For Quick Alerts
  ALLOW NOTIFICATIONS  
  For Daily Alerts

  ವೀರಶೈವ ವೇದಿಕೆಯಿಂದ ಸಂಕೇತ್ ಕಾಶಿಗೆ ನಮನ

  By Mahesh
  |

  ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಯುವ ವೇದಿಕೆಯು ಭಾನುವಾರ ಬೆಂಗಳೂರು ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸಮಾಜದ ಕಲಾ ರತ್ನ ಲಿಂಗೈಕ್ಯ ಶ್ರೀ ಸಂಕೇತ್ ಕಾಶಿ ಅವರ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

  ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಪ್ರಶಾಂತ್ ಕಲ್ಲೂರ್, ಕಲಾವಿದರಾದ ಜಗದೀಶ್ ಮಲೆನಾಡು ಹಾಗೂ ಅವರ ಪತ್ನಿ, ಡಾ|| ಶ್ರೀ ಚಿಕ್ಕಹೆಜ್ಜಾಜಿ ಮಹದೇವ್, ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿಗಳಾದ ಯೋಗಾನಂದ ಸೇರಿದಂತೆ ಹಲವರು ಲಿಂಗೈಕ್ಯ ಸಂಕೇತ್ ಕಾಶಿ ಅವರಿಗೆ ನುಡಿ ನಮನವನ್ನು ಸಲ್ಲಿಸಿದರು.

  ಜಗದೀಶ್ ಮಲೆನಾಡು ಅವರು ಮಾತನಾಡುತ್ತಾ ಕಾಶಿ ಮತ್ತವರ ಒಡನಾಟ, ಕಳೆದ 10-12 ದಿನಗಳ ಹಿಂದೆ ಎಲ್ಲರೂ ಒಟ್ಟಾಗಿದ್ದ ಸಂದರ್ಭವನ್ನು ನೆನೆಯುತ್ತಾ ಭಾವುಕರಾದರು.

  In memory of Actor Sanketh Kashi Veerashaiva Yuva Vedike

  ಇನ್ನು ಡಾ|| ಚಿಕ್ಕಹೆಜ್ಜಾಜಿ ಮಹದೇವ್ ಅವರು ಸಂಸ್ಕಾರವಂತ ಎನ್ನುವಂತಹ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ ಕೆಲವು ಕ್ಷಣಗಳನ್ನು ಮೆಲುಕು ಹಾಕುತ್ತಾ ಚಿತ್ರರಂಗದಲ್ಲಿ ಪೋಷಕ ಪಾತ್ರಧಾರಿಗಳಿಗೆ ಇರುವಂತಹ ಕಷ್ಟವನ್ನು ವಿವರಿಸಿದರು. ಕಾರ್ಯಕ್ರಮದ ಅತಿಥಿಗಳು ಲಿಂಗೈಕ್ಯರಾದ ಕಾಶಿ ಅವರ ಆತ್ಮಕ್ಕೆ ಶಾಂತಿ ಕೋರಿದರು.

  English summary
  In memory of Actor Sanketh Kashi Veerashaiva Lingayat Yuva Vedike organised a program in Bengaluru. Sanketh Kashi's friend artist Jagadish Malnad was the chief guest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X