»   » ಅಯ್ಯೋ ಶಿವಾ..! ರಾಗಿಣಿಗೆ ಇದ್ದಕ್ಕಿದ್ದಂತೆ ಏನಾಯ್ತಪ್ಪಾ.?

ಅಯ್ಯೋ ಶಿವಾ..! ರಾಗಿಣಿಗೆ ಇದ್ದಕ್ಕಿದ್ದಂತೆ ಏನಾಯ್ತಪ್ಪಾ.?

Posted By:
Subscribe to Filmibeat Kannada

ಶೀರ್ಷಿಕೆ ಓದಿ ಕಕ್ಕಾಬಿಕ್ಕಿ ಆಗುವ ಮುನ್ನ ಕೆಳಗಿರುವ ಫೋಟೋನ ಒಮ್ಮೆ ನೋಡಿ....

ನಂಬುವುದಕ್ಕೆ ಕೊಂಚ ಕಷ್ಟವಾದರೂ, ಫೋಟೋದಲ್ಲಿರುವವರು ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿನೇ.! ಕೆದರಿದ ಕೂದಲು, ತುಟಿಗೆ ಕಪ್ಪು ಬಣ್ಣ, ಕಪ್ಪು ಉಡುಪು ಧರಿಸಿ ರಾಗಿಣಿ ದ್ವಿವೇದಿ ಭಯಾನಕ ಅವತಾರ ತಾಳಿದ್ದಾರೆ.

In pic; Ragini Dwivedi's new look for 'Huli Devara Kadu'

ಅಷ್ಟಕ್ಕೂ ರಾಗಿಣಿ ಈ ಭಯಾನಕ ಅವತಾರ ತಾಳಿರುವುದು 'ಹುಲಿ ದೇವರ ಕಾಡು' ಚಿತ್ರಕ್ಕಾಗಿ. ಸೈಕೋಲಾಜಿಕಲ್ ಥ್ರಿಲ್ಲರ್ 'ಹುಲಿ ದೇವರ ಕಾಡು' ಚಿತ್ರದಲ್ಲಿ ರಾಗಿಣಿ ದ್ವಿವೇದಿ ಸೈಕೋ ಪಾತ್ರಧಾರಿ. ಅದಕ್ಕೆ ಈ ಗೆಟಪ್.! [ರಾಗಿಣಿ 'ಪರಪಂಚ'ದೊಳ್ ಏನೇನೈತಿ?]

''ಹುಲಿ ದೇವರ ಕಾಡು' ಚಿತ್ರವನ್ನ ನಾನು ಒಪ್ಪಿಕೊಳ್ಳುವುದಕ್ಕೆ ಕಾರಣ ಚಿತ್ರದ ಸ್ಕ್ರಿಪ್ಟ್. ಪ್ರೇಕ್ಷಕರನ್ನ ಈ ಚಿತ್ರ ಸೀಟಿನ ತುದಿಗೆ ಕೂರಿಸುತ್ತೆ. ತುಂಬಾ ಟ್ವಿಸ್ಟ್ ಅಂಡ್ ಟರ್ನ್ ಇದೆ. ನನ್ನ ಪಾತ್ರ ತುಂಬಾ ವಿಭಿನ್ನವಾಗಿದೆ'' ಅಂತ 'ಫಿಲ್ಮಿಬೀಟ್' ಜೊತೆ ಚಿತ್ರದ ಬಗ್ಗೆ ರಾಗಿಣಿ ದ್ವಿವೇದಿ ಮಾತನಾಡಿದರು.

ಇತ್ತೀಚೆಗಷ್ಟೇ ಹಾಡುಗಳ ರೆಕಾರ್ಡಿಂಗ್ ಮುಗಿಸಿದ 'ಹುಲಿ ದೇವರ ಕಾಡು' ಚಿತ್ರೀಕರಣ ಶುರುವಾಗಬೇಕಿದೆ. ಜಿತೇಂದ್ರ ಜೋ ಸೈಮನ್ ಚಿತ್ರದ ನಿರ್ದೇಶಕ.

English summary
Kannada Actress Ragini Dwivedi is playing psyche in Kannada Movie 'Huli Devara Kadu'. Check out Ragini Dwivedi's new look for 'Huli Devara Kadu'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada