»   » 'ಇವರು' ಯಾರು? ಫೋಟೋದಲ್ಲಿ ಎಲ್ಲಿದ್ದಾರೆ? ಥಟ್ ಅಂತ ಗುರುತಿಸಿ.!

'ಇವರು' ಯಾರು? ಫೋಟೋದಲ್ಲಿ ಎಲ್ಲಿದ್ದಾರೆ? ಥಟ್ ಅಂತ ಗುರುತಿಸಿ.!

Posted By:
Subscribe to Filmibeat Kannada

ಪ್ರವಾಸಿಗರ ನೆಚ್ಚಿನ ತಾಣ ಬ್ಯಾಂಕಾಕ್ ಸುತ್ತಿ ಬಂದವರಿಗೆ ಈ ಫೋಟೋ ನೋಡಿದ ತಕ್ಷಣ ಇದು 'ಬ್ಯಾಂಕಾಕ್' ನಲ್ಲಿ ಕ್ಲಿಕ್ಕಿಸಿರುವುದು ಅಂತ ಸುಲಭವಾಗಿ ಹೇಳಿಬಿಡಬಹುದು. ಆದ್ರೆ, ಬ್ಯಾಂಕಾಕ್ ಬೀದಿಯಲ್ಲಿ ನಿಂತಿರುವ ಈ ಗ್ಯಾಂಗ್ ನಲ್ಲಿ ಒಬ್ಬರು 'ಸೂಪರ್ ಸ್ಟಾರ್' ಇದ್ದಾರೆ. ಅವರು ಯಾರು ಅಂತ ಗುರುತಿಸಿ ಹೇಳಿ ನೋಡೋಣ...

ಯಾರು ಅಂತ ಗೊತ್ತಾಗ್ಲಿಲ್ವಾ? ಒಮ್ಮೆ ಕಣ್ಣುಜ್ಜಿಕೊಂಡು, ಬಲಗಡೆ ಇಂದ ನಾಲ್ಕನೇಯವರತ್ತ ಕಣ್ಣಾಡಿಸಿ...

in-pic-shiva-rajkumar-in-bangkok-during-his-teenage

ಈಗ ಗೊತ್ತಾಯ್ತಾ? ನಾವು ಮಾತನಾಡುತ್ತಿರುವುದು 'ನಾಟ್ಯ ಸಾರ್ವಭೌಮ' ಶಿವರಾಜ್ ಕುಮಾರ್ ಬಗ್ಗೆ ಅಂತ..! [ಚಿತ್ರಗಳು : ಬಸವಣ್ಣಗೆ ನಮಿಸಿದ ಶಿವಣ್ಣಗೆ ಲಂಡನ್ನಿನಲ್ಲಿ ಸನ್ಮಾನ]

ಹೌದು, ತಮ್ಮ ಕಾಲೇಜ್ ಫ್ರೆಂಡ್ಸ್ ಜೊತೆ ನಟ ಶಿವರಾಜ್ ಕುಮಾರ್ ಬ್ಯಾಂಕಾಕ್ ಗೆ ಹೋಗಿದ್ದಾಗ, ಕ್ಲಿಕ್ ಆಗಿರುವ ಫೋಟೋ ಇದು.

ಶಿವರಾಜ್ ಕುಮಾರ್ ರವರ ಬ್ಯಾಂಕಾಕ್ ಟ್ರಿಪ್ ಕುರಿತು ಒಂದು ಸಂಗತಿ ಹೇಳ್ತೀವಿ ಕೇಳಿ....

ಹೇಳಿಕೇಳಿ ಉತ್ತಮ ವಿನ್ಯಾಸ ಇರುವ ಉಡುಗೆಗಳಿಗೆ ಬ್ಯಾಂಕಾಕ್ ಜನಪ್ರಿಯ. ಇದನ್ನು ತಿಳಿದುಕೊಂಡಿದ್ದ ಶಿವಣ್ಣ, ಆಗಿನ ಕಾಲಕ್ಕೆ 500 ಡಾಲರ್ ತೆಗೆದುಕೊಂಡು ಬ್ಯಾಂಕಾಕ್ ಗೆ ಹೋಗಿ, ಎರಡು ಸೂಟ್ ಕೇಸ್ ನಷ್ಟು ಬಟ್ಟೆಗಳನ್ನ ಖರೀದಿ ಮಾಡಿ, ಭಾರತಕ್ಕೆ ವಾಪಸ್ ಆದರಂತೆ. [ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ವಾರ್ಥಿಯಂತೆ.! ಹೌದಾ.?]

ಬ್ಯಾಂಕಾಕ್ ನಿಂದ ತಂದ ಟಿ-ಶರ್ಟ್ ಗಳನ್ನ ತಂದೆ ಡಾ.ರಾಜ್ ಕುಮಾರ್ ಗೆ ಶಿವಣ್ಣ ಗಿಫ್ಟ್ ಮಾಡಿದ್ರಂತೆ. ಮಗ ಪ್ರೀತಿಯಿಂದ ಕೊಟ್ಟ ಟಿ-ಶರ್ಟ್ ಗಳನ್ನ ಅಣ್ಣಾವ್ರು 'ಚಲಿಸುವ ಮೋಡಗಳು' ಚಿತ್ರದಲ್ಲಿ ಧರಿಸಿದ್ರು. ಬೇಕಾದ್ರೆ, 'ಚಲಿಸುವ ಮೋಡಗಳು' ಚಿತ್ರವನ್ನ ಇನ್ನೊಮ್ಮೆ ನೋಡಿ, ನಿಮಗೆ ಗೊತ್ತಾಗುತ್ತೆ ರಾಜ್ ರವರ ಡ್ರೆಸ್ಸಿಂಗ್ ಸ್ಟೈಲ್ ಹೇಗಿತ್ತು ಅಂತ.!

English summary
Here is a picture of Kannada Actor Shiva Rajkumar, which was clicked in Bangkok during his teenage. Check out the photo and interesting news related to it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada