»   » ಮುಂಬೈನಲ್ಲಿ 'ಜಗ್ಗು ದಾದಾ' ದರ್ಶನ್ ಜೊತೆ ಸೃಜ ಮಜಾ

ಮುಂಬೈನಲ್ಲಿ 'ಜಗ್ಗು ದಾದಾ' ದರ್ಶನ್ ಜೊತೆ ಸೃಜ ಮಜಾ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಹೊಚ್ಚ ಹೊಸ ಚಲನಚಿತ್ರ 'ಜಗ್ಗು ದಾದಾ'. ಈ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆದಿದೆ.

ಎರಡು ವಾರಗಳ ಕಾಲ ಮುಂಬೈನಲ್ಲಿ ನಡೆದ ಚಿತ್ರೀಕರಣದಲ್ಲಿ ದರ್ಶನ್ ಜೊತೆ ಮಜಾ ಸ್ಟಾರ್ ಸೃಜನ್ ಲೋಕೇಶ್ ಕೂಡ ಭಾಗವಹಿಸಿದ್ದಾರೆ. 'ಜಗ್ಗು ದಾದಾ' ಅಡ್ಡದಿಂದ ಬಂದಿರುವ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ.

jaggu dada

'ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ಜೊತೆ ಸೃಜನ್ ಲೋಕೇಶ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ದರ್ಶನ್ ಗೆ ಆಪ್ತರಾಗಿರುವ ಸೃಜನ್ ಲೋಕೇಶ್, ದರ್ಶನ್ ಜೊತೆ 'ಪೊರ್ಕಿ', 'ನವಗ್ರಹ' ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದರು. ಇದೀಗ ಇಬ್ಬರ ಕಾಂಬಿನೇಷನ್ 'ಜಗ್ಗು ದಾದಾ' ಚಿತ್ರದಲ್ಲೂ ಮುಂದುವರಿದಿದೆ. [ದರ್ಶನ್ ಗೆ ಜೋಡಿಯಾದ ಮಿರ್ಚಿ 'ಮೆಣಸಿನಕಾಯಿ' ದೀಕ್ಷಾ]

ಟಾಲಿವುಡ್ ನಟಿ ದೀಕ್ಷಾ ಸೇಠ್ 'ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ. ಕಂಪ್ಲೀಟ್ ಕಾಮಿಡಿ ಎಂಟರ್ ಟೈನರ್ ಆಗಲಿರುವ ಈ ಚಿತ್ರಕ್ಕೆ ರಾಘವೇಂದ್ರ ಹೆಗಡೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಶೂಟಿಂಗ್ ನಲ್ಲಿ 'ಜಗ್ಗು ದಾದಾ' ಬಿಜಿಯಾಗಿದ್ದಾನೆ.

English summary
Kannada Actor Darshan spotted with Srujan Lokesh on the sets of Kannada Film 'Jaggu Dada' in Mumbai. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada