»   » 'ಕುರುಕ್ಷೇತ್ರ'ದಿಂದ ಹೊರಬಿದ್ದಿರುವ ಎಕ್ಸ್ ಕ್ಲೂಸಿವ್ ಫೋಟೋ ಇದು!

'ಕುರುಕ್ಷೇತ್ರ'ದಿಂದ ಹೊರಬಿದ್ದಿರುವ ಎಕ್ಸ್ ಕ್ಲೂಸಿವ್ ಫೋಟೋ ಇದು!

Posted By:
Subscribe to Filmibeat Kannada
'ಕುರುಕ್ಷೇತ್ರ'ದಿಂದ ಹೊರಬಿದ್ದಿರುವ ಎಕ್ಸ್ ಕ್ಲೂಸಿವ್ ಫೋಟೋ ಇದು! | Filmibeat Kannada

ಸ್ಯಾಂಡಲ್ ವುಡ್ ಇತಿಹಾಸದಲ್ಲಿಯೇ ಅತಿ ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಆಗಿರುವ ಸಿನಿಮಾ 'ಕುರುಕ್ಷೇತ್ರ'. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಈ 'ಕುರುಕ್ಷೇತ್ರ'. 'ನಾ ಭೂತೋ ನಾ ಭವಿಷ್ಯತಿ' ಎನ್ನುವ ಹಾಗೆ ಚಿತ್ರೀಕರಣಗೊಂಡಿರುವ 'ಕುರುಕ್ಷೇತ್ರ' ಇದೀಗ ಡಬ್ಬಿಂಗ್ ಹಂತ ತಲುಪಿದೆ.

3D ತಂತ್ರಜ್ಞಾನದಲ್ಲಿ ರೆಡಿ ಆಗಿರುವ 'ಕುರುಕ್ಷೇತ್ರ' ಚಿತ್ರದ ಅಡ್ಡದಿಂದ ಒಂದು ಹೊಸ ಫೋಟೋ ಲೀಕ್ ಆಗಿದೆ. ಆ ಫೋಟೋ ಇದೇ ನೋಡಿ...

'ಕುರುಕ್ಷೇತ್ರ'ದಿಂದ ಹೊರಬಿದ್ದಿರುವ ಲೇಟೆಸ್ಟ್ ಫೋಟೋದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಟಿ ಸ್ನೇಹಾ, ಪವಿತ್ರ ಲೋಕೇಶ್ ಇದ್ದಾರೆ.

In pic: Ravichandran, Bharathi Vishnuvardhan and Sneha at Kurukshetra shooting

'ಕೃಷ್ಣ'ನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ...

ಶ್ರೀಕೃಷ್ಣನ ಪಾತ್ರಕ್ಕಾಗಿ ವಿ.ರವಿಚಂದ್ರನ್ ಬಣ್ಣ ಹಚ್ಚಿದ್ದರೆ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕುಂತಿ ಆಗಿದ್ದಾರೆ. ಇನ್ನೂ ನಟಿ ಸ್ನೇಹಾ 'ಕುರುಕ್ಷೇತ್ರ' ಚಿತ್ರದಲ್ಲಿ ದ್ರೌಪದಿ ಪಾತ್ರ ನಿರ್ವಹಿಸಿದ್ದಾರೆ.

ನಾಗಣ್ಣ ನಿರ್ದೇಶನದ 'ಕುರುಕ್ಷೇತ್ರ' ಚಿತ್ರಕ್ಕೆ ಕಳೆದ ಜನವರಿ ತಿಂಗಳಲ್ಲೇ ಕುಂಬಳಕಾಯಿ ಹೊಡೆಯಲಾಯಿತು. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ಕುರುಕ್ಷೇತ್ರ' ಅಡ್ಡದಿಂದ ಈ ಫೋಟೋ ಲೀಕ್ ಆಗಿದೆ. ಸಿನಿಮಾದಲ್ಲಿ ಗ್ರಾಫಿಕ್ಸ್ ಬಳಕೆ ಕೊಂಚ ಹೆಚ್ಚಿರುವುದರಿಂದ, 'ಕುರುಕ್ಷೇತ್ರ' ಬಿಡುಗಡೆ ಆಗಲು ಇನ್ನೂ ಟೈಮ್ ಬೇಕು.

English summary
Check out the picture of V.Ravichandran, Bharathi Vishnuvardhan and Sneha at Kannada Movie 'Kurukshetra' shooting set.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X