»   » ಇಳೆಯದಳಪತಿ ವಿಜಯ್ 'ಪುಲಿ' ಆಡಿಯೋ ಲಾಂಚ್

ಇಳೆಯದಳಪತಿ ವಿಜಯ್ 'ಪುಲಿ' ಆಡಿಯೋ ಲಾಂಚ್

By: ಸೋನು ಗೌಡ
Subscribe to Filmibeat Kannada

ಕಾಲಿವುಡ್ ಸ್ಟಾರ್ ಇಳೆಯದಳಪತಿ ವಿಜಯ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ 'ಪುಲಿ' ಚಿತ್ರದ ಅಡಿಯೋ ರಿಲೀಸ್ ಆಗಿದ್ದು, ಅದ್ದೂರಿ ಕಾರ್ಯಕ್ರಮಕ್ಕೆ ಇಡೀ ತಮಿಳು ಚಿತ್ರರಂಗವೇ ಸಾಕ್ಷಿಯಾಯಿತು.

ಆಗಸ್ಟ್ 2ರಂದು ನಡೆದ ತಮಿಳು ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ 'ಪುಲಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಪ್ರಿನ್ಸ್ ಮಹೇಶ್ ಬಾಬು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈಗಾಗಲೇ ತಮಿಳು ಚಿತ್ರರಂಗದಲ್ಲಿ ಈ ಮೊದಲು ಸೂಪರ್ ಸ್ಟಾರ್ ರಜನೀಕಾಂತ್ ಅವರ ಎಂದಿರನ್ ಹಾಗೂ ವಿಕ್ರಂ 'ಐ' ಮುಂತಾದ ಚಿತ್ರಗಳು ಅದ್ಧೂರಿ ಸಮಾರಂಭದ ಮೂಲಕ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಸಿದ್ದರು, ಇದೀಗ ಆ ಸಾಲಿಗೆ ಇಳೆಯದಳಪತಿ ವಿಜಯ್ ಅಭಿನಯದ 'ಪುಲಿ' ಚಿತ್ರ ಸೇರ್ಪಡೆಗೊಳ್ಳುತ್ತಿದೆ.

ಸುಮಾರು 200 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ 'ಪುಲಿ' ಚಿತ್ರಕ್ಕೆ ನಿರ್ದೇಶಕ ಚೆಂಬು ದೇವನ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಮುಂದೆ ಓದಿ...

ಇಳೆಯದಳಪತಿ ಡಾ.ವಿಜಯ್

"ನನಗೆ ನಿಜವನ್ನು ದ್ವೇಷಿಸಲು ಗೊತ್ತು, ಆದರೆ ಸುಳ್ಳನ್ನು ಪ್ರೀತಿಸಲು ಗೊತ್ತಿಲ್ಲ' 'ನಾನು ಗೆಲುವು ಸಾಧಿಸುವ ಮುನ್ನ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇನೆ', 'ನಾನು ಮತ್ತು ನನ್ನ ಅಭಿಮಾನಿಗಳ ಜೊತೆ ಇತರರು ಬೆಳೆಯಲು ಅವಕಾಶ ಕೊಡುತ್ತೇನೆ' ಎಂದು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮನದಾಳದ ಮಾತುಗಳನ್ನಾಡಿದ್ದಾರೆ.

'ತುಪಾಕಿ', 'ಜಿಲ್ಲಾ', 'ಕತ್ತಿ' ಚಿತ್ರದ ನಂತರ ತಮಿಳು ಚಿತ್ರರಂಗದ ಈ ವರ್ಷದ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಚಿತ್ರ 'ಪುಲಿ' ವಿಜಯ್ ಗೆ ಯಾವ ರೀತಿಯಲ್ಲಿ ಯಶಸ್ಸು ತಂದುಕೊಡಲಿದೆ ಕಾದು ನೋಡಬೇಕಿದೆ.

ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್

'ಪುಲಿ' ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿರುವ ಕನ್ನಡ ನಟ ಕಿಚ್ಚ ಸುದೀಪ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದದ್ದಕ್ಕೆ ಇಳೆಯದಳಪತಿ ವಿಜಯ್ ಅವರಿಗೆ ಟ್ವೀಟ್ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.

ಕ್ಯಾಮರಾ ಮೆನ್ ನಟ್ಟಿ ಅಲಿಯಾಸ್ ನಟರಾಜನ್ ಸುಬ್ರಮಣ್ಯಮ್

ಇದೇ ಮೊದಲ ಬಾರಿಗೆ ತಮಿಳು ಚಿತ್ರಕ್ಕೆ ಕ್ಯಾಮರಾ ಕೈ ಚಳಕ ತೋರಿರುವ ಖ್ಯಾತ ಕ್ಯಾಮರ ಪರ್ಸನ್ ನಟ್ಟಿ ಅಲಿಯಾಸ್ ನಟರಾಜನ್ ಸುಬ್ರಮಣ್ಯಮ್ ಅವರ ಸಿನಿಮಾಟೋಗ್ರಫಿ 'ಪುಲಿ' ಚಿತ್ರದಲ್ಲಿ ಸಖತ್ ಆಗಿ ಮೂಡಿಬಂದಿದೆ. ಬಾಲಿವುಡ್ ಹಿಟ್ ಚಿತ್ರಗಳಾದ 'ಬ್ಲ್ಯಾಕ್ ಫ್ರೈಡೇ', 'ಜಬ್ ವಿ ಮೆಟ್', 'ಹಾಲಿಡೇ' ಚಿತ್ರಗಳಿಗೆ ಕೆಲಸ ಮಾಡಿದ ಅನುಭವ ಇವರಿಗಿದೆ.

ವರ್ಲ್ಡ್ ಕ್ಲಾಸ್ ದೃಶ್ಯಗಳು

ಬಹುನಿರೀಕ್ಷಿತ 'ಪುಲಿ' ಚಿತ್ರದಲ್ಲಿ 'ಬಾಹುಬಲಿ'ಗಿಂತಲೂ ಹೆಚ್ಚಿನ ವಿಷುವಲ್ ಗಳನ್ನು ಬಳಸಲಾಗಿದೆ. ಅಮೇರಿಕಾ, ಉಕ್ರೇನ್, ಡೆನ್ಮಾರ್ಕ್, ಐರ್ಲೆಂಡ್, ರಷ್ಯಾ, ಹೀಗೆ ಸುಮಾರು 9 ದೇಶಗಳಿಂದ ಈ ಚಿತ್ರಕ್ಕೆ ಬೇಕಾಗುವ ಆನಿಮೇಟೇಡ್ ಹಾಗೂ ಸ್ಪೆಷಲ್ ಎಫೆಕ್ಟ್ಸ್ ಗಳನ್ನು ತರಿಸಿ ಬಳಸಲಾಗಿದೆ.

'ಪುಲಿ'ಯಲ್ಲಿ ಪ್ರಭಾವಿ ನಟ-ನಟಿಯರು

ಇಳೆಯದಳಪತಿ ವಿಜಯ್, ಕನ್ನಡ ನಟ ಕಿಚ್ಚ ಸುದೀಪ್, ಶ್ರುತಿ ಹಾಸನ್, ಹನ್ಸಿಕಾ ಮೋಟ್ವಾನಿ, ಬಾಲಿವುಡ್ ನಟಿ ಶ್ರೀದೇವಿ, ನಂದಿತ ಶ್ವೇತಾ, ಪ್ರಭು, ಮುಂತಾದ ಪ್ರಭಾವಿ ನಾಯಕ ನಾಯಕಿಯರ ತಾರಾಗಣ 'ಪುಲಿ' ಚಿತ್ರಕ್ಕಿದೆ.

ಇಳೆಯದಳಪತಿ 'ಪುಲಿ' ವರ್ಸಸ್ ಸೂಪರ್ ಸ್ಟಾರ್ 'ಎಂದಿರನ್'

ತಮಿಳು ಚಿತ್ರರಂಗದಲ್ಲಿ ಬಾಕ್ಸಾಫೀಸ್ ಧೂಳಿಪಟ ಮಾಡಿದ ಸೂಪರ್ ಸ್ಟಾರ್ 'ಎಂದಿರನ್' ಚಿತ್ರವನ್ನು ವಿಜಯ್ 'ಪುಲಿ' ಬೀಟ್ ಮಾಡಬಹುದೇ ಅನ್ನೋದು ಇದೀಗ ಸದ್ಯಕ್ಕೆ ಅಭಿಮಾನಿಗಳಲ್ಲಿ ಮೂಡುವ ಪ್ರಶ್ನೆ. ಎಲ್ಲದಕ್ಕೂ ಚಿತ್ರ ತೆರೆ ಕಂಡ ಮೇಲೆ ಉತ್ತರ ಸಿಗಲಿದೆ.

English summary
Ilayathalapathy Vijay's Puli is getting bigger with each passing day in all its aspects as the makers of the film are leaving no stone unturned. The latest report is that the supposedly grand audio launch function held on the 2nd of August. The movie is directed by Chimbu Deven.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada