Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರ 10 ಪಾಪುಲರ್ ಚಿತ್ರಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ; ಅಗ್ರಸ್ಥಾನ ಯಾರ ಪಾಲು?
ಸಿನಿಮಾ ಸುದ್ದಿ, ರೇಟಿಂಗ್ ಹಾಗೂ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಅಂಶಗಳ ವಿಚಾರವಾಗಿ ಜನಪ್ರಿಯತೆ ಸಂಪಾದಿಸಿರುವ ಐಎಂಡಿಬಿ ( ಇಂಟರ್‌ನೆಟ್ ಮೂವಿ ಡೇಟಾಬೇಸ್ ) ಪ್ರತಿ ವರ್ಷದ ಅಂತ್ಯದ ವೇಳೆಗೆ ವರ್ಷದಲ್ಲಿ ಅತಿಹೆಚ್ಚು ಜನಪ್ರಿಯತೆ ಗಳಿಸಿದ ಚಿತ್ರಗಳು ಯಾವುವು, ನಟ - ನಟಿಯರು ಯಾರು ಹಾಗೂ ನಿರ್ಮಾಪಕರ ಟಾಪ್ 10 ಪಟ್ಟಿಯನ್ನು ಬಿಡುಗಡೆಗೊಳಿಸುತ್ತದೆ.
ಹೀಗೆ ಪ್ರತಿ ವರ್ಷದ ಹಾಗೆ ಈ ವರ್ಷವೂ ಸಹ ಐಎಂಡಿಬಿ ಈ ವರ್ಷವೂ ಸಹ ಈ ರೀತಿಯ ಟಾಪ್ 10 ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ವರ್ಷ ಭಾರತದಲ್ಲಿ ಬಿಡುಗಡೆಗೊಂಡ ಹಲವು ಚಿತ್ರಗಳು ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿ ಜನಪ್ರಿಯತೆ ಪಡೆದುಕೊಂಡಿವೆ. ಇನ್ನು ಐಎಂಡಿಬಿ ಬಿಡುಗಡೆಗೊಳಿಸಿರುವ ಈ ವರ್ಷ ಅತಿಹೆಚ್ಚು ಪಾಪುಲಾರಿಟಿ ಪಡೆದುಕೊಂಡ ಚಿತ್ರಗಳ ಟಾಪ್ 10 ಪಟ್ಟಿಯಲ್ಲಿ ಯಾವ ಯಾವ ಚಿತ್ರಗಳು ಸ್ಥಾನ ಪಡೆದುಕೊಂಡಿವೆ ಎಂಬುದರ ವಿವರ ಈ ಕೆಳಕಂಡಂತಿದೆ..

ಆರ್ ಆರ್ ಆರ್‌ಗೆ ಅಗ್ರಸ್ಥಾನ
ಎಸ್ ಎಸ್ ರಾಜಮೌಳಿ ನಿರ್ದೇಶನದ, ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ನಟನೆಯ ಆರ್ ಆರ್ ಆರ್ ಚಿತ್ರ ಈ ವರ್ಷ ಐಎಂಡಿಬಿ ಬಿಡುಗಡೆಗೊಳಿಸಿರುವ ಅತಿಹೆಚ್ಚು ಜನಪ್ರಿಯತೆ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಆರ್ ಆರ್ ಚಿತ್ರದ ಕುರಿತು ಈ ವರ್ಷ ಪೂರ್ತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಲೇ ಇದೆ ಎನ್ನಬಹುದು. ಇನ್ನು ಚಿತ್ರ ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಆರ್ ಆರ್ ಆರ್ ಒಂದಲ್ಲ ಒಂದು ವಿಷಯಕ್ಕೆ ಸತತವಾಗಿ ಟ್ರೆಂಡಿಂಗ್ ಪಟ್ಟಿಯಲ್ಲಿಯೇ ಉಳಿದುಕೊಂಡಿದೆ.

ಟಾಪ್ 10 ಪಟ್ಟಿ ಹೀಗಿದೆ
ಐಎಂಡಿಬಿ ಬಿಡುಗಡೆಗೊಳಿಸಿರುವ ಟಾಪ್ 10 ಜನಪ್ರಿಯತೆ ಗಳಿಸಿದ ಚಿತ್ರಗಳ ಟಾಪ್ 10 ಪಟ್ಟಿ ಇಲ್ಲಿದೆ..
1. ಆರ್ ಆರ್ ಆರ್ ( ತೆಲುಗು )
2. ದಿ ಕಾಶ್ಮೀರ್ ಫೈಲ್ಸ್ ( ಹಿಂದಿ )
3. ಕೆಜಿಎಫ್ ಚಾಪ್ಟರ್ 2( ಕನ್ನಡ )
4. ವಿಕ್ರಮ್ ( ತಮಿಳು )
5. ಕಾಂತಾರ ( ಕನ್ನಡ )
6. ರಾಕೆಟ್ರಿ: ದ ನಂಬಿ ಎಫೆಕ್ಟ್ ( ದ್ವಿಭಾಷಾ ಚಿತ್ರ )
7. ಮೇಜರ್ ( ತೆಲುಗು )
8. ಸೀತಾ ರಾಮಮ್ ( ತೆಲುಗು )
9. ಪೊನ್ನಿಯಿನ್ ಸೆಲ್ವನ್ 1 ( ತಮಿಳು )
10. 777 ಚಾರ್ಲಿ ( ಕನ್ನಡ )

ದಕ್ಷಿಣ ಭಾರತ ಚಿತ್ರಗಳ ಅಬ್ಬರ
ಬಾಕ್ಸ್ ಆಫೀಸ್ ಮಾತ್ರವಲ್ಲದೇ ಐಎಂಡಿಬಿಯಲ್ಲಿಯೂ ಸಹ ಈ ವರ್ಷ ಬಾಲಿವುಡ್ ಚಿತ್ರಗಳನ್ನು ಸೌತ್ ಸಿನಿಮಾಗಳು ಸದೆಬಡಿದಿವೆ. ಈ ಮೇಲ್ಕಂಡ ಪಟ್ಟಿಯಲ್ಲಿ ದಿ ಕಾಶ್ಮೀರ್ ಫೈಲ್ಸ್ ಹೊರತುಪಡಿಸಿ ಉಳಿದ ಯಾವ ಹಿಂದಿ ಚಿತ್ರವೂ ಸಹ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಇನ್ನುಳಿದಂತೆ ಕನ್ನಡದ ಮೂರು ಚಿತ್ರಗಳು, ತೆಲುಗಿನ ಮೂರು ಚಿತ್ರಗಳು ಹಾಗೂ ತಮಿಳಿನ ಎರಡು ಚಿತ್ರಗಳು ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡು ಅಬ್ಬರಿಸಿವೆ.