»   » 5 ಸ್ಟಾರ್ ಹೋಟೆಲ್ ನಲ್ಲಿ 'ಕಬಾಲಿ' ಶೋ ಖಂಡಿಸಿದ ಕನ್ನಡ ಪ್ರದರ್ಶಕರು

5 ಸ್ಟಾರ್ ಹೋಟೆಲ್ ನಲ್ಲಿ 'ಕಬಾಲಿ' ಶೋ ಖಂಡಿಸಿದ ಕನ್ನಡ ಪ್ರದರ್ಶಕರು

Posted By:
Subscribe to Filmibeat Kannada

ರಜನಿಕಾಂತ್ ಅಭಿನಯದ 'ಕಬಾಲಿ' ಚಿತ್ರವನ್ನು ಕರ್ನಾಟಕದಲ್ಲಿ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಪ್ರದರ್ಶನ ಮಾಡುತ್ತಾರೆ ಎಂಬ ಸುದ್ದಿ ಬಂದಿದ್ದೇ ತಡ ಎಲ್ಲಾ ಕಡೆ ಭಾರಿ ವಿರೋಧ ವ್ಯಕ್ತವಾಗಿದೆ.

ಯಾವುದೇ ಅನುಮತಿ ಇಲ್ಲದೇ ಕಾನೂನುಬಾಹಿರವಾಗಿ ಈ ತರ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಅನ್ಯಭಾಷಾ ಚಿತ್ರವಾದ 'ಕಬಾಲಿ' ಪ್ರದರ್ಶನ ಮಾಡಬಾರದು ಎಂದು ಕನ್ನಡ ಚಿತ್ರಪ್ರದರ್ಶಕರು ರೊಚ್ಚಿಗೆದ್ದಿದ್ದಾರೆ.['ಕಬಾಲಿ' ಕ್ರೇಜ್: ಸೂಪರ್ ಸುಪ್ರೀಂ ಐಡಿಯಾ ಮಾಡಿದ ಲಹರಿ ವೇಲು]

Illegal to screen Rajinikanth's 'Kabali' in 5 star hotels says KFCC

ಈ ಬಗ್ಗೆ ಮಂಗಳವಾರದಂದು ಸಾಕಷ್ಟು ಚರ್ಚೆಗಳಾದ ಹಿನ್ನಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬುಧವಾರದಂದು (ಜುಲೈ 20) ಸಭೆ ನಡೆಸಿದ್ದಾರೆ.

ಇದೀಗ ಕಾನೂನುಬಾಹಿರವಾಗಿ ಪ್ರದರ್ಶನಗೊಳ್ಳುತ್ತಿರುವ 'ಕಬಾಲಿ' ಚಿತ್ರದ ಪ್ರದರ್ಶನಕ್ಕೆ ತಡೆಕೋರಿ ಜಿಲ್ಲಾ ದಂಡಾಧಿಕಾರಿಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು ದೀರ್ಘ ಪತ್ರ ಬರೆದಿದ್ದಾರೆ.[ಇದಕ್ಕೆ ಖುಷಿ ಪಡಬೇಕೋ, ತಲೆ ಚಚ್ಚಿಕೊಳ್ಳಬೇಕೋ, ನೀವೇ ನಿರ್ಧರಿಸಿ.!]

Illegal to screen Rajinikanth's 'Kabali' in 5 star hotels says KFCC

"ಚಲನಚಿತ್ರಗಳನ್ನು ಪ್ರತಿಷ್ಠಿತ ಹೋಟೆಲ್, ಕ್ಲಬ್ ಮತ್ತು ಇತರೆ ಹೊರಾಂಗಣಗಳಲ್ಲಿ ಪ್ರದರ್ಶಿಸುವ ಬಗ್ಗೆ ಜಾಹೀರಾತು ಮತ್ತು ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಕರ್ನಾಟಕ ರಾಜ್ಯ ಚಲನಚಿತ್ರ ಪ್ರದರ್ಶಕರು ಖಂಡಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ವಾಣಿಜ್ಯ ಮಂಡಳಿಯನ್ನು ವಿನಂತಿಸಿದ್ದಾರೆ".

"ಸಿನಿಮಾಟೊಗ್ರಫಿ (ರೂಲ್ಸ್) 1983ರ ಅಡಿಯಲ್ಲಿ ಸೆನ್ಸಾರ್ ಮಾಡಲ್ಪಟ್ಟ ಚಿತ್ರಗಳು, ಕರ್ನಾಟಕ ಸಿನಿಮಾ (ರೆಗ್ಯುಲೇಷನ್) ಕಾಯ್ದೆ 1964ರ ಅಡಿಯಲ್ಲಿ ನಿಯಮ 26 ಮತ್ತು 27ರ ಪ್ರಕಾರ ಎನ್ಒಸಿ ಸ್ಥಳದಲ್ಲಿ ನಿರ್ಮಾಣಗೊಂಡ ಚಿತ್ರಮಂದಿರದ ಆವರಣದಲ್ಲಿ ಚಿತ್ರ ಪ್ರದರ್ಶಿಸಬೇಕಾಗಿದೆ".[ಸಿಲಿಕಾನ್ ಸಿಟಿಯಲ್ಲಿ ಕಬಾಲಿ ಕ್ರೇಜ್: 'ನೆರುಪ್ಪುಡಾ'...]

Illegal to screen Rajinikanth's 'Kabali' in 5 star hotels says KFCC

"ಚಲನಚಿತ್ರ ಪ್ರದರ್ಶನ ಮಾಡಬೇಕಾದರೆ, ಅದಕ್ಕೆ ಸಾಕಷ್ಡು ರೀತಿ-ರಿವಾಜಿನ ಜೊತೆಗೆ ಅನುಮತಿ ಪಡೆಯಬೇಕು. ಪ್ರಮುಖವಾಗಿ ಜಿಲ್ಲಾಧಿಕಾರಿಗಳು ಚಿತ್ರ ಪ್ರದರ್ಶನಕ್ಕೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಮುನ್ನ ವಿದ್ಯುತ್ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ವಿಭಾಗ, ಸ್ಥಳೀಯ ನಗರ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪಿಡಬ್ಲ್ಯೂಡಿ ಇಲಾಖೆಯಿಂದ ಅನುಮತಿ ಪತ್ರವನ್ನು ಪಡೆಯುವುದರ ಜೊತೆಗೆ ಪರವಾನಿಗೆ ದಾಖಲಿಸಬೇಕು".

"ಇದರ ಜೊತೆಗೆ ಮನರಂಜನಾ ತೆರಿಗೆ ಪರ್ಮಿಟ್ ಪಡೆದು, ಟಿಕೆಟ್ ಮಾರಾಟ ಮಾಡುವ ಮೂಲಕ ಪ್ರೇಕ್ಷಕರಿಗೆ ಚಿತ್ರ ತೋರಿಸಬೇಕೆಂಬ ನಿಯಮವಿದೆ. ಅದ್ಯಾವುದೂ ಮಾಡದ ಲಹರಿ ವೇಲು ಕ್ರಮವನ್ನು ಖಂಡಿಸಿವುದರ ಜೊತೆಗೆ, ಈ ಪ್ರದರ್ಶನವೇ ಕಾನೂನುಬಾಹಿರ ಎಂದು ಪ್ರದರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಸಲ್ಮಾನ್ ಖಾನ್ ಗೂ ರಜನಿಕಾಂತ್ ಗೂ ಇರುವ ವ್ಯತ್ಯಾಸ ಇಷ್ಟೆ.!]

Illegal to screen Rajinikanth's 'Kabali' in 5 star hotels says KFCC

ಪ್ರತಿಷ್ಠಿತ ಹೋಟೆಲ್ ಮತ್ತು ಕ್ಲಬ್ ನಲ್ಲಿ 'ಕಬಾಲಿ' ಚಿತ್ರ ಪ್ರದರ್ಶನಗೊಳ್ಳುವ ಹೇಳಿಕೆ ಪತ್ರಿಕೆಯಲ್ಲಿ ಹಾಗೂ ಅಂತರ್ಜಾಲದಲ್ಲಿ ಪ್ರಕಟವಾಗಿದ್ದು, ಈಗಾಗಲೇ ಆನ್ ಲೈನ್ ಮೂಲಕ ಟಿಕೆಟ್ ಖರೀದಿಸುವ ಪ್ರಕ್ರಿಯೆಯು ಆರಂಭಗೊಂಡಿದೆ. ಈ ರೀತಿಯ ಕಾನೂನುಬಾಹಿರ ಪ್ರದರ್ಶನಕ್ಕೆ, ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ದಂಡಾಧಿಕಾರಿಗಳು, ಮನರಂಜನಾ ತೆರಿಗೆ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರದರ್ಶಕರು ಕೋರಿದ್ದಾರೆ.

ಒಟ್ನಲ್ಲಿ ಸಿನಿಮಾ ಪ್ರದರ್ಶಕರ ಪರವಾಗಿ ಚಲನಚಿತ್ರ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು ಈ ಪತ್ರ ಬರೆದಿದ್ದು, ಇದೀಗ ಲಹರಿ ವೇಲು ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

English summary
The Karnataka Film Chamber of Commerce has said that it is illegal to screen films in 5-star hotels. The Tamil film Kabali starring Rajinikanth is scheduled to release in a few five star hotels in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada