»   » ಅಯ್ಯಯ್ಯೋ...ಪ್ರಿಯಾಮಣಿ ಯಾಕಿಂಗ್ ಆಗ್ಬುಟ್ರು.!?

ಅಯ್ಯಯ್ಯೋ...ಪ್ರಿಯಾಮಣಿ ಯಾಕಿಂಗ್ ಆಗ್ಬುಟ್ರು.!?

Posted By:
Subscribe to Filmibeat Kannada

ನಟಿ ಪ್ರಿಯಾಮಣಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕಾಲಿವುಡ್, ಟಾಲಿವುಡ್, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆ ಗಿಟ್ಟಿಸಿಕೊಂಡಿರುವ ನಟಿ ಪ್ರಿಯಾಮಣಿ ಈಗೇನ್ಮಾಡ್ತಿದ್ದಾರೆ ಅಂತ ಕೇಳಿದ್ರೆ, ನೀವು ಬಾಯಿ ಮೇಲೆ ಬೆರಳಿಡುತ್ತೀರಾ.

ಪ್ರಿಯಾಮಣಿ ಮಾಡಿರುವ ಕೆಲಸವನ್ನ ನಾವು ಹೇಳೋಕ್ಕಿಂತ ಒಮ್ಮೆ ನೀವೇ ನಿಮ್ಮ ಕಣ್ಣಾರೆ ನೋಡಿ ಬಿಡಿ.....

priyamani

ನಿಮ್ಮ ಕಣ್ಣನ್ನ ನೀವೇ ನಂಬಲ್ಲ ಅಂದ್ರೂ ಇದು ಹಂಡ್ರೆಡ್ ಪರ್ಸೆಂಟ್ ನಿಜ. ನಟಿ ಪ್ರಿಯಾಮಣಿ ಕೈಯೆಲ್ಲಾ ಸಗಣಿ ಆಗಿದೆ. ಟಾಪ್ ಟು ಬಾಟಂ ಪಕ್ಕಾ ಲೋಕಲ್ ಹುಡುಗಿಯಾಗಿ ಪ್ರಿಯಾಮಣಿ ಬೆರಣಿ ತಟ್ಟುತ್ತಿದ್ದಾರೆ. [ದನ ಕಾಯೋನ್ಹಿಂದೆ ಹೊರಟ ನಟಿ ಪ್ರಿಯಾಮಣಿ]

ಒಂದು ಕೈಯಲ್ಲಿ ಪೊರಕೆ, ಇನ್ನೊಂದು ಕೈಲಿ ಸಗಣಿ ಹಿಡಿದಿರುವ ಪ್ರಿಯಾಮಣಿಯನ್ನ ನೋಡಿ ಗಾಬರಿ ಆಗಬೇಡಿ. ಇದು ರೀಲ್ ಅವತಾರ ಅಷ್ಟೆ. 'ಕರಿಚಿರತೆ' ದುನಿಯಾ ವಿಜಯ್ 'ದನ ಕಾಯೋನು' ಅಂತ ಸಿನಿಮಾ ಮಾಡುತ್ತಿರುವ ವಿಷಯ ನಿಮಗೆ ನೆನಪಿದೆ ಅಲ್ವಾ.

In Pic : Priyamani look in Duniya Vijay starrer 'Dana Kayonu'

ಅದೇ ಚಿತ್ರದಲ್ಲಿ ಬೆರಣಿ ತಟ್ಟುವ ಕೆಲಸ, ಅಂದ್ರೆ ನಾಯಕಿ ಪಾತ್ರದಲ್ಲಿ ನಟಿ ಪ್ರಿಯಾಮಣಿ ನಟಿಸುತ್ತಿದ್ದಾರೆ. 'ದನ ಕಾಯೋನು' ಚಿತ್ರತಂಡದಿಂದ ಬಂದಿರುವ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. [ಶೀರ್ಷಿಕೆ ವಿವಾದದಲ್ಲಿ ಭಟ್ರ 'ದನ ಕಾಯೋನು']

ದುನಿಯಾ ವಿಜಯ್ ಗೆ ಮೊದಲ ಬಾರಿ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಫೋಟೋ ಮತ್ತು ಟೈಟಲ್ ಕೇಳ್ತಿದ್ದ ಹಾಗೆ, ಇದು ಪಕ್ಕಾ ಕಾಮಿಡಿ ಚಿತ್ರ ಅಂತ ಸ್ಪೆಷಲ್ ಆಗಿ ಹೇಳಬೇಕಿಲ್ಲ. ಮನರಂಜನೆಯ ರಸದೌತಣ ಆಗಲಿರುವ 'ದನ ಕಾಯೋನು' ಸದ್ಯ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾನೆ.

English summary
Actress Priyamani's look in Duniya Vijay starrer 'Dana Kayonu' is revealed. 'Dana Kayonu' is directed by Yogaraj Bhat. Check out Priyamani's look.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada