For Quick Alerts
  ALLOW NOTIFICATIONS  
  For Daily Alerts

  'ಬಹದ್ದೂರ್' ಧ್ರುವ ಸರ್ಜಾ ಗಡ್ಡ ಬಿಟ್ಟಿರುವುದರ ಹಿಂದಿನ ಗುಟ್ಟೇನು.?

  By Harshitha
  |
  ಧ್ರುವಾ ಸರ್ಜಾ ಲುಕ್ ನೋಡಿದ್ರೆ ಯಶ್ ನೆನಪಾಗುತ್ತೆ..! | Filmibeat Kannada

  'ಕೆ.ಜಿ.ಎಫ್' ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಗಡ್ಡ ಬಿಟ್ಟಿರೋದು ನಿಮಗೆಲ್ಲಾ ಗೊತ್ತೇ ಇದೆ. ಯಾವುದೇ ಸಮಾರಂಭ ಇದ್ದರೂ, ಗಡ್ಡಧಾರಿಯಾಗಿಯೇ ಯಶ್ ಎಂಟ್ರಿಕೊಡ್ತಾರೆ. ಈಗ್ನೋಡಿದ್ರೆ, ಯಶ್ ಹಾಗೇ ಧ್ರುವ ಸರ್ಜಾ ಕೂಡ ಗಡ್ಡ ಬಿಟ್ಟಿದ್ದಾರೆ.

  ಅಷ್ಟಾಗಿ ಎಲ್ಲೂ ಹೊರಗೆ ಕಾಣಿಸಿಕೊಳ್ಳದ ಧ್ರುವ ಸರ್ಜಾ, ಇತ್ತೀಚೆಗಷ್ಟೇ ಕಾರಿನಲ್ಲಿ ತೆರಳುತ್ತಿದ್ದಾಗ, ಅಭಿಮಾನಿಯೊಬ್ಬರು ಕ್ಲಿಕ್ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾಕಂದ್ರೆ, ಆ ಫೋಟೋದಲ್ಲಿ ಧ್ರುವ ಸರ್ಜಾ ಗಡ್ಡ ಬಿಟ್ಟಿದ್ದಾರೆ.

  ಅಷ್ಟಕ್ಕೂ, ಧ್ರುವ ಸರ್ಜಾ ಗಡ್ಡ ಬಿಟ್ಟಿರೋದು 'ಪೊಗರು' ಚಿತ್ರಕ್ಕಾಗಿ ಅಂತ ಹೇಳಲಾಗುತ್ತಿದೆ. 'ಪೊಗರು' ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿ ಧ್ರುವ ಸರ್ಜಾ ಮಿಂಚಲಿದ್ದಾರೆ. ಅದರಲ್ಲಿ ಒಂದು ಶೇಡ್ ಈ 'ಗಡ್ಡಧಾರಿ' ಲುಕ್ ಅಂತೆ.

  ಗಡ್ಡ ಬಿಟ್ಟಿರುವ ಧ್ರುವ ಸರ್ಜಾ ಹೇಗೆ ಕಾಣ್ತಾರೆ.? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆ ಫೋಟೋ ಯಾವುದು.? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

  ಇದೇ ನೋಡಿ 'ಆ' ಫೋಟೋ

  ಇದೇ ನೋಡಿ 'ಆ' ಫೋಟೋ

  'ಪೊಗರು' ಚಿತ್ರಕ್ಕಾಗಿ ಧ್ರುವ ಸರ್ಜಾ ತಾಳಿರುವ ಹೊಸ ಅವತಾರ ಇದು. ಗಡ್ಡ ಬಿಟ್ಟಿರುವ ಧ್ರುವ ಸರ್ಜಾ ಈ ಫೋಟೋದಲ್ಲಿ ಹೇಗೆ ಕಾಣ್ತಾರೆ.? ನೀವೇ ಕಾಮೆಂಟ್ ಮಾಡಿ...

  ಧ್ರುವ ಸರ್ಜಾಗೆ ಸಿಕ್ಕರು ಖಡಕ್ ಖಳನಾಯಕ.! ಧ್ರುವ ಸರ್ಜಾಗೆ ಸಿಕ್ಕರು ಖಡಕ್ ಖಳನಾಯಕ.!

  'ಪೊಗರು'ಗಾಗಿ ಹೊಸ ಪ್ರಯೋಗ

  'ಪೊಗರು'ಗಾಗಿ ಹೊಸ ಪ್ರಯೋಗ

  'ಪೊಗರು' ಚಿತ್ರಕ್ಕಾಗಿ ನಟ ಧ್ರುವ ಸರ್ಜಾ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಧ್ರುವ ಸರ್ಜಾ, 30 ಕೆ.ಜಿ ತೂಕ ಇಳಿಸಿಕೊಂಡಿದ್ದರು. ಒಂದು ತಿಂಗಳ ಕಾಲ ಕಠಿಣ ಡಯೆಟ್ ಅನುಸರಿಸಿ, ಬರೀ ಲಕ್ವಿಡ್ ಫುಡ್ ಮಾತ್ರ ಸೇವಿಸಿ ಧ್ರುವ ಸರ್ಜಾ 'ಪೊಗರು' ಚಿತ್ರಕ್ಕೋಸ್ಕರ 30 ಕೆ.ಜಿ ಕಮ್ಮಿ ಆಗಿದ್ದರು.

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.? ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.?

  30 ಕೆ.ಜಿ ಕಮ್ಮಿ ಆಗಿದ್ಯಾಕೆ.?

  30 ಕೆ.ಜಿ ಕಮ್ಮಿ ಆಗಿದ್ಯಾಕೆ.?

  'ಪೊಗರು' ಸಿನಿಮಾದಲ್ಲಿ ನಾಯಕನ ಶಾಲೆಯ ಸನ್ನಿವೇಶ ಇದೆ. 9 ನೇ ಕ್ಲಾಸ್ ಓದುವ ಹುಡುಗನಾಗಿ ಧ್ರುವ ಸರ್ಜಾ ಕಾಣಿಸಬೇಕು. ಹೀಗಾಗಿ, 30 ಕೆ.ಜಿ ಕಮ್ಮಿ ಆಗಲು ಧ್ರುವ ಸರ್ಜಾ ಮನಸ್ಸು ಮಾಡಿದರು.

  ಧ್ರುವ ಸರ್ಜಾ ಆಟೋ ಓಡಿಸಲು ಸೃಜನ್ ಲೋಕೇಶ್ ಕಾರಣ.!ಧ್ರುವ ಸರ್ಜಾ ಆಟೋ ಓಡಿಸಲು ಸೃಜನ್ ಲೋಕೇಶ್ ಕಾರಣ.!

  ಮತ್ತೆ ಬಾಡಿ ಬಿಲ್ಡ್ ಮಾಡಿರುವ ಧ್ರುವ ಸರ್ಜಾ

  ಮತ್ತೆ ಬಾಡಿ ಬಿಲ್ಡ್ ಮಾಡಿರುವ ಧ್ರುವ ಸರ್ಜಾ

  30 ಕೆ.ಜಿ ತೂಕ ಇಳಿಸಿದ್ಮೇಲೆ, ಶಾಲೆಯ ಸನ್ನಿವೇಶಗಳ ಚಿತ್ರೀಕರಣ ಮಾಡಲಾಗಿದೆ. ಅದು ಮುಗಿದ ಬಳಿಕ ಮತ್ತೆ ಬಾಡಿ ಬಿಲ್ಡ್ ಮಾಡಿದ್ದಾರೆ ಧ್ರುವ ಸರ್ಜಾ. ಇದರೊಂದಿಗೆ ಗಡ್ಡ ಕೂಡ ಬಿಟ್ಟಿದ್ದಾರೆ. ಜೊತೆಗೆ ಮಲ್ಲಗಂಬ ಪ್ರದರ್ಶನ ಮಾಡಿದ್ದಾರೆ. 'ಪೊಗರು'ಗಾಗಿ ಇಷ್ಟೆಲ್ಲಾ ಮಾಡಿರುವ ಧ್ರುವ ಸರ್ಜಾಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಅಂದ್ಹಾಗೆ, 'ಪೊಗರು' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

  English summary
  Kannada Actor Dhruva Sarja's beard look for 'Pogaru'. Have a look at the picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X