For Quick Alerts
  ALLOW NOTIFICATIONS  
  For Daily Alerts

  ಹೆಸರು ಬದಲಾಯಿಸಿಕೊಳ್ಳುತ್ತಿದ್ದಾರೆ ರಶ್ಮಿಕಾ, ಹೆಸರಿಡುವ ಅವಕಾಶ ನಿಮಗೆ!

  |

  ದಕ್ಷಿಣ ಭಾರತ ಸಿನಿ ಉದ್ಯಮದಲ್ಲಿ ಹೆಸರು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಗೆ ತಮ್ಮ ಹೆಸರಿನ ಮೇಲೆ ಬೇಸರವಾಗಿದೆಯೇ?

  ರಶ್ಮಿಕಾ ಚಿತ್ರರಂಗಕ್ಕೆ ಬರೋಕೆ ಈ ಘಟನೆಯೇ ಕಾರಣ..? | Rashmika Mandanna

  ಈ ಅನುಮಾನಕ್ಕೆ ಕಾರಣವಾಗಿದೆ ಅವರ ಟ್ವಿಟ್ಟರ್ ಪೋಸ್ಟ್. ' ನಟಿ ರಶ್ಮಿಕಾ ಮಂದಣ್ಣ ಹೆಸರು ಬದಲಾಯಿಸಿಕೊಳ್ಳುತ್ತಿದ್ದಾರಂತೆ. ಹೆಸರಿಡುವ ಅವಕಾಶ ಅಭಿಮಾನಿಗಳಿಗೆ ಕೊಟ್ಟಿದ್ದಾರೆ!

  ತಮ್ಮನ್ನು ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣತಮ್ಮನ್ನು ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣ

  ಭಿನ್ನವಾದ ಅದರಲ್ಲಿಯೂ ಕೊಡಗಿನ ಪ್ರಾದೇಶಿಕತೆ ಸಾರುವ ಮಂದಣ್ಣ ಹೆಸರನ್ನು ಜೊತೆಯಾಗಿರಿಸಿಕೊಂಡು ಉಳಿದ ನಟಿಯರಿಗಿಂತಲೂ ಭಿನ್ನವಾಗಿ ಉಳಿದಿದ್ದ ರಶ್ಮಿಕಾ ಮಂದಣ್ಣ ಗೆ ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಳ್ಳುವ ಖಯಾಲು ಬಂದಿದ್ದು ಏಕೆ?

  ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಪ್ರಶ್ನೆ

  ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಪ್ರಶ್ನೆ

  ಅಸಲಿಗೆ ರಶ್ಮಿಕಾ ಮಂದಣ್ಣ ಅವರ ಹೆಸರು ಬದಲಾವಣೆ ಐಡಿಯಾ ಗಂಭೀರವಾದದ್ದೇನೂ ಅಲ್ಲ. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಕೂತಿರುವ ರಶ್ಮಿಕಾ ಮಂದಣ್ಣ, ತಮಾಷೆಗಾಗಿ ಹೀಗೊಂದು ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  ಯಾವ ಹೆಸರು ನನಗೆ ಸೂಕ್ತ: ರಶ್ಮಿಕಾ ಪ್ರಶ್ನೆ

  ಯಾವ ಹೆಸರು ನನಗೆ ಸೂಕ್ತ: ರಶ್ಮಿಕಾ ಪ್ರಶ್ನೆ

  'ಒಂದೊಮ್ಮೆ ನಾನು ಹೆಸರು ಬದಲಾಯಿಸಿಕೊಳ್ಳಬೇಕು ಎಂದಾದರೆ ಯಾವ ಹೆಸರು ಸೂಕ್ತ? ಎಂದು ಪ್ರಶ್ನಿಸಿದ್ದಾರೆ. ಈ ಬಾರಿಯಾದರೂ ತುಸು ಸೌಮ್ಯದಿಂದ ವರ್ತಿಸಿ ಎಂದು ಟ್ರೋಲ್‌ಗಳಿಗೆ ಮನವಿಯನ್ನೂ ಮಾಡಿದ್ದಾರೆ ರಶ್ಮಿಕಾ. ಆದರೆ ಈ ಪ್ರಶ್ನೆಯನ್ನು ಅವರು ಕೇಲವ ತಮಾಷೆಗಾಗಿ ಕೇಳಿದ್ದಾರೆ.

  10 ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಶ್ಮಿಕಾ: ನಂ.1 ಸ್ಥಾನದಲ್ಲಿ ನಟಿ ಸಮಂತಾ10 ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಶ್ಮಿಕಾ: ನಂ.1 ಸ್ಥಾನದಲ್ಲಿ ನಟಿ ಸಮಂತಾ

  ಟ್ರೋಲಿಗರಿಗೆ ಆಹಾರವಾದ ರಶ್ಮಿಕಾ ಮಂದಣ್ಣ

  ಟ್ರೋಲಿಗರಿಗೆ ಆಹಾರವಾದ ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ ಅನ್ನು ಹಲವಾರು ಬಾರಿ ಟ್ರೋಲಿಗರು ತಮ್ಮ ಗುರಿಯನ್ನಾಗಿಸಿಕೊಂಡಿದ್ದಾರೆ. ಕೆಲವೊಮ್ಮೆಯಂತೂ ಅವಾಚ್ಯ ಶಬ್ದಗಳನ್ನು ಬಳಸಿ ಟ್ರೋಲ್ ಮಾಡಿದ್ದೂ ಸಹ ಇದೆ. ಬಹುತೇಕ ಮೌನವಾಗಿರುವ ರಶ್ಮಿಕಾ ಈಗ ಸ್ವಲ್ಪವೇ ತಿರುಗಿ ಬಿದ್ದಿದ್ದಾರೆ.

  ಟ್ರೋಲಿಗರಿಗೆ ತಿರುಗೇಟು ನೀಡಿದ ರಶ್ಮಿಕಾ

  ಟ್ರೋಲಿಗರಿಗೆ ತಿರುಗೇಟು ನೀಡಿದ ರಶ್ಮಿಕಾ

  'ನೀವು ಎದುರಿಸುವುದೆಲ್ಲವನ್ನು ವಿಶಾಲ ಮನೋಭಾವದಿಂದ, ತೀಕ್ಷ್ಣ ದೃಷ್ಟಿ ಮತ್ತು ಗಟ್ಟಿಯಾದ ಹೃದಯದಿಂದ ಸ್ವೀಕರಿಸುತ್ತಾ ಬೆಳೆಯಬೇಕು' ಎಂದು ರಶ್ಮಿಕಾ ಹೇಳಿದ್ದಾರೆ. ಇದು ಟ್ರೋಲಿಗರನ್ನು ಉದ್ದೇಶಿಸಿಯೇ ಅವರು ಹೇಳಿರುವುದು ಎನ್ನಲಾಗಿದೆ.

  English summary
  If Rashmika Mandanna had to change her name what would it to be. She asked this question to her fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X