»   » ಹೋ!! ಇಳೆಯದಳಪತಿ ಸಂಭಾವನೆ ಎಷ್ಟು ಗೊತ್ತಾ?

ಹೋ!! ಇಳೆಯದಳಪತಿ ಸಂಭಾವನೆ ಎಷ್ಟು ಗೊತ್ತಾ?

By: ಸೋನು
Subscribe to Filmibeat Kannada

ಕಾಲಿವುಡ್ ಕ್ಷೇತ್ರದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಯಾರೆಂದು ಕೇಳಿದರೆ ನೀವೇನು ಹೇಳುತ್ತೀರಿ. ಸಾಮಾನ್ಯವಾಗಿ ಮೊದಲು ಎಲ್ಲರ ಬಾಯಲ್ಲಿ ಬರುವುದು ಚಿತ್ರರಂಗ ಕ್ಷೇತ್ರದಲ್ಲಿ ಲೀಡಿಂಗ್ ನಲ್ಲಿರುವ 'ಸೂಪರ್ ಸ್ಟಾರ್' ರಜನಿ ಕಾಂತ್ ಹೆಸರು ತಾನೇ.

ಆದರೆ ಹೊಸ ಸುದ್ದಿ ಏನಪ್ಪಾ ಅಂದ್ರೆ, ಸಂಭಾವನೆಯಲ್ಲಿ ನಮ್ಮ 'ಸೂಪರ್ ಸ್ಟಾರ್' ನಟನನ್ನು ಹಿಂದಿಕ್ಕಿದ ಆ ನಟರೊಬ್ಬರಿದ್ದಾರೆ ಅವರು ಯಾರು ಅಂತೀರಾ. ಅವರೇ ನಮ್ಮ 'ಇಳೆಯದಳಪತಿ' ಡಾ.ವಿಜಯ್. ನೀವು ನಂಬಲು ಸಿದ್ದರಿದ್ದೀರಾ, ನಂಬಲೇಬೇಕು.

ಲೇಟೆಸ್ಟ್ ನ್ಯೂಸ್ ಪ್ರಕಾರ, ನಿರ್ದೇಶಕ ಅಟ್ಲಿ ಕುಮಾರ್, ಆಕ್ಷನ್-ಕಟ್ ಹೇಳುತ್ತಿರುವ ವಿಜಯ್ ತಮ್ಮ ಮುಂದಿನ 'ವಿಜಯ್ 59 ನೇ' ಚಿತ್ರಕ್ಕೆ ಅತೀ ಹೆಚ್ಚು ಮೊತ್ತದ ಚೆಕ್ಕನ್ನು ಈಗಾಗಲೇ ಪಡೆದಿದ್ದಾರೆ. ಅದು ಎಷ್ಟು ಅಂತೀರಾ, ಬರೋಬ್ಬರಿ 30 ಕೋಟಿ ಅದೂ ತೆರಿಗೆ ರಹಿತ.

'ವಿಜಯ್ 59 ನೇ' ಚಿತ್ರದ ನಿರ್ಮಾಪಕ ಕಾಲೈಪುಲಿ ಎಸ್. ತಮನ್ ಈಗಾಗಲೇ 'ಕತ್ತಿ' ನಾಯಕನಿಗೆ ಸಂಭಾವನೆ ನೀಡಿದ್ದು, 'ಸೂಪರ್ ಸ್ಟಾರ್' ರಜನಿಕಾಂತ್ 'ಉಳಗನಾಯಕನ್' ಕಮಲ್ ಹಾಸನ್ ನಂತರ ಇದೀಗ 'ಇಳೆಯದಳಪತಿ' ವಿಜಯ್, ಇಡೀ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕನಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿಜಯ್ ಇಷ್ಟು ಮೊತ್ತದ ಸಂಭಾವನೆ ಪಡೆಯಲು ಮುಖ್ಯ ಕಾರಣ ಏನಪ್ಪಾ ಅಂದ್ರೆ, 'ಇಳೆಯದಳಪತಿ' ಕಳೆದ 2-3 ವರ್ಷಗಳಿಂದ ನಟಿಸಿದ ಚಿತ್ರಗಳು ಭಾಕ್ಸಾಫೀಸ್ ಕೊಳ್ಳೆ ಹೊಡೆದಿವೆ. ಇವರು ಬಹು ಬೇಡಿಕೆಯ ನಟರಾಗಿದ್ದರಿಂದ ಇವರನ್ನು ಹಾಕಿ ಚಿತ್ರ ಮಾಡಿದರೆ ಅದು ಖಂಡಿತ ಹಿಟ್ ಆಗುತ್ತೆ ಅನ್ನುವುದು ಚಿತ್ರರಂಗದ ಅಭಿಪ್ರಾಯ.

2015 ಜನವರಿಯಿಂದ ಅತೀ ಹೆಚ್ಚು ಸಂಭಾವನೆ ಪಡೆಯುವ 10 ತಮಿಳು ನಾಯಕ ನಟರ ಸಂಭಾವನೆ ಪರೀಶೀಲಿಸಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

'ಸೂಪರ್ ಸ್ಟಾರ್' ರಜನಿಕಾಂತ್

'ಸೂಪರ್ ಸ್ಟಾರ್' ರಜನಿಕಾಂತ್ ಈಗಾಗಲೇ ನಂ 1 ಸ್ಥಾನದಲ್ಲಿದ್ದು, ಅವರು ಇರುವ ಸ್ಥಾನಕ್ಕೆ 35 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನೂ ಅವರ ಮುಂಬರುವ ಚಿತ್ರಗಳಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

'ಉಳಗನಾಯಕನ್' ಎಂದೇ ಖ್ಯಾತಿಯಾಗಿರುವ ಕಮಲ್ ಹಾಸನ್

'ವಿಶ್ವರೂಪಂ' ಚಿತ್ರ ಭರ್ಜರಿ ಗಳಿಕೆ ಕಂಡ ನಂತರ ಕಮಲ್ ಹಾಸನ್ ಮಾರ್ಕಟ್ ವ್ಯಾಲ್ಯೂ ಹೆಚ್ಚಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 'ಪಾಪನಾಶನಂ' ಹಿಟ್ ಆಗಿದ್ದು, 'ಇಳೆಯದಳಪತಿ' ವಿಜಯ್ ಸಾಲಿಗೆ ಇವರು ಸೇರುತ್ತಾರೆ. ಆದರೆ ಕಮಲ್ ಹಾಸನ್ ಅದೃಷ್ಟ ಚೆನ್ನಾಗಿದ್ದರೆ ವಿಜಯ್ ಸಂಭಾವನೆಯನ್ನು ಬೀಟ್ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

'ತಲಾ' ಅಜಿತ್ ಕುಮಾರ್

'ತಲಾ' ಅಜಿತ್ ಕುಮಾರ್ 'ಎನ್ನೈ ಅರಿಂದಾಲ್' ಚಿತ್ರದ ಯಶಸ್ಸಿನಿಂದ 25 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

'ಇಳೆಯದಳಪತಿ' ವಿಜಯ್

ವಿಜಯ್ ಯಾವಾಗಲೂ ತಮ್ಮ ಸಂಭಾವನೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಬರುತ್ತಿದ್ದರು. ರಿಪೋರ್ಟ್ ಹೇಳುವ ಪ್ರಕಾರ, ಜನವರಿ ತಿಂಗಳಿನಲ್ಲಿ ವಿಜಯ್ ಸಂಭಾವನೆ 20 ಕೋಟಿಯವರೆಗೂ ಇತ್ತು. ಆದರೆ ಲೇಟೆಸ್ಟ್ ರಿಪೋರ್ಟ್ 30 ಕೋಟಿ ಎನ್ನುತ್ತಿದೆ.

ಸೂರ್ಯ

ನಟ ಸೂರ್ಯ ಒಮ್ಮೆ 25 ಕೋಟಿವರೆಗೂ ತಲುಪಿದ್ದರು ಆದರೆ ಸಡನ್ ಆಗಿ ಅದು ಡೌನ್ ಆಗಿತ್ತು. ಸದ್ಯಕ್ಕೆ ಸೂರ್ಯ ಅವರ ಹೋಮ್ ಬ್ಯಾನರ್ ನಲ್ಲಿ ನಟಿಸುತ್ತಿರುವುದರಿಂದ ಸಂಭಾವನೆ ಮಾತೇ ಇಲ್ಲ ಬಿಡಿ. ಆದರೆ ಜನವರಿ ರಿಪೋರ್ಟ್ ಪ್ರಕಾರ ಪ್ರಾರಂಭದಲ್ಲಿ ಸುಮಾರು 20 ಕೋಟಿ ಸಂಭಾವನೆ ಪಡೆಯುತ್ತಿದ್ದರು.

ನಟ ವಿಕ್ರಂ

ನಟ ವಿಕ್ರಂ ತಮ್ಮ ಸಂಭಾವನೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಸದ್ಯಕ್ಕೆ ವರದಿ ಪ್ರಕಾರ ಅವರ ಸಂಭಾವನೆ 12 ಕೋಟಿ.

ನಟ ಧನುಷ್

ಧನುಷ್ ರೀಸೆಂಟ್ ಹಿಟ್ ಪರಿಶೀಲಿಸಿದರೆ ಅಷ್ಟಾಗಿ ಯಾವುದೂ ಇಲ್ಲ ಆದ್ದರಿಂದ ಸದ್ಯಕ್ಕೆ ಅವರ ಸಂಭಾವನೆ 10 ಕೋಟಿ.

ಶಿವಕಾರ್ತಿಕೇಯನ್

ನಟ ಶಿವಕಾರ್ತಿಕೇಯನ್ ಅದೃಷ್ಟ ನೆಟ್ಟಗಿದ್ದರಿಂದ ಅವರ ನಟನೆಯ ಕೆಲವು ಚಿತ್ರಗಳು ಹಿಟ್ ಲಿಸ್ಟ್ ನಲ್ಲಿವೆ. ಅವದರೇ ವಿಭಿನ್ನ ಶೈಲಿಯಿಂದ ನಟಿಸುವ ಶಿವಕಾರ್ತಿಕೇಯನ್ ಸದ್ಯದ ಸಂಭಾವನೆ ಸುಮಾರು 7 ಕೋಟಿ.

ಕಾರ್ತಿ

ನಟ ಕಾರ್ತಿ ಅವರ 'ಮದ್ರಾಸ್' ಚಿತ್ರ ಹಿಟ್ ಕಂಡುಕೊಂಡಿದ್ದರಿಂದ ಅವರ ಸಂಭಾವನೆ 6 ಕೋಟಿಗೇರಿದೆ.

ವಿಶಾಲ್

ನಟ ವಿಶಾಲ್ ಅವರು ಹೆಚ್ಚಾಗಿ ಹೋಮ್ ಬ್ಯಾನರ್ ಗಳಲ್ಲಿ ನಟಿಸುವುದರಿಂದ ಅವರ ಸಂಭಾವನೆಯಲ್ಲಿ ಯಾವುದೇ ಥರದ ಏರಿಳಿತಗಳಿಲ್ಲಾ. ಅವರು ಯಾವಾಗಲೂ ತಮ್ಮ 5 ಕೋಟಿ ಸಂಭಾವನೆಯನ್ನು ಉಳಿಸಿಕೊಂಡು ಬಂದಿದ್ದಾರೆ.

English summary
Ilayathalapathy Vijay Is Now The Second Highest Paid Actor. According to a report, ilayathalapathy Vijay has received his highest pay cheque for 'vijay59' which is directed by Atlee.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada