»   » ಉಪ್ಪಿಗಿಂತ ರುಚಿ ಬೇರೆ ಇಲ್ಲ! ಯಾಕೆ ಗೊತ್ತಾ?

ಉಪ್ಪಿಗಿಂತ ರುಚಿ ಬೇರೆ ಇಲ್ಲ! ಯಾಕೆ ಗೊತ್ತಾ?

Posted By:
Subscribe to Filmibeat Kannada

'ಉಪ್ಪಿಗಿಂತ ರುಚಿ ಬೇರೆ ಇಲ್ಲ' ಅಂತ ಗಾದೆ ಇದೆ. ಇದು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹೇಳಿ ಮಾಡಿಸಿದ್ದು ಅಂತ ಅಭಿಮಾನಿಗಳಿಗೆ ಗೊತ್ತಾಗಿದ್ದು, 'ಉಪೇಂದ್ರ' ಚಿತ್ರದಿಂದ.

'ಉಪ್ಪಿಗಿಂತ ರುಚಿ ಬೇರೆ ಇಲ್ಲ' ಅಂತ ಹಾಡನ್ನ ಬೇರೆ ಬರೆದಿರುವ ಉಪ್ಪಿ, ಎಲ್ಲದರಲ್ಲೂ ಡಿಫರೆಂಟು. ಸಿನಿಮಾ ಮೇಕಿಂಗ್ ಶೈಲಿ, ಕಾನ್ಸೆಪ್ಟ್ ನಿಂದ ಹಿಡಿದು ಕಾಸ್ಟ್ಯೂಮ್ಸ್ ವರೆಗೂ ಉಪ್ಪಿಯನ್ನ ಮೀರಿಸುವವರು ಯಾರೂ ಇಲ್ಲ. [ಟ್ರೆಂಡ್ ಸೆಟ್ಟರ್ ಉಪೇಂದ್ರ ನಿರ್ದೇಶನದ 'ಉಪ್ಪಿ2' ಆಡಿಯೋ ವಿಮರ್ಶೆ]


ಯಾಕಂದ್ರೆ, ಉಪ್ಪಿ ತರಹ ಕಾಸ್ಟ್ಯೂಮ್ ಡಿಸೈನಿಂಗ್ ಯಾರಿಗೂ ಬರಲ್ಲ. ಎಂ.ಟಿ.ವಿ, ವಿ ಚಾನೆಲ್ ಗಳನ್ನೇ ಸೈಡ್ ಗೆ ತಳ್ಳಿ 'ಉಪೇಂದ್ರ' ಚಿತ್ರದಲ್ಲಿ ತಮ್ಮದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿದ್ದ ಉಪ್ಪಿ, ಈಗ ಉಪ್ಪಿ-2 ಚಿತ್ರದಲ್ಲೂ ಭಿನ್ನ-ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಒಂದು ಝಲಕ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸಿಕ್ಕಿದೆ.


In Pic; Kannada Actor Upendra's special costume for Uppi-2

ಉಪೇಂದ್ರ ಅವರ ಈ ಅವತಾರ ನೋಡಿದ ತಕ್ಷಣ ನಿಮಗೆ 'ಉಪೇಂದ್ರ' ಸಿನಿಮಾ ನೆನಪಿಗೆ ಬರಬಹುದು. ಎಷ್ಟೇ ಆಗಲಿ, ಇದು 'ಉಪ್ಪಿ-2' ಅಲ್ವಾ? ಕೊರಳಲ್ಲಿ ರುದ್ರಾಕ್ಷಿ ಸೇರಿದಂತೆ ತರಹೇವಾರಿ ಮಣಿಹಾರ. ಕಣ್ಣಿಗೆ ಕೂಲಿಂಗ್ ಗ್ಲಾಸ್. ಪುಟಾಣಿ ಮಕ್ಕಳ ತರಹ ಹೇರ್ ಸ್ಟೈಲ್ ತೊಟ್ಟಿರುವ ಉಪೇಂದ್ರ ಹಿಮಾಲಯದಲ್ಲಿ ಕಾಣಿಸಿಕೊಂಡಿದ್ದು ಹೀಗೆ.


ಇಂತಹ ಹಲವಾರು ಸ್ಪೆಷಾಲಿಟೀಸ್ 'ಉಪ್ಪಿ-2' ಚಿತ್ರದಲ್ಲಿದೆ. 'ಉಪೇಂದ್ರ' ಚಿತ್ರದಲ್ಲಿ ''ನಾನು..ನಾನು..'' ಅಂತಿದ್ದ ಉಪ್ಪಿ, ಈ ಚಿತ್ರದಲ್ಲಿ ''ನೀನು...ನೀನು..'' ಅಂತಿದ್ದಾರೆ. ['ಉಪ್ಪಿ-2' ಆಡಿಯೋ ರಿಲೀಸ್ ಮಾಡಿದ್ದು ಯಾರು?]


ಸದ್ಯಕ್ಕೆ 'ಉಪ್ಪಿ-2' ಅಡ್ಡದಿಂದ ಸಿಕ್ಕಿರುವ ಖಾಸ್ ಖಬರ್ ಇಷ್ಟು. 'ಉಪ್ಪಿ-2' ಚಿತ್ರದ ಇನ್ನಷ್ಟು ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Actor Upendra is seen in different looks in his upcoming directorial venture 'Uppi-2'. One such look of Upendra has been revealed. Check out the brand new look of Real Star Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada