»   » ಬಿಸಿ ಬಿಸಿ 'ನೀರ್ ದೋಸೆ'ಗೆ ಮಸಾಲೆ ಹಾಕಿದ ಹರಿಪ್ರಿಯಾ

ಬಿಸಿ ಬಿಸಿ 'ನೀರ್ ದೋಸೆ'ಗೆ ಮಸಾಲೆ ಹಾಕಿದ ಹರಿಪ್ರಿಯಾ

Posted By:
Subscribe to Filmibeat Kannada

ಅಂತೂ 'ನೀರು ದೋಸೆ' ಚಿತ್ರಕ್ಕೆ ಮರುಜೀವ ಸಿಕ್ಕಿದೆ. ವರ್ಷಗಳಿಂದ ನಿಂತಲ್ಲೇ ನಿಂತಿದ್ದ 'ನೀರು ದೋಸೆ' ಪ್ರಾಜೆಕ್ಟ್ ಗೆ ಹರಿಪ್ರಿಯಾ ಹೊಸ ಕಳೆ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಿಟ್ಟು ಹೋಗಿದ್ದ 'ನೀರು ದೋಸೆ'ಗೆ ಮಿರ್ಚಿ ಮಸಾಲೆ ಅರೆಯುವುದಕ್ಕೆ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದಾಗಿದೆ. ಇತ್ತೀಚೆಗಷ್ಟೆ 'ನೀರ್ ದೋಸೆ' ಚಿತ್ರದ ಫೋಟೋ ಶೂಟ್ ನಲ್ಲಿ ಭಾಗವಹಿಸಿದ ಹರಿಪ್ರಿಯಾ ಸಖತ್ ಹಾಟ್ ಆಗಿ ಕ್ಯಾಮರಾ ಕಣ್ಣುಗಳಿಗೆ ಸಿಕ್ಕಿಬಿದ್ದರು. [ನೀರ್ ದೋಸೆನಾ ಇಲ್ಲಾ ಬೆಣ್ಣೆ (ಮಸಾಲೆ) ದೋಸೇನಾ?]

ಮೊಟ್ಟ ಮೊದಲ ಬಾರಿಗೆ ಕ್ಲಬ್ ಡ್ಯಾನ್ಸರ್ ಕಮ್ ಕಾಲ್ ಗರ್ಲ್ ಪಾತ್ರ ಮಾಡುತ್ತಿರುವ ಹರಿಪ್ರಿಯಾ 'ನೀರ್ ದೋಸೆ' ಚಿತ್ರದಲ್ಲಿ ಹೇಗೆ ಮಿಂಚಬಹುದು ಅನ್ನೋ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ....

haripriya

ಹೌದು, ಪಡ್ಡೆಗಳ ನಿದ್ದೆಗೆಡಿಸುವ ಮಟ್ಟಕ್ಕೆ ಕಾಲ್ ಗರ್ಲ್ ಕುಮುದಾ ಆಗಿ 'ನೀರ್ ದೋಸೆ' ಚಿತ್ರದ ಫೋಟೋಶೂಟ್ ನಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿರುವುದು ಹೀಗೆ. [ನೀರ್ ದೋಸೆಗೆ ತುಂಬಿದ ತೊಂಡೆ ಹಣ್ಣಿನಂತಿರುವ ಹರಿಪ್ರಿಯಾ?]

In Pic: Haripriya's hot photoshoot for 'Neer Dose'

ಇನ್ನೂ ಇದೇ 'ನೀರ್ ದೋಸೆ'ಗೆ ತುಪ್ಪ ಸುರಿಯೋಕೆ ಸುಮನ್ ರಂಗನಾಥ್ ಕೂಡ ಇದ್ದಾರೆ. ಜಗ್ಗೇಶ್ ಮತ್ತು ದತ್ತಣ್ಣ ಮುಖ್ಯ ಭೂಮಿಕೆಯಲ್ಲಿರುವ 'ನೀರ್ ದೋಸೆ' ಚಿತ್ರಕ್ಕೆ ವಿಜಯ್ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವರ್ಷದಿಂದ ನಿಂತಿದ್ದ 'ನೀರ್ ದೋಸೆ' ಚಿತ್ರೀಕರಣಕ್ಕೆ ಇದೀಗ ಮತ್ತೆ ಚಾಲನೆ ಸಿಕ್ಕಿದೆ.

English summary
Kannada Actress Haripriya has replaced Ramya in Kannada Movie 'Neer Dose'. Here is a hot picture of Haripriya in the latest Photoshoot of 'Neer Dose'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada