»   » 'ಟೋನಿ'ಯಲ್ಲಿ ಒಂದಾದ ಇಮ್ರಾನ್, ಐಂದ್ರಿತಾ ರೇ

'ಟೋನಿ'ಯಲ್ಲಿ ಒಂದಾದ ಇಮ್ರಾನ್, ಐಂದ್ರಿತಾ ರೇ

Posted By:
Subscribe to Filmibeat Kannada
'ರಜನಿಕಾಂತ' ಚಿತ್ರದ ಹಾಡಿನ ಶೂಟಿಂಗಾಗಿ ದುನಿಯಾ ವಿಜಯ್ ಮೇಲೆ ಮಲಗೊಲ್ಲ ಎಂದು ಹೇಳಿ ಐಂದ್ರಿತಾ ರೇ ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಜೊತೆ ಕಿರಿಕ್ ಮಾಡಿಕೊಂಡಿದ್ದದ್ದು ಗೊತ್ತೇ ಇದೆಯಲ್ಲಾ. ಸಿಂಗಾಪುರದಲ್ಲಿ ಶೂಟಿಂಗ್ ನಡೆಯಬೇಕಾದ ಸಂದರ್ಭದಲ್ಲಿ ಈ 'ಮಲಗುವ' ಗಲಾಟೆ ನಡೆದು ಗಾಂಧಿನಗರದ ನಡುರಾತ್ರಿ ಎದ್ದೇಳುವಂತಾಗಿತ್ತು.

ಈ ವಿಚಾರದಲ್ಲಿ 'ರಜನಿಕಾಂತ' ಚಿತ್ರದ ನಾಯಕ ನಟ ದುನಿಯಾ ವಿಜಯ್ ಸೈಲೆಂಟಾಗಿದ್ದು ಬಿಟ್ಟು ತಮಗೇನು ಗೊತ್ತಿಲ್ಲ ಎಂದು ಜಾಣತನ ಮೆರೆದರು. ಈ ಕಥೆಯಲ್ಲಾ ಮುಗಿದಿದೆ. ಈಗ ಮತ್ತೆ ಐಂದ್ರಿತಾಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲು ಸಿದ್ಧವಾಗಿದ್ದಾರೆ.

ಶ್ರೀನಗರ ಕಿಟ್ಟಿ ಮುಖ್ಯಭೂಮಿಕೆಯಲ್ಲಿರುವ 'ಟೋನಿ' ಚಿತ್ರದಲ್ಲಿ ಐಂದ್ರಿತಾ ಅವರಿಗೆ ಇಮ್ರಾನ್ ಸಾಹೇಬರು ಸ್ಟೆಪ್ಸ್ ಹೇಳಿಕೊಡಲಿದ್ದಾರಂತೆ. ಹಳೆಯದೆಲ್ಲವನ್ನೂ ಮರೆತಿರುವ ಇಬ್ಬರೂ ಈಗ ಮತ್ತೆ ಒಂದಾಗುತ್ತಿದ್ದಾರೆ. ಡಿಸೆಂಬರ್ 15ರಿಂದ ಈ ಹಾಡಿನ ಚಿತ್ರೀಕರಣ ನಡೆಯಲಿದೆ.

ಅಂದಹಾಗೆ 'ಟೋನಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ಒಲವೇ ಮಂದಾರ' ನಿರ್ದೇಶನದ ಜಯತೀರ್ಥ. ದುನಿಯಾ ವಿಜಯ್ ಮೇಲೆ ಮಲಗೊಲ್ಲ ಎಂದು ಹಠ ಹಿಡಿದಿದ್ದ ಐಂದ್ರಿತಾರನ್ನು "ನೀನೊಬ್ಬ ವೃತ್ತಿಪರ ಕಲಾವಿದೆಯೇ ಅಲ್ಲ" ಎಂದು ಗುಡುಗಿದ್ದರು. ಈಗೇನಂತಾರೋ ಏನೋ? (ಏಜೆನ್ಸೀಸ್)

English summary
The ace choreographer Imran Sardaria and actress Aindrita Ray team up again in Kannada film Tony. Earlier Aindrita Ray refused to dance some of the steps as per Imran instruction in Duniya Vijay lead Rajanikantha film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada