For Quick Alerts
  ALLOW NOTIFICATIONS  
  For Daily Alerts

  ಒಳ್ಳೆಯ ಮೀನೂಟ ಬೇಕು ಅಂದ್ರೆ ರಿಷಬ್ ಶೆಟ್ಟಿ ಹೇಳೋ ಜಾಗಕ್ಕೆ ಹೋಗಿ

  By Bharath Kumar
  |

  ನೀವು ನಾನ್ ವೆಜ್ ಪ್ರಿಯರೇ...ನಿಮಗೆ ಮೀನು ಅಂದ್ರೆ ಇಷ್ಟನಾ...ನೀವು ಮೀನೂಟ ತಿನ್ನಬೇಕು ಅಂತ ಒಳ್ಳೆಯ ಹೋಟೆಲ್ ಹುಡುಕುತ್ತಿದ್ದೀರಾ.?

  ಹಾಗಾದ್ರೆ, ಸ್ಯಾಂಡಲ್ ವುಡ್ ನಿರ್ದೇಶಕ ರಿಷಬ್ ಶೆಟ್ಟಿ ಅವರು ಹೇಳೋ ಈ ಜಾಗಕ್ಕೆ ಹೋಗಿ, ನಿಮಗೆ ಅತ್ಯದ್ಭುತವಾದ ಮೀನೂಟ ಸವಿಯುವ ಅವಕಾಶ ಸಿಗುತ್ತೆ.

  ಹೌದು, ಮೀನೂಟ ಪ್ರಿಯರಿಗೆ ನಿರ್ದೇಶಕ ರಿಷಬ್ ಶೆಟ್ಟಿ ಒಂದು ಹೋಟೆಲ್ ವಿಳಾಸ ಸೂಚಿಸಿದ್ದಾರೆ. ಆದ್ರೆ, ಇದು ಇರೋದು ಬೆಂಗಳೂರು ಅಥವಾ ಮೈಸೂರಿನಲ್ಲಲ್ಲ. ಮೀನಿಗೆ ಖ್ಯಾತಿ ಪಡೆದಿರುವ ಮಂಗಳೂರಿನಲ್ಲಂತೆ.

  ಇತ್ತೀಚಿಗೆ ಮಂಗಳೂರಿನಲ್ಲಿ ಹೋಟೆಲ್ ವೊಂದರಲ್ಲಿ ಮೀನೂಟ ತಿಂದಿರುವ ರಿಷಬ್ ಶೆಟ್ಟಿ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ. ''ಒಳ್ಳೆಯ ಮೀನೂಟ ಬೇಕಂದ್ರೆ ಮಂಗಳೂರಿನ ಕಡೆ ಬರಬೇಕು. ಆದ್ರೆ ಮಂಗಳೂರಿನಲ್ಲಿ ಒಳ್ಳೆಯ ಮೀನೂಟ ಬೇಕಂದ್ರೆ ಒಂದ್ಸಲ ಬಿಜಾಯಿಯಲ್ಲಿರೋ Illadha VANAS ಹೋಟಲ್ಲಿಗೆ ಬನ್ನಿ. ನೀವು ಸುಮ್ಮನೆ ಆ ರೋಡಿನಲ್ಲಿ ಹೋದರೂ ಘಮ್ಮನೆ ಮೀನಿನ ವಾಸನೆ ಬರ್ತದೆ. ಸೀದಾ ಒಳಗೆ ಹೋಗಿ ಊಟ ಮಾಡಿದ್ರಿ ಅಂದ್ರೆ ಮುಗೀತು. ಮತ್ತೆ ಹೋಗಿ ಗೊತ್ತಿರೋರ್ಗೆಲ್ಲಾ ಹೇಳ್ತಿರಾ. ಈಗ ನಾನ್ ಹೇಳ್ತಿದ್ದಿನಲ್ಲಾ ಹಾಗೆ. ವ್ಹಾ, ಎಂಥ ಸೂಪರ್ರಾಗಿರೋ ಮೀನ್ ಮಾರ್ರೆ, ಲಾಯಕ್ಕಿತ್.. ಮಿಸ್ ಮಾಡದೇ, ಹೋಗಿ ಬನ್ನಿ'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಮತ್ತೆ 'ರಿಚ್ಚಿ' ಅವತಾರದಲ್ಲಿ ರಕ್ಷಿತ್ ಶೆಟ್ಟಿ ಮತ್ತೆ 'ರಿಚ್ಚಿ' ಅವತಾರದಲ್ಲಿ ರಕ್ಷಿತ್ ಶೆಟ್ಟಿ

  ಇನ್ನುಳಿದಂತೆ ರಿಷಬ್ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಶೂಟಿಂಗ್ ಮುಗಿಸಿ 'ಬೆಲ್ ಬಾಟಂ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ರಕ್ಷಿತ್ ಶೆಟ್ಟಿ ಜೊತೆ ಮತ್ತೊಂದು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ.

  English summary
  if you want to have best fish curry, then listen to Kannada director rishab shetty and visit Illadha VANAS hotel in, mangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X