»   » 'ಉತ್ತಮ ವಿಲನ್'ಗಳಿಗೆ ದರ್ಶನ್-ಸೃಜನ್ ನಮನ

'ಉತ್ತಮ ವಿಲನ್'ಗಳಿಗೆ ದರ್ಶನ್-ಸೃಜನ್ ನಮನ

Posted By:
Subscribe to Filmibeat Kannada

ದರ್ಶನ್, ವಿನೋದ್ ಪ್ರಭಾಕರ್, ನಾಗೇಂದ್ರ ಅರಸ್, ಧರ್ಮ ಕೀರ್ತಿರಾಜ್, ಸೃಜನ್ ಲೋಕೇಶ್ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಿನುಗಿದ ಪ್ರಖ್ಯಾತ ಖಳನಟರ ಪುತ್ರರೆಲ್ಲಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ 2008 ರಲ್ಲಿ ತೆರೆಕಂಡ 'ನವಗ್ರಹ' ಸಿನಿಮಾ ಬಗ್ಗೆ ನಿಮಗೆ ಗೊತ್ತಿರಬಹುದು.

ಈಗ 'ನವಗ್ರಹ' ಚಿತ್ರದ ಬಗ್ಗೆ ನಾವು ನೆನಪಿಸಿಕೊಳ್ಳುವುದಕ್ಕೆ ಕಾರಣ ಈ ಫೋಟೋ.....

In pic; Darshan and Srujan Lokesh pays tribute for Villains

ಸ್ಯಾಂಡಲ್ ವುಡ್ ನ ಫೇಮಸ್ ವಿಲನ್ ಗಳಾದ 'ನಟ ಭಯಂಕರ' ವಜ್ರಮುನಿ, ತೂಗುದೀಪ ಶ್ರೀನಿವಾಸ್, ಲೋಕೇಶ್, ಸುಧೀರ್, ಧೀರೇಂದ್ರ ಗೋಪಾಲ್, 'ಟೈಗರ್' ಪ್ರಭಾಕರ್, ಸುಂದರ್ ಕೃಷ್ಣ ಅರಸ್ ಮತ್ತು ಶಕ್ತಿ ಪ್ರಸಾದ್ ರವರ ಫೋಟೋಗಳ ಮುಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸೃಜನ್ ಲೋಕೇಶ್ ನಿಂತಿರುವ ಸ್ಟಿಲ್ ಇದು. [ಚಾಲೆಂಜಿಂಗ್ ಸ್ಟಾರ್ 'ಜಗ್ಗುದಾದ'ನ, ಫಸ್ಟ್ ಲುಕ್ ಪೋಸ್ಟರ್ ಔಟ್!]

ಮೂಲಗಳ ಪ್ರಕಾರ, 'ಜಗ್ಗುದಾದಾ' ಚಿತ್ರದ ಸನ್ನಿವೇಶವೊಂದರಲ್ಲಿ ಗಜ ಮತ್ತು ಸೃಜ ಕನ್ನಡದ ಖಳನಟರಿಗೆಲ್ಲಾ ನಮನ ಸಲ್ಲಿಸುತ್ತಾರಂತೆ. ಆ ಸಂದರ್ಭದಲ್ಲಿ ಕ್ಲಿಕ್ ಆಗಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

'ಜಗ್ಗುದಾದಾ' ಚಿತ್ರದ ಈ ಫೋಟೋ ನೋಡಿದ್ರೆ, ದರ್ಶನ್ ಅಭಿಮಾನಿಗಳಿಗೆ 'ನವಗ್ರಹ' ಸಿನಿಮಾ ನೆನಪಿಗೆ ಬರುವುದು ಗ್ಯಾರೆಂಟಿ. ಹಾಗಂದ ಮಾತ್ರಕ್ಕೆ, ಇಲ್ಲಿ ಗಜ-ಸೃಜ ಬಿಟ್ಟರೆ ಬೇರೆ ಯಾವ ಖಳನಟರ ಪುತ್ರರು 'ಜಗ್ಗುದಾದಾ' ಸಿನಿಮಾದಲ್ಲಿ ನಟಿಸಿಲ್ಲ. ದರ್ಶನ್ ಪಾತ್ರದಲ್ಲಿ ಕಾಮಿಡಿ ಜೊತೆಗೆ ಸ್ವಲ್ಪ ನೆಗೆಟಿವ್ ಶೇಡ್ ಮಿಕ್ಸ್ ಇದೆ. ರಾಘವೇಂದ್ರ ಹೆಗಡೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. [ದರ್ಶನ್ ಕೈಗೆ ಪೆಟ್ಟು; 'ಜಗ್ಗು ದಾದಾ' ಶೂಟಿಂಗ್ ಮುಂದಕ್ಕೆ.!]

ಪ್ರಶಸ್ತಿ ವಿಚಾರವಾಗಿ 'ಉತ್ತಮ ವಿಲನ್' ಪರ ದನಿಯೆತ್ತಿದ್ದ ದರ್ಶನ್, ತಮ್ಮ 'ಜಗ್ಗುದಾದಾ' ಸಿನಿಮಾದಲ್ಲಿ ಖಳನಟರನ್ನ ಹೇಗೆ ಹಾಡಿ ಹೊಗಳಿದ್ದಾರೋ ನೋಡೋಣ....

English summary
Kannada Actor Darshan and Srujan Lokesh has paid tribute to Late Kannada Villains in Kannada Movie 'Jaggu Dada'. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada