For Quick Alerts
  ALLOW NOTIFICATIONS  
  For Daily Alerts

  ಸುಮಲತಾ ಲೋಕಸಭಾ ಚುನಾವಣೆಗೆ: ಪ್ರಚಾರ ಜವಾಬ್ದಾರಿ ದರ್ಶನ್ ಹೆಗಲಿಗೆ.!

  |
  ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಿದರೆ, ದರ್ಶನ್ ಪ್ರಚಾರದ 'ಸಾರಥಿ'..! | FILMIBEAT KANNADA

  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

  ಹಾಗೊಂದು ವೇಳೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕರೆ, ಚುನಾವಣಾ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  ಮಂಡ್ಯ ಕ್ಷೇತ್ರದ ಜನರು ಮತ್ತು ಅಭಿಮಾನಿಗಳ ಒತ್ತಾಯಕ್ಕೆ ಮಣಿದಿರುವ ಸುಮಲತಾ ಅಂಬರೀಶ್ ರಾಜಕೀಯಕ್ಕೆ ಬರಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಸುಮಲತಾ ಅಂಬರೀಶ್ ಗೆ ದರ್ಶನ್ ಸೇರಿದಂತೆ ಚಿತ್ರರಂಗದ ಹಲವರು ಬೆಂಬಲ ಸೂಚಿಸಿದ್ದಾರಂತೆ. ಮುಂದೆ ಓದಿರಿ...

  ಚುನಾವಣಾ ರಾಜಕೀಯಕ್ಕೆ ಸುಮಲತಾ ಅಂಬರೀಶ್.?

  ಚುನಾವಣಾ ರಾಜಕೀಯಕ್ಕೆ ಸುಮಲತಾ ಅಂಬರೀಶ್.?

  ''ರಾಜಕೀಯದ ಬಗ್ಗೆ ಸುಮಲತಾ ಅವರಿಗೆ ಆಸಕ್ತಿ ಇದೆ. ದರ್ಶನ್ ಸೇರಿದಂತೆ ಚಿತ್ರರಂಗದ ಹಲವರು ಸುಮಲತಾಗೆ ಸಪೋರ್ಟ್ ಮಾಡಲಿದ್ದಾರೆ. ಮಂಡ್ಯ ಜನರ ಒತ್ತಾಯಕ್ಕೆ ಸುಮಲತಾ ಮಣಿದು ಎಲೆಕ್ಷನ್ ಗೆ ನಿಲ್ಲಲು ಮನಸ್ಸು ಮಾಡಿದ್ದಾರೆ. ಫೆಬ್ರವರಿ 11ರಂದು ಸುಮಲತಾ ಅಂಬರೀಶ್ ತಮ್ಮ ನಿರ್ಧಾರವನ್ನು ಪ್ರಕಟ ಮಾಡಲಿದ್ದಾರೆ'' ಎಂದು ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಹೇಳಿದ್ದಾರೆ.

  ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ.?

  ಸಿದ್ದರಾಮಯ್ಯ ಜೊತೆ ದರ್ಶನ್ ಚರ್ಚೆ.?

  ಸಿದ್ದರಾಮಯ್ಯ ಜೊತೆ ದರ್ಶನ್ ಚರ್ಚೆ.?

  ಮೊನ್ನೆ ಶನಿವಾರವಷ್ಟೇ ಸಿದ್ದರಾಮಯ್ಯರವರನ್ನು ದರ್ಶನ್ ಭೇಟಿ ಮಾಡಿದ್ದರಂತೆ. ಅಂಬರೀಶ್ ಗೆ ಅತ್ಯಾಪ್ತನಾಗಿದ್ದ ದರ್ಶನ್, ಸುಮಲತಾ ಪರವಾಗಿ ಪ್ರಚಾರ ಮಾಡುವುದಾಗಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದಾರಂತೆ.

  ಮಂಡ್ಯ ಕ್ಷೇತ್ರದಿಂದ ಅಭಿ ಸ್ಪರ್ಧೆ: ಅಂಬಿ ಪುತ್ರ ಹೇಳಿದ್ದೇನು?

  ಜೆಡಿಎಸ್ ನಿಲುವೇನು.?

  ಜೆಡಿಎಸ್ ನಿಲುವೇನು.?

  ಹಾಗ್ನೋಡಿದ್ರೆ, ಮಂಡ್ಯ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದೆ. ಹೀಗಾಗಿ ಮಂಡ್ಯದಿಂದ ನಿಖಿಲ್ ರನ್ನ ಕಣಕ್ಕಿಳಿಸಲು ಜೆಡಿಎಸ್ ನಲ್ಲಿ ಪ್ಲಾನಿಂಗ್ ನಡೆದಿದೆ. ಹೀಗಿರುವಾಗ ಸುಮಲತಾ ಅಂಬರೀಶ್ ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಬಿಟ್ಟು ಕೊಡುತ್ತಾ? ಎಂಬುದೇ ಸದ್ಯದ ಪ್ರಶ್ನೆ.

  ವಿರೋಧ ಇಲ್ಲ ಎಂದಿದ್ದ ಕುಮಾರಸ್ವಾಮಿ.!

  ವಿರೋಧ ಇಲ್ಲ ಎಂದಿದ್ದ ಕುಮಾರಸ್ವಾಮಿ.!

  ''ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸಿದರೆ ನಮ್ಮ ವಿರೋಧ ಇಲ್ಲ. ಅದು ಅವರ ವೈಯಕ್ತಿಕ ನಿರ್ಧಾರ. ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸುವ ಬಗ್ಗೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ'' ಎಂದು ಇತ್ತೀಚಿಗಷ್ಟೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.

  English summary
  If Sumalatha Ambareesh contest in Mandya Loksabha Election 2019, Challenging Star Darshan to campaign for her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X