For Quick Alerts
  ALLOW NOTIFICATIONS  
  For Daily Alerts

  'ಉಪ್ಪು ಹುಳಿ ಖಾರ' ತಿನ್ನೋಕೆ ರೆಡಿಯಾದ ಇಮ್ರಾನ್ ಸರ್ದಾರಿಯಾ

  By Suneetha
  |

  ನೃತ್ಯ ನಿರ್ದೇಶಕನಿಂದ ಸಿನಿಮಾ ನಿರ್ದೇಶಕರಾಗಿ ಭಡ್ತಿ ಪಡೆದುಕೊಂಡಿರುವ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರು 'ಎಂದೆಂದಿಗೂ' ಚಿತ್ರ ನಿರ್ದೇಶನ ಮಾಡಿದ ನಂತರ ಇದೀಗ ಎರಡನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.

  ಹೌದು ಈ ಬಾರಿ 'ಉಪ್ಪು ಹುಳಿ ಖಾರ' ಎಂಬ ವಿಭಿನ್ನ ಸಿನಿಮಾ ಮಾಡಲು ಹೊರಟಿರುವ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರು 'ಭಾನುವಾರ' (ಏಪ್ರಿಲ್ 17) ದಂದು ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದಾರೆ.[ದಲೇರ್ ಮಹಿಂದಿ ನಿರ್ಮಾಣದಲ್ಲಿ ಕನ್ನಡ ಚಿತ್ರ 'ಪವರ್ ಆಫ್ ಡ್ಯಾನ್ಸ್']

  ನಿರ್ಮಾಪಕ ಎಂ.ರಮೇಶ್ ರೆಡ್ಡಿ ಅವರು ಬಂಡವಾಳ ಹೂಡುತ್ತಿರುವ ಚಿತ್ರಕ್ಕೆ ಲೇಖಕಿ ಸುಧಾ ಮೂರ್ತಿ ಅವರು ಕ್ಲ್ಯಾಪ್ ಮಾಡಿದ್ದು, ಇಡೀ ಚಿತ್ರತಂಡ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಬೀಡು ಬಿಟ್ಟಿತ್ತು.

  ಅಂದಹಾಗೆ ಈ ಚಿತ್ರದಲ್ಲಿ ಮಾಲಾಶ್ರೀ, ಅನುಶ್ರೀ ಮತ್ತು ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಅಂತ ಮೂರು 'ಶ್ರೀಗಳು' ಇರೋದು ವಿಶೇಷ. ಅಂತ ಖುಷಿ ವ್ಯಕ್ತಪಡಿಸುತ್ತಾರೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರು.['ಲೇಡಿ ಟೈಗರ್' ಮಾಲಾಶ್ರೀ ಅವರ ಮುಂದಿನ ಪ್ರಾಜೆಕ್ಟ್ ಯಾವುದು?]

  ನಟಿ ಮಾಲಾಶ್ರೀ ಅವರು 'ಗಂಗಾ' ಚಿತ್ರದ ಬಳಿಕ ಮತ್ತೆ ಕಮ್ ಬ್ಯಾಕ್ ಆದರೆ, ಬಿಗ್ ಬಾಸ್ ಖ್ಯಾತಿಯ ಡ್ಯಾನ್ಸರ್ ಜಯಶ್ರೀ ರಾಮಯ್ಯ ಅವರಿಗೆ ಇದು ಚೊಚ್ಚಲ ಸಿನಿಮಾ. 'ರಿಂಗ್ ಮಾಸ್ಟರ್' ನಂತರ ಮತ್ತೆ ನಟಿ ಕಮ್ ನಿರೂಪಕಿ ಅನುಶ್ರೀ ಅವರು ಫೀಲ್ಡ್ ಗೆ ಇಳಿದಿದ್ದಾರೆ.

  ನಟ ಅಜೇಯ್ ರಾವ್ ಮತ್ತು ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದ 'ಎಂದೆಂದಿಗೂ' [ಚಿತ್ರ ವಿಮರ್ಶೆ: 'ಎಂದೆಂದಿಗೂ' ಸಾಕೆನ್ನಿಸುವ ಚಿತ್ರ] ಚಿತ್ರದಲ್ಲಿ ಹಾಸ್ಯ-ಹಾರರ್ ಮಿಶ್ರಿತ ಕಥೆಯಲ್ಲಿ ಮನರಂಜನೆ ನೀಡಿದ್ದರು. ಇದೀಗ 'ಉಪ್ಪು ಹುಳಿ ಖಾರ' ಚಿತ್ರದಲ್ಲಿ ಸಂಪೂರ್ಣ ಕಾಮಿಡಿ ಮೂಲಕ ಪ್ರೇಕ್ಷಕರನ್ನು ಮನರಂಜಿಸಲಿದ್ದಾರಂತೆ.

  'ಉಪ್ಪು ಹುಳಿ ಖಾರ' ಚಿತ್ರದ ಮುಹೂರ್ತದ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ..

  'ಉಪ್ಪು ಹುಳಿ ಖಾರ' ತಿನ್ನೋಕೆ ರೆಡಿಯಾದ ಇಮ್ರಾನ್ ಸರ್ದಾರಿಯಾ

  English summary
  Actress Malashri and Actress Anushree Starrer 'Uppu Huli Kara' Muhoortha was held in Banashankari temple bangalore on April 17th. The movie is directed by Choreographer Imran Sardhariya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X