»   » 'ರಾಜಕುಮಾರ' ನಿರ್ದೇಶಕರಿಗಿದು ಬೆಲೆಕಟ್ಟಲಾಗದ ಭಾವಚಿತ್ರ.!

'ರಾಜಕುಮಾರ' ನಿರ್ದೇಶಕರಿಗಿದು ಬೆಲೆಕಟ್ಟಲಾಗದ ಭಾವಚಿತ್ರ.!

Posted By:
Subscribe to Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ 'ರಾಜಕುಮಾರ'.... ಎರಡು ಬ್ಲಾಕ್ ಬಸ್ಟರ್ ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ ಪ್ರತಿಭಾವಂತ ನಿರ್ದೇಶಕ ಸಂತೋಷ್ ಆನಂದ್ ರಾಮ್.

ಇಂತಿಪ್ಪ ಸಂತೋಷ್ ಆನಂದ್ ರಾಮ್ ರವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಫೂರ್ತಿ ಅಂತೆ.!

in-pic-director-santhosh-ananddram-s-priceless-moment

''ನೀವಿಬ್ಬರೂ ನನಗೆ ಸ್ಫೂರ್ತಿ. ನಿಮ್ಮಿಬ್ಬರನ್ನ ನಾನು ಈ ಜೀವನದಲ್ಲಿ ಪಡೆದಿರುವುದೇ ನನ್ನ ಭಾಗ್ಯ. ಇದು ಬೆಲೆಕಟ್ಟಲಾಗದ ಭಾವಚಿತ್ರ'' ಎಂದು ಶಿವಣ್ಣ ಹಾಗೂ ಅಪ್ಪು ಜೊತೆಗೆ ಕ್ಲಿಕ್ ಮಾಡಿಕೊಂಡಿದ್ದ ಸೆಲ್ಫಿ ಸಮೇತ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

ಅಷ್ಟಕ್ಕೂ, 'ರಾಜಕುಮಾರ' ಸಿನಿಮಾದ ಶತದಿನೋತ್ಸವ ಸಂಭ್ರಮದಲ್ಲಿ ಕ್ಲಿಕ್ ಆಗಿರುವ ಸೆಲ್ಫಿ ಇದು.

ಅಪ್ಪು ಜೊತೆಗೆ 'ರಾಜಕುಮಾರ' ಸಿನಿಮಾ ಮಾಡಿದ ಸಂತೋಷ್ ಆನಂದ್ ರಾಮ್, ಶಿವರಾಜ್ ಕುಮಾರ್ ಜೊತೆಗೆ 'ರಣರಂಗ' ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಓಡಾಡುತ್ತಿದೆ.

English summary
Director Santhosh Ananddram's priceless moment with Shiva Rajkumar and Puneeth Rajkumar. Take a look at the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada