

  English summary
  60th Filmfare awards South : Almost all the big stars of Tamil, Telugu, Kannada and Malayalam cinema came to cheer and honour their own people. Actress Priyamani was awarded the Best Actress (Kannada) and Actor Darshan (Krantiveera Sangolli Rayanna) (Kannada)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X