ವಿಚಿತ್ರ ಸಮಸ್ಯೆಯಲ್ಲಿ ಸಿಲುಕಿದ 'ಎಂದೆಂದಿಗೂ' ಚಿತ್ರ
ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ ಒಂದು ವಿಚಿತ್ರ ಸಮಸ್ಯೆಗೆ ಸಿಲುಕಿ ಸುದ್ದಿ ಮಾಡುತ್ತಿದೆ. ಅದೇನೆಂದರೆ ಅವರ ನಿರ್ದೇಶನದ 'ಎಂದೆಂದಿಗೂ' ಚಿತ್ರದ ಕೆಲವು ಸೀನ್ ಗಳು ಹಾಗೂ ಟ್ರೇಲರ್ ಲೀಕ್ ಆಗಿರುವುದು.
ಅಜಯ್ ರಾವ್ ಮತ್ತು ರಾಧಿಕಾ ಪಂಡಿತ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ. ಚಿತ್ರದ ಕಥೆ ಏನು ಎಂಬ ಬಗ್ಗೆ ಇದುವರೆಗೂ ಇಮ್ರಾನ್ ಆಗಲಿ ಚಿತ್ರತಂಡವಾಗಲಿ ತುಟಿ ಬಿಚ್ಚಿರಲಿಲ್ಲ. ಹಾಗಾಗಿ ಚಿತ್ರದ ಬಗ್ಗೆ ಸಹಜವಾಗಿ ಕುತೂಹಲ ಇದ್ದೇ ಇತ್ತು.

ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೆಯಾಗಿದೆ. ಫೋನು ಕಳೆದುಕೊಂಡಿದ್ದ ಇಮ್ರಾನ್ ಅವರಿಗೆ ಆತ್ಮೀಯರಿಂದ ಮೆಚ್ಚುಗೆಯ ಸಂದೇಶಗಳು ಬರತೊಡಗಿದವಂತೆ. ಆಗಲೇ ಗೊತ್ತಾಗಿದ್ದು ಚಿತ್ರದ ಟ್ರೇಲರ್ ತಮಗೇ ಗೊತ್ತಿಲ್ಲದಂತೆ ರಿಲೀಸ್ ಆಗಿರುವುದು.
ಇದಕ್ಕಿಂತಲೂ ಮುಖ್ಯವಾಗಿ ಎಂಟೂವರೆ ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯಗಳೂ ಲೀಕ್ ಆಗಿರುವುದು. ಸ್ವೀಡನ್ ನಲ್ಲಿ ಮೂವತ್ತೈದು ದಿನಗಳ ಕಾಲ ಚಿತ್ರೀಕರಿಸಿದ್ದ ಬಲು ಮುಖ್ಯವಾದ ದೃಶ್ಯಗಳು ಅವು ಎನ್ನುತ್ತಾರೆ ಇಮ್ರಾನ್. ಇದೀಗ ಮತ್ತೆ ರೀಶೂಟ್ ಮಾಡಬೇಕಾದ ಅನಿರ್ವಾಯತೆ ಅವರಿಗೆ ಎದುರಾಗಿದೆ.
ಒಂದು ಕಡೆ ನಿರ್ಮಾಪಕರಿಂದ ಬೈಗುಳ ಇನ್ನೊಂದು ಕಡೆಯಿಂದ ಇಮ್ರಾನ್ ಅವರು ಬೇಕಂತಲೇ ಏನಾದರೂ ಗಿಮ್ಮಿಕ್ ಮಾಡುತ್ತಿದ್ದಾರಾ ಎಂಬ ಅನುಮಾನ. ಒಟ್ಟಾರೆ ಇಮ್ರಾನ್ ಅವರಿಗೆ ಅತ್ತ ಧರಿ ಇತ್ತ ಪುಲಿ ಎಂಬಂತಾಗಿದೆ. ಕಡೆಗೆ ಪೊಲೀಸ್ ಕಂಪ್ಲೇಂಟೂ ಕೊಟ್ಟಿದ್ದಾರಂತೆ.


Click it and Unblock the Notifications











