For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಚಿತ್ರಕ್ಕೆ ನಿಖಿಲ್ ಕುಮಾರ್ ಡಬ್ಬಿಂಗ್ ಮಾಡಿದ್ರಾ ಇಲ್ವಾ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಚಿತ್ರ ಕುರುಕ್ಷೇತ್ರ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವಿಶ್ವಾದ್ಯಂತ ಈ ಚಿತ್ರ ತೆರೆಕಾಣುತ್ತಿದೆ.

  3ಡಿ ವರ್ಷನ್ ನಲ್ಲಿ ರಿಲೀಸ್ ಆಗುತ್ತಿರುವ ಕುರುಕ್ಷೇತ್ರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 9 ರಂದು ಚಿತ್ರಮಂದಿರಕ್ಕೆ ಬರಲಿದೆ. ಸಿನಿಮಾ ಆರಂಭದಿಂದಲೂ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರ ಡಬ್ಬಿಂಗ್ ವಿಚಾರಕ್ಕೆ ಹೆಚ್ಚು ಸದ್ದು ಮಾಡಿತ್ತು.

  ಕುರುಕ್ಷೇತ್ರ ಹೊಸ ಟೀಸರ್: ಕರ್ಣ, ಅರ್ಜುನ, ದ್ರೌಪದಿ, ಕೃಷ್ಣಾವತಾರ ದರ್ಶನ

  ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಶ್, ನಿಖಿಲ್ ಕುಮಾರ್, ಸೋನು ಸೂದ್ ಅಂತಹ ಸ್ಟಾರ್ ಕಲಾವಿದರು ನಟಿಸಿದ್ದು, ನಿಖಿಲ್ ಮತ್ತು ರವಿಚಂದ್ರನ್ ಡಬ್ಬಿಂಗ್ ಮಾಡಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಕೊನೆಗೂ ಇವರಿಬ್ಬರು ಡಬ್ಬಿಂಗ್ ಮಾಡಿದ್ರಾ? ಮುನಿರತ್ನ ಏನಂದ್ರು?

  ನಿಖಿಲ್ ಡಬ್ಬಿಂಗ್ ಮಾಡಿದ್ರಾ?

  ನಿಖಿಲ್ ಡಬ್ಬಿಂಗ್ ಮಾಡಿದ್ರಾ?

  ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ನಿರ್ವಹಿಸಿರುವ ನಿಖಿಲ್ ಕುಮಾರ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿಲ್ಲ ಎನ್ನಲಾಗಿತ್ತು. ಚಿತ್ರೀಕರಣದ ಕಾರಣಗಳಿಂದ ಪೋಸ್ಟ್ ಪ್ರೊಡಕ್ಷನ್ ವೇಳೆ ಡಬ್ಬಿಂಗ್ ಮಾಡಿರಲಿಲ್ಲ. ಹೀಗಾಗಿ, ಬೇರೆ ನಟರಿಂದ ಡಬ್ ಮಾಡಿಸಬಹುದು ಎನ್ನಲಾಗಿತ್ತು.

  'ಕುರುಕ್ಷೇತ್ರ'ದ ಟಿವಿ ಹಕ್ಕು ಖರೀದಿ ಮಾಡಿದ ಜೀ ಕನ್ನಡ: ಎಷ್ಟು ಕೋಟಿ ಗೊತ್ತಾ?

  ಅವರನ್ನೇ ಕೇಳಿ ಅಂತಿದ್ದಾರೆ ಮುನಿರತ್ನ

  ಅವರನ್ನೇ ಕೇಳಿ ಅಂತಿದ್ದಾರೆ ಮುನಿರತ್ನ

  ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖರವಾಗಿ ಉತ್ತರ ಕೊಡದ ಮುನಿರತ್ನ ಅವರು ''ನೀವೇ ನೋಡಿ ಅವರು ಡಬ್ ಮಾಡಿದ್ದಾರಾ ಇಲ್ವಾ ಎಂದು'' ಅವರನ್ನೇ ಕೇಳಿ ಎಂದಷ್ಟೇ ಹೇಳಿದ್ರು. ''ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಮಾಡುತ್ತಿದ್ದೇನೆ ಅಂದ್ರೆ ಎಲ್ಲ ಕೆಲಸ ಮುಗಿಸಿ ಸೆನ್ಸಾರ್ ಮುಗಿಸಿ ಮಾತನಾಡುತ್ತಿದ್ದೇನೆ ಅಂದ್ರೆ ನೀವೇ ಯೋಚನೆ ಮಾಡಿ'' ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟರು. ಮುನಿರತ್ನ ಅವರ ಈ ಮಾತಿನಲ್ಲಿ ನಿಖಿಲ್ ಡಬ್ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸಿದ್ರು, ಮಾಡಿದ್ದಾರಾ ಇಲ್ವಾ ಎಂಬ ಅನುಮಾನ ಮಾತ್ರ ಹಾಗೆ ಉಳಿದುಕೊಂಡಿದೆ.

  'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?

  ರವಿಚಂದ್ರನ್ ಡಬ್ ಮಾಡಿದ್ರಾ?

  ರವಿಚಂದ್ರನ್ ಡಬ್ ಮಾಡಿದ್ರಾ?

  ಅದೇ ರೀತಿ ಕೃಷ್ಣನ ಪಾತ್ರದಲ್ಲಿ ನಟಿಸಿರುವ ರವಿಚಂದ್ರನ್ ಅವರು ಕೂಡ ಡಬ್ ಮಾಡಲ್ಲ. ಅವರ ಬದಲು ಶ್ರೀನಿವಾಸ ಪ್ರಭು ಅವರು ಡಬ್ ಮಾಡಲಿದ್ದಾರೆ ಎಂಬ ಸುದ್ದಿಯೂ ಇತ್ತು. ಈ ಬಗ್ಗೆ ಮುನಿರತ್ನ ಉತ್ತರಿಸಿದ್ದು, ''ಸ್ವತಃ ರವಿಚಂದ್ರನ್ ಅವರೇ ಡಬ್ ಮಾಡಿದ್ದಾರೆ. ನಾಲ್ಕೈದು ಸರಿ ಅವರೇ ಪ್ರಾಕ್ಟೀಸ್ ಮಾಡಿ ಕೊಟ್ಟಿದ್ದಾರೆ'' ಎಂದು ಗೊಂದಲಕ್ಕೆ ಸ್ಪಷ್ಟನೆ ನೀಡಿದರು.

  ಕುರುಕ್ಷೇತ್ರದ ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಮುನಿರತ್ನ, ರಿಲೀಸ್ ಬಗ್ಗೆ ಸುಳಿವು

  ಬೇರೆ ಭಾಷೆಯಲ್ಲಿ ಡಬ್ ಮಾಡಿದ್ದು ಯಾರು?

  ಬೇರೆ ಭಾಷೆಯಲ್ಲಿ ಡಬ್ ಮಾಡಿದ್ದು ಯಾರು?

  ಕನ್ನಡದಲ್ಲಿ ಅದೇ ಕಲಾವಿದರು ಡಬ್ ಮಾಡಿದ್ದು, ಬೇರೇ ಭಾಷೆಯಲ್ಲಿ ಆ ಪಾತ್ರಗಳಿಗೆ ಆಯಾ ಕಲಾವಿದರಿಗೆ ತಕ್ಕಂತೆ ಡಬ್ಬಿಂಗ್ ಕಲಾವಿದರನ್ನ ಆಯ್ಕೆ ಮಾಡಿ, ಧ್ವನಿ ಕೊಡಿಸಿದ್ದೇವೆ. ಎಲ್ಲ ಭಾಷೆಯಲ್ಲೂ ಡಬ್ಬಿಂಗ್ ಕೆಲಸ ಮುಗಿದಿದೆ'' ಎಂದು ನಿರ್ಮಾಪಕ ಮುನಿರತ್ನ ತಿಳಿಸಿದರು.

  English summary
  Muniratna Kurukshetra will release for varamahalakshmi festival on august 9th. Ambareesh, Darshan, Ravichandran, ArjunSarja, NikhilKumar are in the lead. directed by Naganna. produced by Muniratna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X