»   » ಚೆನ್ನೈನಲ್ಲಿ ಬಾಲಿವುಡ್-ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಮಿಲನ.!

ಚೆನ್ನೈನಲ್ಲಿ ಬಾಲಿವುಡ್-ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಮಿಲನ.!

Posted By:
Subscribe to Filmibeat Kannada

ಸಿನಿಮಾ ಜೊತೆ ಜೊತೆಗೆ ಕ್ರೀಡೆ ಕಡೆಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಸಕ್ತಿ ವಹಿಸಿದ್ದಾರೆ. Premier Futsal League ನ ಬೆಂಗಳೂರು ಫ್ರ್ಯಾಂಚೈಸಿ ಪಡೆದಿಕೊಂಡಿರುವ ಪುನೀತ್ ರಾಜ್ ಕುಮಾರ್, ಶೂಟಿಂಗ್ ಗ್ಯಾಪ್ ನಲ್ಲಿ ಆಟದ ಬಗ್ಗೆ ಕೂಡ ಗಮನ ಹರಿಸುತ್ತಿದ್ದಾರೆ.

ಜುಲೈ 15 ರಂದು ಚೆನ್ನೈನಲ್ಲಿ Premier Futsal League ಪ್ರಾರಂಭವಾಯ್ತು. ಅದಕ್ಕಾಗಿ ಮೈಸೂರಿನಿಂದ ಚೆನ್ನೈಗೆ ಹಾರಿದ್ದ ಪುನೀತ್ ರಾಜ್ ಕುಮಾರ್ ಗೆ ಅಲ್ಲಿ ಬಾಲಿವುಡ್ ನ 'ಖತರೋಂಕೆ ಖಿಲಾಡಿ' ಅಕ್ಷಯ್ ಕುಮಾರ್ ಸಿಕ್ಕಿದ್ದಾರೆ.


in-pic-puneeth-rajkumar-meets-akshay-kumar-in-chennai

ಅಸಲಿಗೆ, ಅಕ್ಷಯ್ ಕುಮಾರ್ ಚೆನ್ನೈಗೆ ಆಗಮಿಸಿದ್ದು '2.O' ಚಿತ್ರದ ಶೂಟಿಂಗ್ ಗಾಗಿ.! ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯಿಸುತ್ತಿರುವ '2.O' ಚಿತ್ರದಲ್ಲಿ ಅಕ್ಷಯ್ ಕುಮಾರ್ 'ವಿಲನ್' ಪಾತ್ರ ನಿರ್ವಹಿಸುತ್ತಿದ್ದಾರೆ ಅಂತ ಹೇಳಲಾಗಿದೆ.


ಚಿತ್ರೀಕರಣದಿಂದ ಕೊಂಚ ಬಿಡುವು ಮಾಡಿಕೊಂಡ ಅಕ್ಷಯ್ ಕುಮಾರ್, ಪುನೀತ್ ಜೊತೆ ಕೆಲ ಹೊತ್ತು ಮಾತನಾಡಿದರು. ನಂತರ Premier Futsal League ನ ಈವೆಂಟ್ ಮುಗಿಸಿಕೊಂಡು ಅಪ್ಪು 'ರಾಜಕುಮಾರ' ಶೂಟಿಂಗ್ ಗಾಗಿ ಮೈಸೂರಿಗೆ ಹಾರಿದರು. ಅಲ್ಲಿ ಅವರಿಗೆ ಮತ್ತೊಂದು ಸರ್ ಪ್ರೈಸ್ ಕಾದಿತ್ತು. [ಪುನೀತ್ ರಾಜ್ ಕುಮಾರ್ ಗೆ ಕಿಚ್ಚ ಸುದೀಪ್ ಸರ್ ಪ್ರೈಸ್ ಕೊಟ್ಟಾಗ...]

English summary
Kannada Actor Puneeth Rajkumar met Bollywood Actor Akshay Kumar in Chennai. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada