For Quick Alerts
  ALLOW NOTIFICATIONS  
  For Daily Alerts

  ನಿಶ್ಚಿತಾರ್ಥ ಮಾಡಿಕೊಂಡು 2 ವರ್ಷ: ರಾಧಿಕಾ-ಯಶ್ ಬಾಳಲ್ಲಿ ಈಗ ಹರುಷ.!

  By Harshitha
  |
  ಆಗಸ್ಟ್ 12 ಅಂದ್ರೆ ಯಶ್-ರಾಧಿಕಾಗೆ ಭಾರೀ ಪ್ರೀತಿ..! | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಬಾಳಲ್ಲಿ ಸದ್ಯ ಸಡಗರ, ಸಂಭ್ರಮ ಮನೆ ಮಾಡಿದೆ. 2016 ರಲ್ಲಿ ಡಿಸೆಂಬರ್ ತಿಂಗಳಲ್ಲಿ ಮದುವೆ ಆಗಿದ್ದ ಯಶ್-ರಾಧಿಕಾ ಪಂಡಿತ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  ಮದುವೆ ಆದ ಒಂದುವರೆ ವರ್ಷದಲ್ಲಿ ಯಶ್-ರಾಧಿಕಾ ದಂಪತಿ ಸಿಹಿ ಸುದ್ದಿ ಕೊಟ್ಟಿದ್ದಾರೆ. 'ನಾವೀಗ ಮೂವರು' ಎನ್ನುವ ಮೂಲಕ ನಟಿ ರಾಧಿಕಾ ಪಂಡಿತ್ ಸಂತಸದ ವಿಷಯವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

  ಇನ್ನೂ ನಟ ಯಶ್ ಕೂಡ YGF (Yash Going to be Father) ಎಂಬ ಟೀಸರ್ ಮೂಲಕ ಖುಷಿ ವಿಚಾರವನ್ನ ಬಹಿರಂಗ ಪಡಿಸಿದ್ದರು. ವರದಿಗಳ ಪ್ರಕಾರ, ಈ ವರ್ಷದ ಡಿಸೆಂಬರ್ ಹೊತ್ತಿಗೆ ಯಶ್-ರಾಧಿಕಾ ದಂಪತಿ ತೋಳಲ್ಲಿ ಮುದ್ದಾದ ಕೂಸೊಂದು ನಲಿದಾಡಲಿದೆ. ಮುಂದೆ ಓದಿರಿ....

  ಗರ್ಭವತಿ ರಾಧಿಕಾ ಪಂಡಿತ್

  ಗರ್ಭವತಿ ರಾಧಿಕಾ ಪಂಡಿತ್

  ಸದ್ಯ ಐದು ತಿಂಗಳ ಗರ್ಭಿಣಿ ಆಗಿರುವ ನಟಿ ರಾಧಿಕಾ ಪಂಡಿತ್ ತಮ್ಮ ಫೋಟೋವೊಂದನ್ನ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅದು ತಾವು ನಿಶ್ಚಿತಾರ್ಥ ಮಾಡಿಕೊಂಡು ಎರಡು ವರ್ಷಗಳು ತುಂಬಿದ ಶುಭ ಸಂದರ್ಭದಂದು.!

  ಯಶ್-ರಾಧಿಕಾ ಬಗ್ಗೆ 'ಒಳ್ಳೆ ಹುಡುಗ' ಪ್ರಥಮ್ ಗೊಂದೊಳ್ಳೆ ಆಸೆ ಇದೆ.! ಏನ್ಗೊತ್ತಾ.?ಯಶ್-ರಾಧಿಕಾ ಬಗ್ಗೆ 'ಒಳ್ಳೆ ಹುಡುಗ' ಪ್ರಥಮ್ ಗೊಂದೊಳ್ಳೆ ಆಸೆ ಇದೆ.! ಏನ್ಗೊತ್ತಾ.?

  ಎರಡು ವರ್ಷಗಳ ಹಿಂದೆ ಎಂಗೇಜ್ ಆಗಿದ್ದ ಜೋಡಿ

  ಎರಡು ವರ್ಷಗಳ ಹಿಂದೆ ಎಂಗೇಜ್ ಆಗಿದ್ದ ಜೋಡಿ

  ಹೌದು, ನಿನ್ನೆಗೆ ಸರಿಯಾಗಿ ಎರಡು ವರ್ಷಗಳ ಹಿಂದೆ (ಆಗಸ್ಟ್ 12, 2016) ಗೋವಾದ ರೆಸಾರ್ಟ್ ಒಂದರಲ್ಲಿ ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ರವರ ನಿಶ್ಚಿತಾರ್ಥ ಸಮಾರಂಭ ಗ್ರ್ಯಾಂಡ್ ಆಗಿ ನಡೆದಿತ್ತು. ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಯಶ್-ರಾಧಿಕಾ ಎಂಗೇಜ್ ಮೆಂಟ್ ಗೆ ಸಾಕ್ಷಿ ಆಗಿದ್ದರು.

  'ಅತ್ತೆ' ಆಗುತ್ತಿರುವ ಯಶ್ ತಂಗಿ ನಂದಿನಿ ಸಂತಸಕ್ಕೆ ಪಾರವೇ ಇಲ್ಲ.! 'ಅತ್ತೆ' ಆಗುತ್ತಿರುವ ಯಶ್ ತಂಗಿ ನಂದಿನಿ ಸಂತಸಕ್ಕೆ ಪಾರವೇ ಇಲ್ಲ.!

  ರಾಧಿಕಾ ಪೋಸ್ಟ್

  ಎಂಗೇಜ್ ಮೆಂಟ್ ಆನಿವರ್ಸರಿಯ ಖುಷಿಯಲ್ಲಿ ಫೇಸ್ ಬುಕ್ ನಲ್ಲಿ ನಟಿ ರಾಧಿಕಾ ಪಂಡಿತ್ ಬರೆದುಕೊಂಡಿರುವುದು ಹೀಗೆ..

  'KGF' ಕಥೆ ಬಿಟ್ಟಾಕಿ 'YGF' ಆದ ರಾಕಿಂಗ್ ಸ್ಟಾರ್'KGF' ಕಥೆ ಬಿಟ್ಟಾಕಿ 'YGF' ಆದ ರಾಕಿಂಗ್ ಸ್ಟಾರ್

  ತಾಯಿ ಆಗುತ್ತಿರುವ ರಾಧಿಕಾ

  ತಾಯಿ ಆಗುತ್ತಿರುವ ರಾಧಿಕಾ

  ವರ್ಷಗಳ ಕಾಲ ಪ್ರೀತಿಸಿ, ಮನೆಯವರನ್ನ ಒಪ್ಪಿಸಿ, ಮದುವೆ ಆದ ಸ್ಟಾರ್ ಜೋಡಿ ಯಶ್-ರಾಧಿಕಾ ಪಂಡಿತ್. ಮದುವೆ ಆದ್ಮೇಲೆ, ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದಿರುವ ರಾಧಿಕಾ ಪಂಡಿತ್ ಈಗ ತಾಯಿ ಆಗುತ್ತಿದ್ದಾರೆ. ಆದಷ್ಟು ಬೇಗ ಮುದ್ದು ಮಗುವಿಗೆ ರಾಧಿಕಾ ಜನ್ಮ ನೀಡಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.

  English summary
  Kannada Actress Radhika Pandit flaunts her baby bump. Take a look at the picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X